* ಆಸ್ಟ್ರಾ-ಹಿಂದ ಸಮರಾಭ್ಯಾಸವು ಭಾರತ ಮತ್ತು ಆಸ್ಟ್ರೇಲಿಯಾದ ಜಂಟಿ ಸೇನಾ ವ್ಯಾಯಾಮವಾಗಿದೆ.ಇದರ ನಾಲ್ಕನೇ ಆವೃತ್ತಿಯು ಅಕ್ಟೋಬರ್ 13 ,2025 ರಂದು  ಆಸ್ಟ್ರೇಲಿಯಾದ ಪರ್ತ ನಲ್ಲಿ ಆರಂಭವಾಗಿದೆ.ಈ ವ್ಯಾಯಾಮವು ಅಕ್ಟೋಬರ್ 2026 ರ ವರೆಗೆ ನಡೆಯಲಿದ್ದು,ಇದರಲ್ಲಿ ಉಭಯ ದೇಶಗಳ ಸೈನ್ಯದ ಸಿಬ್ಬಂದಿ ವಿವಿಧ ತಂತ್ರಗಳನ್ನು ಮತ್ತು ಕಾರ್ಯ ತಂತ್ರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.* ಆಸ್ಟ್ರಾ ಹಿಂದ ಎಂಬ ಹೆಸರಿನ ಸಮರಾಭ್ಯಾಸದಲ್ಲಿ 120 ಸೈನಿಕರನ್ನು ಒಳಗೊಂಡು ಭಾರತೀಯ ಸೇನಾ ತುಕಡಿ ಭಾಗಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆಯಲ್ಲಿ ನೀಡಲಾಗಿದೆ.ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಈ ವಾರ್ಷಿಕ ಸಮರಾಭ್ಯಾಸವು ಹಾಗೆ ನಡೆಯುತಿತ್ತು.* ಉದ್ದೇಶ : ಸೈನ್ಯದ ನಡುವೆ ಸಹಕಾರವನ್ನು ಹೆಚ್ಚಿಸುವುದು,ಸಂಘಟನೆಗಳನ್ನು ಸುಧಾರಿಸುವುದು,ಮಿಲಟರಿ ಸಹಕಾರವನ್ನು ಹೆಚ್ಚಿಸುವುದು,ಯುದ್ಧ ತಂತ್ರಗಾರಿಕೆಗಳ ವಿನಿಮಯ,ಜಂಟಿ ಕಾರ್ಯಚರಣೆಗಳನ್ನು ವಿನಿಮಯ ಮಾಡಿಕೊಳ್ಳುವುದು.* ಪ್ರಮುಖ ವಿಷಯ : ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಭಯೋತ್ಪಾದನಾ ನಿರೋಧಕ ಕಾರ್ಯಾಚರಣೆಗಳು,ಉನ್ನತ ಮಟ್ಟದ ಶಿಸ್ತು,ಮತ್ತು ಜಂಟಿ ತಂತ್ರಗಳನ್ನು ಅಭ್ಯಾಸ ಮಾಡುವುದು ಇದರ ಕಾರ್ಯವಾಗಿದೆ.* ಸಮರಾಭ್ಯಾಸದ ಆರಂಭವು ಪರಸ್ಪರ ಸಹಯೋಗ ಮತ್ತು ನಂಬಿಕೆಯ ಮನೋಭಾವವನ್ನು ಬಲಪಡಿಸುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.ಇದರಿಂದ  ಭಾರತೀಯ ಮತ್ತು ಆಸ್ಟ್ರೇಲಿಯಾದ ಸೇನಾ ಪಡೆಗಳ ನಡುವಿನ ಸೌಹಾರ್ದತೆ ಮತ್ತಷ್ಟ್ಟು ಬೆಳೆದಿದೆ ಮತ್ತು ಬೆಳೆಯುತ್ತದೆ ಎಂದು ಹೇಳಾಗಿದೆ.* ಆಸ್ಟ್ರಾ- ಹಿಂದ ಸರಣಿಯಲ್ಲಿ ಮೊದಲ ಸಮರಾಭ್ಯಾಸವು 2022 ರಲ್ಲಿ ರಾಜಸ್ತಾನದಲ್ಲಿ ನಡೆಯಿತು.* ಆಸ್ಟ್ರಾ- ಹಿಂದ ಸಮರಾಭ್ಯಾಸವು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಪರ್ಯಾಯವಾಗಿ ನಡೆಯಲಾಗುವ ವಾರ್ಷಿಕ ಕಾರ್ಯಕ್ರಮವಾಗಿರುತ್ತದೆ ಎಂದು ಭಾರತೀಯ ಸೇನೆಯ ಪತ್ರಿಕಾ ಹೇಳಿಕೆ ತಿಳಿಸಿದೆ.