Job Description: ➤ ವಿಶ್ವದಾದ್ಯಂತ ತಂತ್ರಜ್ಞಾನ ವಲಯದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence - AI) ಅಲೆಯು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆದ ಮಹತ್ವದ 2ನೇ ಪ್ಯಾಕ್ಸ್ ಸಿಲಿಕಾ ಶೃಂಗಸಭೆ (Pax Silica Summit) ಯಲ್ಲಿ ಭಾರತ ಸೇರಿದಂತೆ ವಿಶ್ವದ 35 ಪ್ರಮುಖ ದೇಶಗಳು ಜಂಟಿಯಾಗಿ ‘ಎಐ ಅವಕಾಶ ಹೇಳಿಕೆ’ಗೆ (Joint Statement on AI Opportunity) ಸಹಿ ಹಾಕಿವೆ.➤ ಪ್ಯಾಕ್ಸ್ ಸಿಲಿಕಾ ಶೃಂಗಸಭೆ ಮತ್ತು ಎಐ ಒಪ್ಪಂದ: ಅಮೆರಿಕದ ನೇತೃತ್ವದಲ್ಲಿ ಆರಂಭವಾಗಿರುವ ಈ ಒಕ್ಕೂಟವು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಪೂರಕವಾಗಿರುವ ಅತ್ಯಂತ ಸುರಕ್ಷಿತ, ನಂಬಿಕಸ್ಥ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿರುವ ಜಾಗತಿಕ ಪೂರೈಕೆ ಜಾಲಗಳನ್ನು (Resilient Supply Chains) ನಿರ್ಮಿಸುವ ಗುರಿಯನ್ನು ಹೊಂದಿದೆ. ಸರಳವಾಗಿ ಹೇಳುವುದಾದರೆ, AI ತಂತ್ರಜ್ಞಾನಕ್ಕೆ ಅತ್ಯಗತ್ಯವಾಗಿ ಬೇಕಾಗುವ ಸೆಮಿಕಂಡಕ್ಟರ್‌ಗಳು (ಚಿಪ್ಸ್), ಅತ್ಯಾಧುನಿಕ ಡೇಟಾ ಸೆಂಟರ್‌ಗಳು ಮತ್ತು ತಾಂತ್ರಿಕ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಈ ಒಪ್ಪಂದ ಸಹಕಾರಿಯಾಗಲಿದೆ.➤ ಪ್ರಮುಖ ಹೇಳಿಕೆ: ಅಮೆರಿಕದ ಆರ್ಥಿಕ ವ್ಯವಹಾರಗಳ ರಾಜ್ಯ ಉಪ ಕಾರ್ಯದರ್ಶಿ ಜ್ಯಾಕೋಬ್ ಹೆಲ್ಬರ್ಗ್ ಅವರ ಪ್ರಕಾರ, "AI ನ ಭವಿಷ್ಯವನ್ನು ಯಾರು ಮೊದಲು ನಿಯಂತ್ರಿಸುತ್ತಾರೆ (Regulate) ಎನ್ನುವುದು ನಿರ್ಧರಿಸುವುದಿಲ್ಲ. ಬದಲಿಗೆ ಯಾರು ಮೊದಲು ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುತ್ತಾರೆ ಮತ್ತು ಹೆಚ್ಚಿನ ಸಾಮರ್ಥ್ಯವನ್ನು (More Compute, More Chips, More Talent) ಹೊಂದುತ್ತಾರೋ ಅವರು ನಿರ್ಧರಿಸುತ್ತಾರೆ."➤ ಭಾರತದ ಪ್ರಾತಿನಿಧ್ಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿ ಎಸ್. ಕೃಷ್ಣನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಾಗರಾಜ್ ನಾಯ್ಡು ಅವರು ಭಾರತದ ಪರವಾಗಿ ಭಾಗವಹಿಸಿದ್ದರು.ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.