* 2024ರ 19 ನೇ ಜಾಗತಿಕ ಹಸಿವು ಸೂಚ್ಯಂಕ (GHI) ಬಿಡುಗಡೆಯಾಗಿದ್ದು ಒಟ್ಟು 127 ರಾಷ್ಟ್ರಗಳ ಪೈಕಿ ಭಾರತ 105ನೇ ಸ್ಥಾನದಲ್ಲಿದೆ. ನೆರೆ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಗಳಿಗಿಂತಲೂ ಭಾರತ ಹಿಂದಿರುವುದನ್ನು ಈ ಸೂಚ್ಯಂಕ ತೋರಿಸಿದೆ.* 'ಕನ್ಸರ್ನ್ ವರ್ಲ್ಡ್‌ವೈಡ್' ಮತ್ತು 'ವೆಲ್ತುಂಗರ್‌ಹಿಲ್ಫ್' ಜಂಟಿಯಾಗಿ ಈ ಜಾಗತಿಕ ಹಸಿವು ಸೂಚ್ಯಂಕ (GHI)ವನ್ನು ಬಿಡುಗಡೆ ಮಾಡಿವೆ. * ಭಾರತ ತನ್ನ ನೆರೆ ರಾಷ್ಟ್ರವಾದ ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆಯಷ್ಟೇ ಮೇಲಿದೆ. ದೇಶದಲ್ಲಿ ಮಕ್ಕಳ ಅಪೌಷ್ಟಿಕತೆಯು ಗಂಭೀರ ಪ್ರಮಾಣದಲ್ಲಿದೆ ಎಂದು ಈ ಜಾಗತಿಕ ಹಸಿವು ಸೂಚ್ಯಂಕ ವಿವರಿಸಿದೆ.* ಜಾಗತಿಕ ಹಸಿವಿನ ಸೂಚ್ಯಂಕ ಪ್ರತಿ ವರ್ಷ ಬಿಡುಗಡೆಯಾಗಲಿದ್ದು ಇದರ ಆಧಾರದಲ್ಲಿ ಪ್ರತಿ ರಾಷ್ಟ್ರಗಳು ತಮ್ಮ ದೇಶದ ಹಸಿವಿನ ಪ್ರಮಾಣ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಲೋಚಿಸುತ್ತಿದೆ. ಭಾರತದ ನೆರೆಯ ರಾಷ್ಟ್ರಗಳು ಹಸಿವಿಗೆ ಸಂಬಂಧಿಸಿದಂತೆ ಭಾರತಕ್ಕಿಂತ ಮೇಲಿರುವುದು ಭಾರತದ ಪಾಲಿಗೆ ಗಂಭೀರ ವಿಷಯವಾಗಿದೆ.* 2030ರ ವೇಳೆಗೆ ಜಗತ್ತಿನಲ್ಲೇ ಹಸಿವಿನ ಪ್ರಮಾಣವನ್ನು ಶೂನ್ಯಕ್ಕೆ ತರಬೇಕು ಎಂಬುದು ಈ ಸೂಚ್ಯಂಕ ತಯಾರಿಸಿದವರ ಉದ್ದೇಶವಾಗಿದೆ.