* ಯೇಲ್ ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಲಾ & ಪಾಲಿಸಿ ಮತ್ತು ಕೊಲಂಬಿಯಾ ಸೆಂಟರ್ ಫಾರ್ ಇಂಟರ್‌ನ್ಯಾಶನಲ್ ಅರ್ಥ್ ಸೈನ್ಸ್ ಇನ್‌ಫರ್ಮೇಷನ್ ನೆಟ್‌ವರ್ಕ್ ಜೂನ್ 5 ರಂದು 2024ರ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ(environmental performance index 2024)ವನ್ನು ಬಿಡುಗಡೆ ಮಾಡಿವೆ. * ಒಟ್ಟು 180 ರಾಷ್ಟ್ರಗಳ ರ‍್ಯಾಂಕಿಂಗ್ ಪಟ್ಟಿ ಇದಾಗಿದ್ದು, ಈ ಪಟ್ಟಿಯಲ್ಲಿ ಭಾರತ 176 ನೇ ಸ್ಥಾನ ಪಡೆದುಕೊಂಡಿದೆ. ವಿಯೆಟ್ನಾಂ 180ನೇ ಪಡೆಯುವ ಮೂಲಕ ಈ ಪರಿಸರ ಕಾರ್ಯಕ್ಷಮತೆ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. - ಮೊದಲನೇ ಸ್ಥಾನ -ಎಸ್ಟೋನಿಯಾ- ಎರಡನೇ ಸ್ಥಾನ - ಲಕ್ಷಂಬರ್ಗ್- ಮೂರನೇ ಸ್ಥಾನ - ಜರ್ಮನಿ  * ಜಾಗತಿಕವಾಗಿ ಪ್ರಮುಖ ಹವಾಮಾನ ಬದಲಾವಣೆ ತಗ್ಗಿಸುವ ಕ್ರಮಗಳ ಗುರಿಗಳನ್ನು ಸಾಧಿಸುವಲ್ಲಿ ದೇಶಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (EPI) ಅನ್ನು ಬಿಡುಗಡೆ ಮಾಡಲಾಗುತ್ತದೆ.