* ನೆಹರು ಸ್ಟೇಡಿಯಂನಲ್ಲಿ ನಡೆದ ಚುನಾವಣೆಯಲ್ಲಿ ತಮಿಳುನಾಡು ಬಾಸ್ಕೆಟ್‌ಬಾಲ್ ಅಸೋಸಿಯೇಷನ್ (TNBA) ಅಧ್ಯಕ್ಷ ಆಧವ್ ಅರ್ಜುನ ವಿಜಯಶಾಲಿಯಾಗಿದ್ದು, ಭಾರತೀಯ ಬ್ಯಾಸ್ಕೆಟ್‌ಬಾಲ್ ಫೆಡರೇಶನ್ (BFI) ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಆಧವ್ ಅರ್ಜುನ ಅವರು 39 ಮತಗಳಲ್ಲಿ 38 ಮತಗಳನ್ನು ಗಳಿಸಿ ಹಾಲಿ ಅಧ್ಯಕ್ಷ ಕೆ. ಗೋವಿಂದರಾಜ್ ಅವರನ್ನು ಸೋಲಿಸಿದರು.* ಮಾಜಿ ಆಟಗಾರ ಮತ್ತು ಮಧ್ಯಪ್ರದೇಶ ಬಾಸ್ಕೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷರಾದ ಕುಲ್ವಿಂದರ್ ಸಿಂಗ್ ಗಿಲ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.