➤ ನವದೆಹಲಿ: ಭಾರತವು ತನ್ನ 77ನೇ ಗಣರಾಜ್ಯೋತ್ಸವವನ್ನು 2026ರ ಜನವರಿ 26ರಂದು ಅತ್ಯಂತ ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ರಾಷ್ಟ್ರ ರಾಜಧಾನಿಯ ಐತಿಹಾಸಿಕ 'ಕರ್ತವ್ಯ ಪಥ' ಈ ಬಾರಿ ಸಾಂಸ್ಕೃತಿಕ ವೈಭವ ಮತ್ತು ಅತ್ಯಾಧುನಿಕ ರಕ್ಷಣಾ ಸಾಮರ್ಥ್ಯದ ಅನಾವರಣಕ್ಕೆ ಸಾಕ್ಷಿಯಾಗಲಿದೆ. ಈ ವರ್ಷದ ಆಚರಣೆಯು ಹಲವು ಐತಿಹಾಸಿಕ ಮತ್ತು ಪ್ರಥಮ ಎನ್ನಬಹುದಾದ ವಿಶೇಷತೆಗಳನ್ನು ಒಳಗೊಂಡಿದೆ.# ಉರ್ಸುಲಾ ವಾನ್ ಡರ್ ಲೇಯೆನ್ – ಯುರೋಪಿಯನ್ ಆಯೋಗದ ಅಧ್ಯಕ್ಷೆ# ಆಂಟೋನಿಯೊ ಕೋಸ್ಟಾ – ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ➤ ಈ ವರ್ಷದ ಗಣರಾಜ್ಯೋತ್ಸವದ ಪ್ರಮುಖ ಥೀಮ್: 'ವಂದೇ ಮಾತರಂ - 150' : ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ 'ವಂದೇ ಮಾತರಂ' ಗೀತೆಗೆ 150 ವರ್ಷ ತುಂಬಿದ ನೆನಪಿಗಾಗಿ, ಇದನ್ನೇ ಈ ಬಾರಿಯ ಕೇಂದ್ರ ಪರಿಕಲ್ಪನೆಯಾಗಿ (Theme) ಆಯ್ಕೆ ಮಾಡಲಾಗಿದೆ. ಬಿಟಿಂಗ್ ದಿ ರಿಟ್ರೀಟ್ (Beating the Retreat) ಸಮಾರಂಭದಲ್ಲೂ ಇದೇ ಧಾಟಿಯ ಸಂಗೀತ ಇರಲಿದೆ. ಕಲಾವಿದ ತೇಜೇಂದ್ರ ಕುಮಾರ್ ಮಿತ್ರ ಅವರು ಚಿತ್ರಿಸಿದ ವಂದೇ ಮಾತರಂನ ಸಾಲುಗಳನ್ನು ಬಿಂಬಿಸುವ ಕಲಾಕೃತಿಗಳು ಕರ್ತವ್ಯ ಪಥದಲ್ಲಿ ಪ್ರದರ್ಶನಗೊಳ್ಳಲಿವೆ.➤ ರಕ್ಷಣಾ ಪಡೆಗಳ ವಿಶೇಷ ಆಕರ್ಷಣೆ:-=> ಭೈರವ್ ಕಮಾಂಡೋ ಬೆಟಾಲಿಯನ್: ಇದೇ ಮೊದಲ ಬಾರಿಗೆ ಪಥಸಂಚಲನದಲ್ಲಿ ಭಾಗವಹಿಸಲಿದೆ.=> ಶಕ್ತಿಬಾನ್ ರೆಜಿಮೆಂಟ್ ಮತ್ತು ಡ್ರೋನ್ ಶಕ್ತಿ: ಇತ್ತೀಚಿನ ರಕ್ಷಣಾ ತಂತ್ರಜ್ಞಾನಗಳ ಪ್ರದರ್ಶನ.=> ಯುರೋಪಿಯನ್ ನೌಕಾಪಡೆ: ಮೊದಲ ಬಾರಿಗೆ ಯುರೋಪಿಯನ್ ನೌಕಾಪಡೆಯ ತುಕಡಿ ಭಾರತದ ಪಥಸಂಚಲನದಲ್ಲಿ ಹೆಜ್ಜೆ ಹಾಕಲಿದೆ.=> ಪ್ರಾಣಿ ದಳ: ಜಾನ್ಸ್ಕರ್ ಕುದುರೆಗಳು, ಬ್ಯಾಕ್ಟ್ರಿಯನ್ ಒಂಟೆಗಳು ಮತ್ತು ನಾಯಿಗಳ ದಳವು ಭಾರತದ ವೈವಿಧ್ಯಮಯ ಕಾರ್ಯಾಚರಣಾ ಪರಿಸರವನ್ನು ಪ್ರತಿನಿಧಿಸಲಿವೆ.➤ ಪಥಸಂಚಲನದ ಹೈಲೈಟ್ಸ್: ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನವು ಒಟ್ಟು 90 ನಿಮಿಷಗಳ ಕಾಲ ನಡೆಯಲಿದ್ದು, ಪ್ರಮುಖ ಆಕರ್ಷಣೆಯಾಗಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 17 ಹಾಗೂ ವಿವಿಧ ಸಚಿವಾಲಯಗಳಿಂದ 13 ಸೇರಿದಂತೆ ಒಟ್ಟು 30 ಭವ್ಯ ಸ್ತಬ್ಧಚಿತ್ರಗಳು ಕರ್ತವ್ಯ ಪಥದಲ್ಲಿ ಸಾಗಲಿವೆ. ಕಾರ್ಯಕ್ರಮದ ಆರಂಭದಲ್ಲಿ 100 ಜನ ಕಲಾವಿದರು ಭಾರತೀಯ ಸಮರ ಕಲೆಗಳ ಸಂಗೀತ ವಾದ್ಯಗಳನ್ನು ನುಡಿಸುವ ಮೂಲಕ ಸಾಂಸ್ಕೃತಿಕ ಚಾಲನೆ ನೀಡಲಿದ್ದಾರೆ. ಇನ್ನು ಬಾನಂಗಳದಲ್ಲಿ ರಫೇಲ್, ಸುಖೋಯ್-30 ಮತ್ತು ತೇಜಸ್ ಸೇರಿದಂತೆ ಅತ್ಯಾಧುನಿಕ ಯುದ್ಧ ವಿಮಾನಗಳು ನಡೆಸುವ 'ಫ್ಲೈಪಾಸ್ಟ್' (Flypast) ಸಾಹಸ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ.➤ ರಕ್ಷಣಾ ಇಲಾಖೆಯು ಈ ಬಾರಿ ವಿಶೇಷ ಬದಲಾವಣೆ ಮಾಡಿದ್ದು, ಪಥಸಂಚಲನದ ಆವರಣಗಳಿಗೆ ಭಾರತದ ನದಿಗಳ ಹೆಸರನ್ನು ಮತ್ತು ಬಿಟಿಂಗ್ ದಿ ರಿಟ್ರೀಟ್ ಆವರಣಗಳಿಗೆ ಸಂಗೀತ ವಾದ್ಯಗಳ ಹೆಸರನ್ನು ಇಡುವ ಮೂಲಕ ಸಾಂಕೇತಿಕವಾಗಿ ವಿಐಪಿ ಸಂಸ್ಕೃತಿಯನ್ನು ದೂರವಿಟ್ಟಿದೆ.