* ಆಗಸ್ಟ್ 20 ರಂದು ನಡೆದ 2026ರ ಟಿ20 ವಿಶ್ವಕಪ್(ICC Men’s T20 World Cup) ಪ್ರಾದೇಶಿಕ ಅರ್ಹತಾ (2026 World Cup regional qualifier) ಸುತ್ತಿನ ವನುವಾಟು (Vanuatu) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವಿಸ್ಸರ್‌ ಒಂದೇ ಓವರ್‌ನಲ್ಲಿ ಬರೋಬ್ಬರಿ 39 ರನ್ ಸಿಡಿಸುವ ಮೂಲಕ 17 ವರ್ಷಗಳ ಕಾಲ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.* ಅಪಿಯಾದ ಗಾರ್ಡನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸಮೋವ ತಂಡ ಕೇವಲ 10 ರನ್ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸಿಗಿಳಿದ ಡೇರಿಯಸ್ ವಿಸ್ಸರ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕೇವಲ 62 ಎಸೆತಗಳಲ್ಲಿ 132 ರನ್ ಚಚ್ಚಿದರು. * ಅವರ ಈ ಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್ ವೇಳೆ ಬರೋಬ್ಬರಿ 14 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಯಿತು. ಎದುರಾಳಿ ತಂಡದ ನಲಿನ್ ನಿಪಿಕೊ ಎಸೆದ 15ನೇ ಓವರ್ನಲ್ಲಿ ಸಿಡಿದು ನಿಂತ ವಿಸ್ಸರ್ 39 ರನ್ ಕಲೆ ಹಾಕುವ ಮೂಲಕ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.* ನಳಿನ್ ನಿಪೀಕೊ (Nalin Nipiko) ಎಸೆದ 15ನೇ ಓವರ್‌ನಲ್ಲಿ 39 ರನ್ ಬಂದಿದೆ. ನೀಪಿಕೊ ಎಸೆದ ಮೊದಲ ಮೂರು ಬಾಲ್‌ಗಳನ್ನು ವಿಸ್ಸೆರ್ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು. ಇದರಿಂದ ಕೊಂಚ ಮಾನಸಿಕವಾಗಿ ಕುಗ್ಗಿದ ನೀಪಿಕೊ ನಾಲ್ಕನೇ ಎಸೆತ ನೋ ಬಾಲ್ (NoBall) ಹಾಕಿದರು. ನಂತರದ ಬಾಲ್ ಫ್ರೀ ಹಿಟ್ (Free Hit) ಸಿಕ್ಕ ಕಾರಣ ವಿಸ್ಸೆರ್ ಮತ್ತೆ ಸಿಕ್ಸ್ ಸಿಡಿಸಿದರು. ಐದನೇ ಬಾಲ್ ಡಾಟ್ ಆಗಿದ್ದರಿಂದ ವನವಾಟು ತಂಡದ ಆಟಗಾರರು ಸ್ವಲ್ಪ ನಿಟ್ಟುಸಿರು ಬಿಟ್ಟರು. ಆದರೆ ಅವರ ಸಂತಸ ಹೆಚ್ಚು ಸಮಯವಿರಲಿಲ್ಲ. ಆರನೇ ಎಸೆತ ನೋಬಾಲ್ ಆಗಿದ್ದರಿಂದ ಇತರೇ ರೂಪದಲ್ಲಿ 1 ರನ್ ಬಂತು. ನಂತರದ ಫ್ರಿ ಹಿಟ್ ಎಸೆತ ನೋಬಾಲ್ ಆಗಿದ್ದರಿಂದ 7 ರನ್ ಬಂತು. ಕೊನೆಯ ಎಸೆತವನ್ನು ವಿಸ್ಸೆರ್ ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಒಂದೇ ಓವರ್‌ನಲ್ಲಿ 39 ರನ್ ಬಂದಿದೆ.  * 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ (England) ಬೌಲರ್ ಸ್ಟುವರ್ಟ್ ಬ್ರಾಡ್ (Stuart Broad) ಅವರ 6 ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ವಿಶ್ವ ದಾಖಲೆ ನಿರ್ಮಿಸಿದ್ದರು.* ಈ ಮೂಲಕ ಯುವರಾಜ್‌ ಸಿಂಗ್‌ (2007), ಕೈರೊನ್‌ ಪೊಲಾರ್ಡ್‌ (2021), ದೀಪೇಂದ್ರ ಸಿಂಗ್‌ ಐರಿ (2024) ಮತ್ತು ನಿಕೋಲಸ್‌ ಪೂರನ್‌ (2024) ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಬ್ಯಾಟರ್‌ಗಳು ಟಿ20-ಐ ಪಂದ್ಯದ ಓವರ್‌ ಒಂದರಲ್ಲಿ 36 ರನ್‌ ಸಿಡಿಸಿದ ದಾಖಲೆ ಹೊಂದಿದ್ದರು.* ಯುವರಾಜ್‌ ಸಿಂಗ್‌ ಟಿ20-ಐ ದಾಖಲೆ :-  2007ರಲ್ಲಿ ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅಬ್ಬರಿಸಿದ್ದ ಯುವರಾಜ್‌ ಸಿಂಗ್‌, ಇಂಗ್ಲೆಂಡ್ ಎದುರು ಡರ್ಬನ್‌ನ ಕಿಂಗ್ಸ್‌ ಮೀಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್‌ ಬ್ರಾಡ್‌ ಅವರನ್ನು ಬಡಿದು ಬೆಂಡೆತ್ತಿದ್ದರು. ಆ ಓವರ್‌ಗೂ ಮುನ್ನ ಇಂಗ್ಲೆಂಡ್‌ ಆಲ್‌ರೌಂಡರ್‌ ಆಂಡ್ರ್ಯೂ ಫ್ಲಿಂಟಾಫ್‌ ತೆಗೆದಿದ್ದ ಕಿರಿಕ್‌ ಕಾರಣ ಕೋಪಗೊಂಡಿದ್ದ ಆಗಿನ 26 ವರ್ಷದ ಎಡಗೈ ಬ್ಯಾಟರ್‌ ಯುವರಾಜ್‌ ಸಿಂಗ್‌, ಫಾಸ್ಟ್‌ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಮೇಲೆ ತಮ್ಮ ಕೋಪ ತೀರಿಸಿಕೊಂಡು ಸತತ 6 ಸಿಕ್ಸರ್‌ ಸಿಡಿಸಿದರು. ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಯುವಿ ತಮ್ಮ ವಿಶ್ವ ದಾಖಲೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.