Job Description: * ಚಂದ್ರನ ಅಂಗಳಕ್ಕೆ ಮಾನವನನ್ನು ಕಳಿಸಲು ಅಮೆರಿಕಾದ ನಾಸಾ ಸಜ್ಜಾಗಿದ್ದು, ಇದಕ್ಕಾಗಿ ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಿದೆ.* ಅಮೆರಿಕಾದ ನಾಸಾವು ಆರ್ಟೆಮಿಸ್ ಮಿಷನ್ ಅನ್ನು 2011 ರಲ್ಲಿ ಪ್ರಾರಂಭಿಸಿದ್ದು, ಆರ್ಟೆಮಿಸ್ ಮಿಷನ್ ಅನ್ನು ಚಂದ್ರನ ಅಂಗಳಕ್ಕೆ ಕಳಿಸಲು ಒಟ್ಟು ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಿದೆ.* ಅಮೇರಿಕಾದ ಕ್ರಿಸ್ಟಿನಾ ಹ್ಯಾಮ್ಮಾಕ್ ಕೋಚ್, ರೀಡ್ ವ್ಯೆಸ್ ಮ್ಯಾನ್ ಕಮಾಂಡರ್ ಮತ್ತು ವಿಕ್ಟರ್ ಗ್ಲೋವರ್ ಪೈಲಟ್, ಕೆನಡಾದ ಜೆರೆಮಿ ಹ್ಯಾನ್ಸೆನ್ ಈ ನಾಲ್ಕು ಗಗನಯಾತ್ರಿಗಳು ಆರ್ಟೆಮಿಸ್ ಮಿಷನ್ ಯೋಜನೆಗೆ ಆಯ್ಕೆಯಾಗಿದ್ದಾರೆ.* 50 ವರ್ಷಗಳ ನಂತರ ಅಮೆರಿಕ ಮತ್ತೊಮ್ಮೆ ಆರ್ಟೆಮಿಸ್ ಮಿಷನ್ ಮೂಲಕ ಚಂದ್ರನ ಮೇಲೆ ಮಾನವರನ್ನು ಕಳುಹಿಸಲು ಕೈಗೊಂಡಿರುವ ಯೋಜನೆ ಹಾಕಿಕೊಂಡಿದ್ದು, 'ಆರ್ಟೆಮಿಸ್ - 2' ಒಟ್ಟು 10 ದಿನಗಳ ಕಾರ್ಯಾಚರಣೆ ನಡೆಸಲಿದೆ.* ಆರ್ಟೆಮಿಸ್ -2ರ ಓರಿಯನ್ ನ್ಯೂಮಾನೌಕೆಯು 22 ಲಕ್ಷ ಕಿ.ಮೀ. ಪ್ರಯಾಣಿಸಲಿದೆ, ಕಾರಣ - ಚಂದ್ರ ನಮ್ಮಿಂದ 3,84,400 ಕಿ.ಮೀ. ದೂರ ಇರುವುದು. ಭೂಮಿಗೆ ಹಿಂತಿರುಗುವ ಮುನ್ನ ಕೊನೆಯ ಹಾರಾಟದ ಭಾಗವಾಗಿ ಚಂದ್ರನ ದೂರದ ಭಾಗದಿಂದ 10,300 ಕಿ. ಮೀ. ಹಾರಾಡಲಿದೆ.