* ವಿಶ್ವ ಪೋಲಿಯೊ ದಿನವನ್ನು ವಾರ್ಷಿಕವಾಗಿ ಅಕ್ಟೋಬರ್ 24 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ತಡೆಗಟ್ಟಲು ಎಲ್ಲಾ ಉಪಕ್ರಮಗಳನ್ನು ಬೆಂಬಲಿಸಲು ಈ ದಿನವನ್ನು ಆಚರಿಸಲಾಗುತ್ತದೆ. * ಪ್ರತಿ ಅಕ್ಟೋಬರ್ 24 ರಂದು ವಿಶ್ವ ಪೋಲಿಯೊ ದಿನವು ಪೋಲಿಯೊವನ್ನು ತೊಡೆದುಹಾಕಲು ಜಾಗತಿಕ ಪ್ರಯತ್ನಗಳನ್ನು ಮತ್ತು ರೋಗದಿಂದ ಮಕ್ಕಳನ್ನು ರಕ್ಷಿಸುವಲ್ಲಿ ವ್ಯಾಕ್ಸಿನೇಷನ್ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.* ವಿಜ್ಞಾನಿ ಜೋನಾಸ್ ಸಾಲ್ಕ್ ಮತ್ತು ತಂಡ 1955ರಲ್ಲಿ ಪೋಲಿಯೊ ಲಸಿಕೆ ಕಂಡುಹಿಡಿಯಿತು. ರೋಟರಿ ಇಂಟರ್ ನ್ಯಾಷನಲ್, ಪೋಲಿಯೊ ರೋಗದ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಶ್ರಮಿಸಿದ ತಂಡದ ನೇತೃತ್ವವಹಿಸಿದ್ದ ವಿಜ್ಞಾನಿ ಜೋನಾಸ್ ಸಾಲ್ಡ್ ಅವರ ವಿಶ್ವ ಪೋಲಿಯೊ ದಿನವನ್ನು ಪ್ರಾರಂಭಿಸಿತು. * ಮಕ್ಕಳು ಮತ್ತು ಅವರ ಸಮುದಾಯಗಳಿಗೆ ಪೋಲಿಯೊ ಲಸಿಕೆಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲಾ ತಾಯಂದಿರು, ತಂದೆ, ಆರೈಕೆ ಮಾಡುವವರು, ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಇದು ಒಂದು ಅವಕಾಶವಾಗಿದೆ.* ಈ ವರ್ಷ ಜನವರಿ 13 ರಂದು ಭಾರತವು 12 ಪೋಲಿಯೊ ಮುಕ್ತ ವರ್ಷಗಳನ್ನು ಪೂರ್ಣಗೊಳಿಸಿತು, ಇದನ್ನು ಗಮನಾರ್ಹ ಸಾಧನೆ ಎಂದು ಪರಿಗಣಿಸಲಾಗಿದೆ, ಭಾರತದಲ್ಲಿ ಕೊನೆಯ ಪೋಲಿಯೊ ಪ್ರಕರಣ 2011 ರಲ್ಲಿ ಪತ್ತೆಯಾಗಿತ್ತು.* ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಪೋಲಿಯೊ ನಿರ್ಮೂಲನೆ ಪ್ರಯತ್ನದ ಫಲವಾಗಿ ಭಾರತದಲ್ಲಿ 1995ರಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಪ್ರಾರಂಭವಾಯಿತು. * ಭಾರತ ಸರಕಾರ ಪ್ರತಿ ವರ್ಷ ಪಲ್ಸ್ ಪೋಲಿಯೊ ಅಭಿಯಾನದಡಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮನೆ ಮನೆಗೆ ತೆರಳಿ ಎರಡು ಡೋಸ್ - ಪೋಲಿಯೊ ಲಸಿಕೆಯನ್ನು ನೀಡುತ್ತದೆ.* ಭಾರತ ಸರಕಾರದ ಪಲ್ಸ್ ಪೋಲಿಯೊ ಅಭಿಯಾನ ಸೇರಿದಂತೆ ಅನೇಕ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ವಿವಿಧ ಅಭಿಯಾನಗಳು ಪ್ರಯತ್ನಗಳ ಪರಿಣಾಮವಾಗಿ 2014ರ ಮಾರ್ಚ್ 27ರಂದು ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. * 2011ರ ಜನವರಿ 13ರಂದು ಭಾರತದಲ್ಲಿ ಕೊನೆಯ ಪೋಲಿಯೊ ಪ್ರಕರಣ ಪತ್ತೆಯಾಗಿತ್ತು. ಪ್ರಸ್ತುತ ದೇಶ ಪೋಲಿಯೊ ಮುಕ್ತವಾಗಿದ್ದರೂ, ಭವಿಷ್ಯದ ಪೀಳಿಗೆಯನ್ನು ರಕ್ಷಿಸಲು 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವುದು ಕಡ್ಡಾಯವಾಗಿದೆ. * ಐವಿಪಿ ಪ್ರಕಾರ ಮಕ್ಕಳಿಗೆ ನಾಲ್ಕು ಡೋಸ್ ನೀಡಲಾಗುತ್ತದೆ. ಇದರಲ್ಲಿ ಪೋಲಿಯೊ ಬೂಸ್ಟರ್ ಅನ್ನು 2 ತಿಂಗಳು, 4 ತಿಂಗಳು, 6 ರಿಂದ 18 ತಿಂಗಳು ಮತ್ತು 4 ರಿಂದ 6 ವರ್ಷಕ್ಕೆ ನೀಡಲಾಗುತ್ತದೆ.