* ಪ್ರತಿವರ್ಷ ಆಗಸ್ಟ್‌ 12 ರಂದು ವಿಶ್ವ ಆನೆ ದಿನವನ್ನು ಆಚರಣೆ ಮಾಡಲಾಗುತ್ತದೆ. ಆನೆಗಳ ಸಂಕಷ್ಟದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಆನೆಗಳ ಸಂರಕ್ಷಣೆ ಮತ್ತು ರಕ್ಷಣೆಗಾಗಿ ಪ್ರತಿಪಾದಿಸಲು ಈ ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ.* 2023 ವಿಶ್ವ ಆನೆ ದಿನದ ಥೀಮ್ : "ಅಕ್ರಮ ವನ್ಯಜೀವಿ ವ್ಯಾಪಾರವನ್ನು ಕೊನೆಗೊಳಿಸುವುದು" ಈ ವರ್ಷದ ಧೈಯವಾಕ್ಯವಾಗಿದೆ.* 2012 ರಲ್ಲಿ, ಕೆನಡಾದ ಪೆಟೇಷಿಯಾ ಸಿಮ್ಸ್ ಮತ್ತು ಥೈಲ್ಯಾಂಡ್‌ನ ಎಲಿಫೆಂಟ್ ರೀಇಂಟ್ರಡಕ್ಷನ್ ಫೌಂಡೇಶನ್, HM ರಾಣಿ ಸಿರಿಕಿಟ್ ನೇತೃತ್ವದಲ್ಲಿ ವಿಶ್ವ ಆನೆ ದಿನವನ್ನು ಸ್ಥಾಪಿಸಿತು. ಪೆಟೇಷಿಯಾ ಸಿಮ್ಸ್ ಅಂದಿನಿಂದ (2012ರಿಂದ) ಈ ಉಪಕ್ರಮವನ್ನು ನೋಡಿಕೊಳ್ಳುತ್ತಿದ್ದಾರೆ.  * ಆನೆಗಳು ಭೂಮಿಯ ಮೇಲಿನ ಅತಿದೊಡ್ಡ ಭೂ ಪ್ರಾಣಿಗಳಾಗಿವೆ. ಆನೆಗಳಲ್ಲಿ ಎರಡು ಜಾತಿಯ ಆನೆಗಳಿವೆ: ಆಫ್ರಿಕನ್ ಆನೆಗಳು ಮತ್ತು ಏಷ್ಯನ್ ಆನೆಗಳು. * ಪ್ರತಿ ವರ್ಷ ವಿಶ್ವ ಆನೆ ದಿನವು ಆನೆ ಸಂರಕ್ಷಣೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯ ಮತ್ತು ಕಾನೂನುಬಾಹಿರ ದಂತ ವ್ಯಾಪಾರವನ್ನು ಕೊನೆಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.