Job Description: * 69 ವರ್ಷದ ಕ್ಸಿ ಜಿನ್ ಪಿಂಗ್ ಚೀನಾ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಮಾರ್ಚ್ 10 ಶುಕ್ರವಾರ ದಿನದಂದು ಅಧಿಕಾರ ವಹಿಸಿಕೊಳ್ಳುವ ಮೂಲಕ ಕ್ಸಿ ಜಿನ್‌ಪಿಂಗ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. * ಚೀನಾದ ಶಾಸಕಾಂಗ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ), ಶಿಷ್ಟಾಚಾರದಂತೆ ಸಿ ಜಿನ್ ಪಿಂಗ್ ಅವರನ್ನು ಅಧಿಕೃತವಾಗಿ ಮಾರ್ಚ್ 10 ಶುಕ್ರವಾರ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಅನುಮೋದಿಸಿತು.* ಜಿನ್‌ಪಿಂಗ್ ಅವರನ್ನುಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲು, ಚೀನಾದ 'ರಬ್ಬರ್ ಸ್ಟಾಂಪ್' ಸಂಸತ್ತಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ (ಎನ್‌ಪಿಸಿ) ಸುಮಾರು 3,000 ಸದಸ್ಯರು ಮತಚಲಾಯಿಸಿದ್ದಾರೆ.