* ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮಾರ್ಗಸೂಚಿಗಳು ಪ್ರಕಟವಾದ ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ಯುನಿವರ್ಸಿಟಿ (ಡಬ್ಲ್ಯುಎಸ್ ಯು) ಭಾರತದಲ್ಲಿ ತನ್ನ ಅಂಗಸಂಸ್ಥೆ ಸ್ಥಾಪಿಸಲು ಮುಂದಾಗಿದೆ.* ಈ ಕುರಿತು ಸ್ಪಷ್ಟಿಕರಣ ನೀಡಿರುವ ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯ (ಡಬ್ಲ್ಯುಎಸ್‌)ಯು 2025ರ ವೇಳೆಗೆ ಬೆಂಗಳೂರಿನಲ್ಲಿ ತನ್ನ ಅಂಗಸಂಸ್ಥೆ ಸ್ಥಾಪನೆಗೆ ಹಸಿರು ನಿಶಾನೆ ತೋರಿದೆ.* ಕೃಷಿವಿಚಾರಕ್ಕೆ ಕೇಂದ್ರೀಕೃತವಾಗಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ (ಸ್ಟೆಮ್)ಶಿಕ್ಷಣ ಪರಿಚಯಿಸಲು ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯವು ಆಸಕ್ತಿ ಹೊಂದಿದ್ದು, ಮುಂದಿನ ಐದು ವರ್ಷದೊಳಗೆ ಕನಿಷ್ಠ 1,000 ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳುವ ಗುರಿಯನ್ನೂ ಡಬ್ಲ್ಯುಎಸ್‌ಯು ಹೊಂದಿದೆ.