* ಅಮೆರಿಕಾದ ಜನಪ್ರಿಯ ನಿಯತಕಾಲಿಕ ಟೈಮ್ 'ಬಿಡುಗಡೆ ಮಾಡಿರುವ 'ಜಗತ್ತಿನ ಅತ್ಯುತ್ತಮ ಕಂಪನಿಗಳು 2024'ರ ಪಟ್ಟಿಯಲ್ಲಿ ಭಾರತದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕಂಪನಿಗಳ ಪೈಕಿ ಪ್ರಮುಖ ಐ.ಟಿ ಕಂಪನಿ ಎಚ್‌ಸಿಎಲ್ ಟೆಕ್ ಮೊದಲ ಸ್ಥಾನ ಪಡೆದಿದೆ. * ಇದು ವೃತ್ತಿಪರ ಸೇವೆಗಳ ವಿಭಾಗದಲ್ಲಿಯೂ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನ ಪಡೆದಿದೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ. ಜಾಗತಿಕ ಪಟ್ಟಿಯಲ್ಲಿ ಇದರ ಸ್ಥಾನ 112, ಇನ್ಫೋಸಿಸ್ ಸಂಸ್ಥೆಯು-119, ಹಾಗೂ ವಿಪ್ರೊ ಸಂಸ್ಥೆಯು 134ನೇ ಸ್ಥಾನದಲ್ಲಿವೆ. * ಉತ್ತರಪ್ರದೇಶದ ನೋಯ್ದಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಎಚ್‌ಸಿಎಲ್ 2024-25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ 4,257 ಕೋಟಿ ನಿವ್ವಳ ಲಾಭಗಳಿಸಿತ್ತು. * 2023-24ರ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆ. ವರಮಾನವು 28,057 ಕೋಟಿಯಾಗಿದ್ದು, ಶೇ.6ರಷ್ಟು ಏರಿಕೆಯಾಗಿದೆ. ಪ್ರಸಕ್ತ ವರ್ಷದ ಜೂನ್ ಅಂತ್ಯದ ವೇಳೆಗೆ ಈ ಕಂಪನಿಯು 60 ದೇಶಗಳಲ್ಲಿ 2.19 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.* ಆಪಲ್ 2024 ರಲ್ಲಿ ಟೈಮ್ ಮ್ಯಾಗಜೀನ್‌ನಿಂದ ಅಗ್ರ ಕಂಪನಿಯಾಗಿ ಸ್ಥಾನ ಪಡೆದಿದೆ, ಡಬ್ಲಿನ್ ಮೂಲದ ಕನ್ಸಲ್ಟೆನ್ಸಿ ದೈತ್ಯ ಅಕ್ಸೆಂಚರ್ ನಂತರದ ಸ್ಥಾನದಲ್ಲಿದೆ. ಬಿಲ್ ಗೇಟ್ಸ್ ಸ್ಥಾಪಿಸಿದ ಮೈಕ್ರೋಸಾಫ್ಟ್ ವಿಶ್ವದ 3 ನೇ ಅತ್ಯುತ್ತಮ ಕಂಪನಿಯಾಗಿದ್ದು, ಜರ್ಮನ್ ವಾಹನ ತಯಾರಕ ಬಿಎಂಡಬ್ಲ್ಯು 4 ನೇ ಸ್ಥಾನದಲ್ಲಿದೆ ಮತ್ತು ಜೆಫ್ ಬೆಜೋಸ್ ಸ್ಥಾಪಿಸಿದ ಅಮೆಜಾನ್ 5 ನೇ ಸ್ಥಾನದಲ್ಲಿದೆ.* TIME ವಿಶ್ವದ ಅತ್ಯುತ್ತಮ ಕಂಪನಿಗಳು 2024 ಪಟ್ಟಿಯಲ್ಲಿ ಭಾರತೀಯ ಕಂಪನಿಗಳು - ಎಚ್‌ಸಿಎಲ್‌, ಇನ್ಫೋಸಿಸ್‌, ವಿಪ್ರೋ, ಮಹೀಂದ್ರಾ ಗ್ರೂಪ್‌, ಆಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಎಲ್&ಟಿ, ಕೋಟಕ್‌ ಮಹಿಂದ್ರಾ ಬ್ಯಾಂಕ್‌, ಐಟಿಸಿ, ಹಿರೋ ಮೊಟೊಕಾರ್ಪ್‌, ರಿಲಯನ್ಸ್, ಮದರ್‌ಸನ್‌ ಗ್ರೂಪ್‌, ಅದಾನಿ ಗ್ರೂಪ್‌, ಎನ್‌ಟಿಪಿಸಿ, ಯೆಸ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಗೋದ್ರೆಜ್‌, ಬಜಾಜ್‌ ಗ್ರೂಪ್‌, ಸಿಪ್ಲಾ, ಬಿಇಎಲ್‌, ಎಂಆರ್‌ಎಪ್‌ ಕಂಪೆನಿಗಳಾಗಿವೆ.