* ಪ್ರತಿ ವರ್ಷ ಅಕ್ಟೋಬರ್ 21 ರಂದು ಈ ಹುತಾತ್ಮರ ಮತ್ತು ಕರ್ತವ್ಯದಲ್ಲಿ ಹುತಾತ್ಮರಾದ ಇತರ ಎಲ್ಲಾ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥವಾಗಿ ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನವನ್ನು ಆಚರಿಸಲಾಗುತ್ತದೆ. 2012 ರಿಂದ ದೆಹಲಿಯ ಚಾಣಕ್ಯಪುರಿಯಲ್ಲಿರುವ ಪೋಲಿಸ್ ಸ್ಮಾರಕದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಸ್ಮರಣೋತ್ಸವ ದಿನಾಚರಣೆಯನ್ನು ನಡೆಸಲಾಗುತ್ತಿದೆ. * ಅಕ್ಟೋಬರ್ 21, 1959 ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ನಲ್ಲಿ ಭಾರಿ ಶಸ್ತ್ರಸಜ್ಜಿತ ಚೀನೀ ಪಡೆಗಳು ಹೊಂಚುದಾಳಿಯಲ್ಲಿ ಹತ್ತು ವೀರ ಪೊಲೀಸರು ತಮ್ಮ ಪ್ರಾಣವನ್ನು ಅರ್ಪಿಸಿದರು. * ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ 15, 2018ರಂದು ದೇಶದ ಮೊದಲ ಪೊಲೀಸ್ ಮ್ಯೂಸಿಯಂ ಅನ್ನು ದೆಹಲಿಯಲ್ಲಿ ಉದ್ಘಾಟಿಸಿದರು. ಈ‌ ಮ್ಯೂಸಿಯಂ ಭಾರತೀಯ ಪೊಲೀಸ್ ಪಡೆಗಳ ಶೌರ್ಯವನ್ನು ಪ್ರದರ್ಶಿಸಿ, ಗೌರವಿಸುತ್ತದೆ.* ಈ ವಸ್ತು ಸಂಗ್ರಹಾಲಯವನ್ನು ಇಂಟಲಿಜೆನ್ಸ್ ಬ್ಯೂರೋ (ಐಬಿ) ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಕೈ ಪಡೆ (ಸಿಆ‌ರ್ಪಿಎಫ್) ನಿರ್ವಹಿಸುತ್ತವೆ. ಇವು ಭಾರತೀಯ ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳ ಇತಿಹಾಸ, ಸಮವಸ್ತ್ರ ತ್ತು ಮತ್ತು ಉಪಕರಣಗಳನ್ನು ಪ್ರದರ್ಶಿಸುತ್ತವೆ.*  ರಾಷ್ಟ್ರ ಸೇವೆಯಲ್ಲಿ ಪ್ರಾಣ ತೆತ್ತ ಈ ಹತ್ತು ವೀರ ಪೊಲೀಸರನ್ನು ಸ್ಮರಿಸಲು ಅಂದಿನಿಂದ ಅಕ್ಟೋಬರ್ 21ರಂದು ದೇಶದಾದ್ಯಂತ ಪೊಲೀಸ್ ಸಂಸ್ಕರಣಾ ದಿನವನ್ನಾಗಿ ಆಚರಿಸುವ 1962ರಲ್ಲಿ ನಡೆದ ಡಿಜಿಪಿ/ ಐಜಿಪಿ ಕಾನ್ಸರೆನ್ಸ್‌ನಲ್ಲಿ ನಿರ್ಧಾರ ಕೈಗೊಳ್ಳಲಾಯಿತು.