* ರಕ್ಷಣಾ ಪಡೆಗಳ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ದೇಶಿಯ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಗೂ ಉತ್ತೇಜನ ನೀಡುವ ನಿಟ್ಟಿನಲ್ಲಿ 2.23 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪನ್ನಗಳ ಖರೀದಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ ನವೆಂಬರ್ 30 ರಂದು ಅನುಮೋದನೆ ನೀಡಿದೆ.* 97 ತೇಜಸ್ ಯುದ್ಧ ವಿಮಾನ, 156 ಪ್ರಚಂಡ ಹೆಲಿಕಾಪ್ಟರ್ ಖರೀದಿ ಯೋಜನೆ ಹಾಗೂ ಎಸ್ ಯು-30 ಅಪ್‌ಗ್ರೇಡ್ ಯೋಜನೆಗೆ 1.6 ಲಕ್ಷ ಕೋಟಿ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.* ಇದರಲ್ಲಿ 97 ತೇಜಸ್‌ ಯುದ್ಧ ವಿಮಾನಗಳು ಹಾಗೂ 156 ಪ್ರಚಂಡ್‌ ಯುದ್ಧ ಕಾಪ್ಟರ್‌ಗಳ ಖರೀದಿಯೂ ಸೇರಿದೆ. ಜತೆಗೆ, ಎಸ್‌ಯು-30 ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸಲೂ ರಕ್ಷಣಾ ಸ್ವಾಧೀನ ಮಂಡಳಿ ಅನುಮತಿ ನೀಡಿದೆ.* ಏನೆಲ್ಲಾ ಖರೀದಿಗೆ ಅನುಮೋದನೆ?– ಟೈಪ್‌-2/ಟೈಪ್‌-3 ಟ್ಯಾಂಕ್‌ನಿಗ್ರಹ ಶಸ್ತ್ರ– ಮಧ್ಯಮ ಶ್ರೇಣಿಯ ನೌಕೆ ನಿಗ್ರಹ ಕ್ಷಿಪಣಿ– ಸ್ವಯಂಚಾಲಿತ ಟಾರ್ಗೆಟ್‌ ಟ್ರ್ಯಾಕರ್‌– ಡಿಜಿಟಲ್‌ ಬಸ್ಟಾಲಿಕ್‌ ಕಂಪ್ಯೂಟರ್‌ಗಳು– ಐಎಎಫ್ಗಾಗಿ 97 ತೇಜಸ್‌ ಯಐಎಎಫ್ಗಾಗಿ 97 ತೇಜಸ್‌ ಯುದ್ಧವಿಮಾನ– ಸೇನೆ/ನೌಕಾಪಡೆಗಾಗಿ 156 ಕಾಪ್ಟರ್‌