* ಕೇರಳದ ನವೋದ್ಯಮ ವರ್ಸಿಕಲ್ಸ್ ಟೆಕ್ನಾಲಜೀಸ್ 2 'ಡಿಜಿಟಲ್ ಹೆಲ್ತ್ ಕಿಯೋಸ್' ಅನ್ನು ಪರಿಚಯಿಸಿದೆ. ಇದು ರಕ್ತದೊತ್ತಡ, ಮಧುಮೇಹ ಮತ್ತು ಹೃದಯದ ಸ್ಥಿತಿಯನ್ನು ತ್ವರಿತವಾಗಿ ಬಹು ಭಾಷೆಗಳಲ್ಲಿ ಅತ್ಯಂತ ನಿಖರವಾಗಿ ತಿಳಿಸುತ್ತದೆ. * ಇದರ ಶುಲ್ಕವು ಅತ್ಯಂತ ಕಡಿಮೆಯಾಗಿದ್ದು, ಇಂತಹ ಕಿಯೋಸ್ಕ್ ಅನ್ನು ಇದೇ ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ ಪ್ರಾಗ್ನಾಸಿಸ್ ಎಂಬ ಹೆಸರಿನ ಈ ಕಿಯೋಸ್ಕ್, ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಹಾಗೂ ಧ್ವನಿ ಆಧರಿತ ವಿಡಿಯೊ ಸೂಚನೆ ನೀಡುವ ಟಚ್ ಸ್ಟೀನ್ ಅನ್ನು ಹೊಂದಿದೆ. * ಕಿಯೋಸ್ಕ್‌ನಲ್ಲಿ ಬಳಕೆದಾರರ ರಕ್ತದೊತ್ತಡ, ಮಧುಮೇಹ, ಇಸಿಜಿ, ತಾಪಮಾನ ಮತ್ತು ತೂಕವನ್ನು ಅಳೆಯುವ ಯಂತ್ರಗಳಿವೆ.* ಕಿಯೋಸ್ಕ್ ಒಂದೇ ನಿಮಿಷದಲ್ಲಿ ಫಲಿತಾಂಶ ಒದಗಿಸುತ್ತದೆ ಹಾಗೂ ಆರೋಗ್ಯ ಸ್ಥಿತಿಯಲ್ಲಿ ಏರುಪೇರಿದ್ದರೆ ಅಗತ್ಯ ಸೂಚನೆಗಳನ್ನೂ ನೀಡುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.