* ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಬೆಂಬಲ ಸೂಚಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಸಿಂಹ ದಿನವನ್ನು ಆಚರಣೆ ಮಾಡಲಾಗುತ್ತದೆ.* ಬಿಗ್ ಕ್ಯಾಟ್ ಇನ್ಶಿಯೇಟಿವ್ ಆ್ಯಂಡ್ ನ್ಯಾಷನಲ್ ಜಿಯೋಗ್ರಾಫಿಕ್‌ನ ಸಹಸಂಸ್ಥಾಪಕರಾದ ಡೆರೆಕ್ ಹಾಗೂ ಬೆವರ್ಲಿ ಜೋಬರ್ಟ್ ಎಂಬ ದಂಪತಿಗಳು ಆಗಸ್ಟ್ 10 2013ರಲ್ಲಿ ವಿಶ್ವ ಸಿಂಹದಿನವನ್ನು ಮೊದಲು ಪ್ರಾರಂಭಿಸಿದರು.* ನೈಸರ್ಗಿಕ ವಾಸಸ್ಥಾನಗಳಲ್ಲಿ ಸಿಂಹಗಳನ್ನು ರಕ್ಷಿಸಲು ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ಸಿಂಹಗಳು ವಾಸವಿರುವ ಕಾಡಿನ ಪಕ್ಕದಲ್ಲಿ ಇರುವ ಜನವಸತಿ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆಯೂ ಕೆಲಸ ಮಾಡುವುದು ಈ ಸಿಂಹ ದಿನದ ಉದ್ದೇಶವಾಗಿದೆ.* ಭಾರತದಲ್ಲಿ ಗಿರ್ ಕಾಡುಗಳಲ್ಲಿ ಸಿಂಹಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅವುಗಳನ್ನು ಏಷ್ಯಾಟಿಕ್ ಸಿಂಹಗಳು ಎಂದು ಕರೆಯಲಾಗುತ್ತದೆ. ಈ ಸಿಂಹಗಳ ವೈಜ್ಞಾನಿಕ ಹೆಸರು "ಪ್ಯಾಂಥೆರಾ ಲಿಯೋ". 'ಏಷಿಯಾಟಿಕ್ ಲಯನ್' ಅನ್ನು ದುರ್ಬಲ ಮತ್ತು ಅಳಿವಿನಂಚಿನಲ್ಲಿರುವ ಸಿಂಹ ಎಂದು ಪರಿಗಣಿಸಲಾಗಿದೆ.