* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹನದಲ್ಲಿ EOS-08 ಭೂ ವೀಕ್ಷಣಾ ಉಪಗ್ರಹವನ್ನು SSLV-D3 ಮೂಲಕ ಆಗಸ್ಟ್ 15 ರಂದು ಉಡಾವಣೆ ಮಾಡಲಿದೆ.* ಮಿಷನ್ ಮೈಕ್ರೋಸ್ಯಾಟಲೈಟ್ ತಂತ್ರಜ್ಞಾನವನ್ನು ವರ್ಧಿಸುವ ಗುರಿಯನ್ನು ಹೊಂದಿದೆ ಮತ್ತು . ಭವಿಷ್ಯದ ಉಪಗ್ರಹ ಕಾರ್ಯಾಚರಣೆಗೆ ಅಗತ್ಯ ಇರುವ ತಂತ್ರಜ್ಞಾನ ಸಂಯೋಜನೆ EOS-08  ಪ್ರಾಥಮಿಕ ಉದ್ದೇಶವಾಗಿದೆ ಎಂದು ಇಸ್ರೋ ಹೇಳಿದೆ.*  ಅತಿಗೆಂಪು ಚಿತ್ರಣ, GNSS-ರಿಫ್ಲೆಕ್ಟೋಮೆಟ್ರಿ ಮತ್ತು UV ಡೋಸಿಮೀಟರ್ ಪೇಲೋಡ್‌ಗಳನ್ನು ಒಳಗೊಂಡಿದೆ.* ಒಂದು ವರ್ಷದ ಜೀವಿತಾವಧಿಯ ಈ ಉಪಗ್ರಹ ಅಂದಾಜು 175.5 ಕೆ.ಜಿ. ತೂಕ ಹಾಗೂ 420 ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನೂ ಹೊಂದಿದೆ ಎಂದೂ ಇಸ್ರೋ ತಿಳಿಸಿದೆ.* EOIR ಪೇಲೋಡ್ ಪ್ರಾಕೃತಿಕ, ಅಗ್ನಿ ಮತ್ತು ಕೈಗಾರಿಕೆ ಇಲ್ಲವೇ ವಿದ್ಯುತ್ ಸ್ಥಾವರಗಳಲ್ಲಿನ ಅವಘಡ ಸಂದರ್ಭದಲ್ಲಿ ಹಗಲು-ರಾತ್ರಿ ಚಿತ್ರ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.* ಸಮುದ್ರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶ ಅಂದಾಜು, ಹಿಮಾಲಯ ಪ್ರದೇಶದ ಕ್ರಯೋಸ್ಪಿಯರ್ ಅಧ್ಯಯನ, ಪ್ರವಾಹ ಮುನ್ಸೂಚನೆ ಗ್ರಹಣ ಮುಂತಾದ ತಂತ್ರಾಂಶಗಳ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯ ಹೊಂದಿದೆ.* ಗಾಮಾ ವಿಕಿರಣಗಳ ಹೈ-ಡೋಸ್ ಅಲಾರ್ಮ್ ಸೆನ್ಸಾರ್ ಆಗಿ ಹಾಗೂ ಗಗನ್‌ಯಾನ್ ಮಿಷನ್‌ನ ಕ್ರ್ಯೂ ಮಾಡೆಲ್ ವ್ಯೂಪೋರ್ಟ್ ನ ಅತಿನೇರಳೆ ವಿಕಿರಣದ ಮೇಲ್ವಿಚಾರಣೆ ಮೇಲೆ ಗಾಳಿ SSLV-D3 ಡೋಸಿಮೀಟರ್ ಪೇಲೋಡ್ ನಿಗಾ ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ.