* ಪ್ರತಿ ವರ್ಷ ಅಕ್ಟೋಬರ್ 16 ರಂದು ಜಗತ್ತಿನಾದ್ಯಂತ ‘ವಿಶ್ವ ಆಹಾರ ದಿನ’ವನ್ನು ಆಚರಿಸಲಾಗುತ್ತದೆ. * ವಿಶ್ವ ಆಹಾರ ದಿನ 2024ರ ಥೀಮ್ "ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು" ಎಂಬುವುದು ಈ ವರ್ಷದ ಧ್ಯೇಯವಾಕ್ಯವಾಗಿದೆ. ಪ್ರತಿಯೊಬ್ಬರಿಗೂ ಕೈಗೆಟುವಂತೆ ಆಹಾರ ಸಿಗುವಂತೆ ಮಾಡುವುದು ಹಾಗೂ ಜಗತ್ತಿನ ಜೀವಿಗಳಿಗೆ ಆಹಾರದ ಮಹತ್ವವನ್ನು ತಿಳಿಸುವುದು ಈ ಥೀಮ್‌ನ ಉದ್ದೇಶವಾಗಿದೆ.* 1945 ಅಕ್ಟೋಬರ್ 16ರಂದು ರೋಮ್‌ನಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಯೂ ಅಸ್ತಿತ್ವಕ್ಕೆ ಬಂದಿತ್ತು. ಆ ಬಳಿಕ ಸದಸ್ಯರಾಷ್ಟ್ರಗಳ ಸಾಮಾನ್ಯ ಸಭೆಯೊಂದರ ವೇಳೆ ಹಂಗೇರಿಯ ನಿಯೋಗದ ಮುಖ್ಯಸ್ಥರಾದ ಡಾ.ಪಾಲ್‌ ರೊಮೊಯ್‌, ಸಂಸ್ಥೆಯ ಸ್ಥಾಪನಾ ದಿನವನ್ನೇ ವಿಶ್ವ ಆಹಾರ ದಿನ’ವನ್ನಾಗಿ ಆಚರಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆ ಬಳಿಕ ಅ.16ರಂದು ವಿಶ್ವ ಆಹಾರ ದಿನಾಚರಣೆಯ ನಿರ್ಣಯ ಕೈಗೊಳ್ಳಲಾಗಿದ್ದು,1981ರಿಂದ ವಿಶ್ವ ಆಹಾರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.* ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ವಿಶ್ವ ಆಹಾರ ದಿನವು ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿಯ ಪ್ರಕಾರ, “ಜಗತ್ತಿನಲ್ಲಿ 2.8 ಶತಕೋಟಿಗೂ ಹೆಚ್ಚು ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಿದ್ದಾರೆ. * ಇತ್ತೀಚೆಗೆ ಜಾಗತಿಕ ಹಸಿವು ಸೂಚ್ಯಂಕ (ಜಿಎಚ್‌ಐ) ಪ್ರಕಟಗೊಂಡಿದ್ದು ಭಾರತವು 105ನೇ ಸ್ಥಾನದಲ್ಲಿದೆ. ಭಾರತವು ಈಗಾಗಲೇ ಜಾಗತಿಕ ಹಸಿವು ಸೂಚ್ಯಂಕದಲ್ಲಿದೆ. ಜಾಗತಿಕವಾಗಿ ನಿತ್ಯವೂ ಸುಮಾರು 733 ಮಿಲಿಯನ್ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. 2.8 ಶತಕೋಟಿ ಮಂದಿ ಪೌಷ್ಟಿಕಯುಕ್ತ ಆಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.