* ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ ಅತಿಥೇಯ ಶ್ರೀಲಂಕಾ  ಎದುರು ಟೀಮ್ ಇಂಡಿಯಾ 110 ರನ್‌ಗಳಿಂದ ಸೋಲು ಅನುಭವಿಸಿದೆ. ಈ ಮೂಲಕ ತವರಿನಲ್ಲೇ ಭಾರತದ ವಿರುದ್ಧ ಏಕದಿನ ಸರಣಿಯನ್ನು ಶ್ರೀಲಂಕಾ ಕೈವಶ ಮಾಡಿಕೊಂಡಿದೆ. * ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಆಗಸ್ಟ್ 7 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಲಂಕಾ, ಆವಿಷ್ಕಾ ಫರ್ನಾಂಡೊ ಹಾಗೂ ಕುಸಲ್ ಮಂಡಿಸ್ (59 ರನ್, 82 ಎಸೆತ, ೪ ಬೌಂಡರಿ) ಜತೆಯಾಟದ ಬಲದಿಂದ 7 ವಿಕೆಟ್‌ಗೆ 247 ರನ್ ಕಲೆಹಾಕಿತು. ಪ್ರತಿಯಾಗಿ ಸ್ಪಿನ್ನರ್ಸ್ ಎದುರು ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ, 26.1 ಓವರ್‌ಗಳಲ್ಲಿ 138 ರನ್ ಗಳಿಗೆ ಆಲೌಟ್ ಆಯಿತು.* ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆಗಿ ಏಕದಿನ ಕ್ರಿಕೆಟ್ ನಲ್ಲಿ ಸೋಲಿನ ಆರಂಭ ಕಂಡಿದ್ದಾರೆ. ಕಳೆದ 27 ವರ್ಷಗಳಲ್ಲಿ(1997ರ ಬಳಿಕ) ಲಂಕಾ ವಿರುದ್ಧ ಭಾರತಕ್ಕೆ ಮೊದಲ ಸರಣಿ ಸೋಲು ಇದಾಗಿದೆ.* ಶ್ರೀಲಂಕಾ: 7 ವಿಕೆಟ್‌ಗೆ 248 (ಪಥುಮ್ ನಿಸ್ಸಂಕ 45, ಆವಿಷ್ಕಾ 96, ಕುಸಲ್ 59, ಅಸಲಂಕಾ 10, ಕಮಿಂದು 23*, ಪರಾಗ್ 54ಕ್ಕೆ 3, ವಾಷಿಂಗ್ಟನ್ 29ಕ್ಕೆ 1, ಕುಲದೀಪ್ 36ಕ್ಕೆ 1).* ಭಾರತ: 26.1 ಓವರ್‌ಗಳಲ್ಲಿ 138 (ರೋಹಿತ್ 35, ಶುಭಮಾನ್ 6, ಕೊಹ್ಲಿ 20, ಪಂತ್ 6, ಶ್ರೇಯಸ್ 8. ಅಕ್ಷರ್ 2, ಪರಾಗ್ 15, ದುಬೆ 9, ವಾಷಿಂಗ್ಟನ್ 30, ಕುಲದೀಪ್ 6, ಸಿರಾಜ್ 0*). ಪಂದ್ಯಶ್ರೇಷ್ಠ: ಆವಿಷ್ಕಾ ಫೆರ್ನಾಂಡೊ, ಸರಣಿಶ್ರೇಷ್ಠ: ದುನಿತ್ ವೆಲ್ಲಲಗೆ* ಸತತವಾಗಿ ಆಡಿರುವ ಟೀಮ್ ಇಂಡಿಯಾ ಆಟಗಾರರು ಇನ್ನು ರಾಷ್ಟ್ರೀಯ ತಂಡದಿಂದ 43 ದಿನಗಳ ಸುಧೀರ್ಘ ಬಿಡುವು ಪಡೆಯಲಿದ್ದಾರೆ. ಭಾರತ ಇನ್ನು ಸೆಪ್ಟೆಂಬರ್ 19ರಂದು ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಸರಣಿಯ ಸರಣಿಯಲ್ಲಿ ಮರಳಿ ಕಣಕ್ಕಿಳಿಯಲಿದೆ.* ಅಸ್ಸಾಂನ 22 ವರ್ಷದ ಆಲ್ರೌಂಡರ್ ರಿಯಾನ್ ಪರಾಗ್ ಭಾರತ ಪರ 256ನೇ ಆಟಗಾರನಾಗಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.