* ಅಂತರಾಷ್ಟ್ರೀಯ ಖೋ-ಖೋ ಫೆಡರೇಶನ್ ಸಹಯೋಗದೊಂದಿಗೆ 2025ರಲ್ಲಿ ಭಾರತದಲ್ಲಿ ಚೊಚ್ಚಲ ಆವೃತ್ತಿಯನ್ನು ಖೋ-ಖೋ ವಿಶ್ವಕಪ್ ಅನ್ನು ಆಯೋಜಿಸುವ ಯೋಜನೆಯನ್ನು ಖೋ-ಖೋ ಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್‌ಐ) ಅಕ್ಟೋಬರ್ 2ರಂದು  ಘೋಷಣೆ ಮಾಡಿದೆ.* 'ಮೊದಲ ವಿಶ್ವಕಪ್ ಟೂರ್ನಿ ಆಯೋಜಿಸಲು ಅಂತರರಾಷ್ಟ್ರೀಯ ಖೋ-ಖೋ ಫೆಡರೇಷನ್ ಭಾರತಕ್ಕೆ ಅವಕಾಶ ನೀಡಿದೆ.* ಖೋ-ಖೋ ಕ್ರೀಡೆಯ ಮೂಲ ಭಾರತವಾಗಿದೆ. ಈ ವಿಶ್ವಕಪ್ ಟೂರ್ನಿಯು ಖೋ-ಖೋದ ಸಾಂಸ್ಕೃತಿಕ ಪರಂಪರೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಎತ್ತಿ ತೋರಿಸಲಿದೆ.* ಖೋ-ಖೋ ಕ್ರೀಡೆಯು ಇಂದು 54 ದೇಶಗಳಲ್ಲಿ ಜನಪ್ರಿಯವಾಗಿದೆ' ಎಂದು ಕೆಕೆಎಫ್‌ಐ ತಿಳಿಸಿದೆ.* 2032ರ ವೇಳೆಗೆ ಖೋ-ಖೋ ಆಟವನ್ನು ಒಲಿಂಪಿಕ್ಸ್ ಕ್ರೀಡೆಗೆ ಸೇರಿಸುವುದು ನಮ್ಮ ಗುರಿ. ಆ ಕನಸಿನತ್ತ ಸಾಗುವ ಮೊದಲ ಹೆಜ್ಜೆಯೇ ಈ ವಿಶ್ವಕಪ್ ಟೂರ್ನಿಯಾಗಿದೆ' ಎಂದು ಕಕೆಎಫ್‌ಐ ಅಧ್ಯಕ್ಷ ಸುಧಾಂಶು ಮಿತ್ತಲ್ ಹೇಳಿದ್ದಾರೆ.* ಖೋ-ಖೋಗೆ ಪರಿವರ್ತನೆಯ ಕ್ಷಣವಾಗಿದೆ. ಇದು ಸಾಂಪ್ರದಾಯಿಕ ಭಾರತೀಯ ಆಟದಿಂದ ಜಾಗತಿಕವಾಗಿ ಗುರುತಿಸಲ್ಪಟ್ಟ ಒಲಿಂಪಿಕ್ ಕ್ರೀಡೆಯಾಗಿ ಹೊರಹೊಮ್ಮುತ್ತದೆ.* ಖೋ-ಖೋ ಆಟ ಮೊದಲು ಜಮೈಕಯಲ್ಲಿನ ಬರೋಡ ಎಂಬಲ್ಲಿ  1924 ಉಗಮವಾಯಿತು. ಈ ಆಟದ ಒಂದು ಚಾಂಪಿಯನ್ಶಿಪ್ 1960 ರಲ್ಲಿ ನಡೆಯಿತು.* ಭಾರತದಲ್ಲಿ ಈ ಆಟವನ್ನು ಮೊದಲು ಮಹಾರಾಷ್ಟ್ರದ ಅಖಿಲ ಮಹಾರಾಷ್ಟ್ರ ಶಾರೀರಿಕ್ ಶಿಕ್ಷಣ ಮಂಡಳಿ ಪರಿಚಯಿಸಿತು. ಈಗ ಈ ಖೋಖೋ ಕ್ರೀಡೆಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿದೆ.* ಈ ಆಟದಲ್ಲಿ ಒಟ್ಟಾರೆಯಾಗಿ 24 ಜನ ಇರುತ್ತಾರೆ. ಅದರಲ್ಲಿ ತಲಾ 12 ಜನರಂತೆ 2 ತಂಡಗಳಾಗಿ ವಿಂಗಡಿಸಬೇಕು.