* 2024ನೇ ಸಾಲಿನ 19 ನೇ G20 ಶೃಂಗ ಸಭೆಯನ್ನು ಬ್ರೆಜಿಲ್ ರಾಷ್ಟ್ರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. 2024ರಲ್ಲಿ ಬ್ರೆಜಿಲ್ ರಾಜಧಾನಿ ರಿಯೋ ಡಿ ಜನೈರೋದಲ್ಲಿ ನಡೆಯಲಿದೆ. * ಭಾರತದ ಅಧ್ಯಕ್ಷತೆಯಲ್ಲಿ ನಡೆದ 2023ರ ಜಿ-20 ಶೃಂಗಸಭೆ 73 ಘೋಷಣೆಗಳೊಂದಿಗೆ ಭಾನುವಾರ (ಸೆ.10) ಸಂಪನ್ನಗೊಂಡಿದೆ. 2024ರ ಜಿ-20 ಅಧ್ಯಕ್ಷತೆ ಬ್ರೆಜಿಲ್‌ಗೆ ಹಸ್ತಾಂತರಿಸುವು ದರೊಂದಿಗೆ ಜಿ20 ನಾಯಕರ ಶೃಂಗಸಭೆ ಮುಕ್ತಾಯಗೊಂಡಿತು.
* 2023ರ G20 ಶೃಂಗ ಸಭೆಯ ಹಾಲಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯವರು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಒಂದು ಸಸಿಯನ್ನು ಕೊಡುವ ಮೂಲಕ 2024ರ ಜಿ-20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದರು. * 2023ರ G20 ಶೃಂಗ ಸಭೆಯ ಪ್ರಮುಖ ಘೋಷಣೆಗಳು :- ಗುಣಮಟ್ಟದ ಶಿಕ್ಷಣ ನೀಡುವುದು- ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ- ಹವಾಮಾನ ಬದಲಾವಣೆಯಿಂದ ಉಂಟಾಗುವ ಆರ್ಥಿಕ ಅಪಾಯಗಳಿಗೆ ಕಡಿವಾಣ ಹಾಕುವುದು- ಸುಸ್ಥಿರ ಅಭಿವೃದ್ಧಿ ಬಗ್ಗೆ ಗಮನ ಹರಿಸಿ, ಅದಕ್ಕೆ ಪೂರಕವಾದ ಜೀವನಶೈಲಿಯತ್ತ ಗಮನ ಕೊಡುವುದು- ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಬಳಕೆ ಹೆಚ್ಚಳ- ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯದ ಗುರಿ ಸಾಧಿಸುವುದು- ಭಯೋತ್ಪಾದನೆ ಮತ್ತು ಹಣಕಾಸು ಅವ್ಯವಹಾರೀಕ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು* ಬ್ರೆಜಿಲ್ ಈ ವರ್ಷದ 2023 ಡಿಸೇಂಬರ್ 1ರಂದು G20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದೆ.