* 2023ರ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ಜುಲೈ 31ರಿಂದ ಆಗಸ್ಟ 6ರ ವರೆಗೆ ಜರ್ಮನಿಯ ಬರ್ಲಿನ್ ನಲ್ಲಿ ನಡೆಯಿತು, ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ನಲ್ಲಿ ಭಾರತ 3 ಚಿನ್ನ 1 ಕಂಚು ಸೇರಿದಂತೆ ಒಟ್ಟು 4 ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಭಾರತ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.  * 2023ರ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪದಕ ವಿಜೇತರು :- ಅದಿತಿ ಗೋಪಿಚಂದ್ ಸ್ವಾಮಿ : ಮಹಿಳೆಯರ ವೈಯಕ್ತಿಕ ಕಾಂಪೌಂಡ್‌ನಲ್ಲಿ ಚಿನ್ನದ ಪದಕ  - ಓಜಸ್ ಪ್ರವೀಣ್‌ ಡಿಯೋಟಾಲೆ : ಪುರುಷರ ವೈಯಕ್ತಿಕ ಕಾಂಪೌಂಡ್‌ನಲ್ಲಿ ಚಿನ್ನದ ಪದಕ - ಜ್ಯೋತಿ ಸುರೇಖಾ ವೆನ್ನಂ, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್‌ ಸ್ವಾಮಿ : ಮಹಿಳೆಯರ ಸಂಯುಕ್ತ ತಂಡದಲ್ಲಿ ಚಿನ್ನದ ಪದಕ- ಜ್ಯೋತಿ ಸುರೇಖಾ ವೆನ್ನಂ : ಮಹಿಳೆಯರ ವೈಯಕ್ತಿಕ ಕಾಂಪೌಂಡ್‌ನಲ್ಲಿ ಕಂಚಿನ ಪದಕ  * 1931ರಲ್ಲಿ ಚಾಂಪಿಯನ್ ಶಿಪ್ ಆರಂಭವಾದಾಗಿನಿಂದ ಭಾರತ ಪುರುಷರ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ಪುರುಷರ ವೈಯಕ್ತಿಕ ಕಾಂಪೌಂಡ್‌ನಲ್ಲಿ ಓಜಸ್ ಪ್ರವೀನ್ ಡಿಯೋಟಾಲೆ 2023ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಚಿನ್ನ ಗೆದ್ದ ಭಾರತದ ಮೊದಲ ಪುರುಷ ಬಿಲ್ಲುಗಾರ ಎಂದು ದಾಖಲೆಯನ್ನು ಬರೆದಿದ್ದಾರೆ.   * 17 ವರ್ಷ ವಯಸ್ಸಿನ ಅದಿತಿ ಗೋಪಿಚಂದ್‌ ಸ್ವಾಮಿ ಫೈನಲ್‌ನಲ್ಲಿ ಮೆಕ್ಸಿಕೊದ ಆಂಡ್ರಿಯಾ ಬೆಸೆರಾ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಹಿರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಸ್ಪರ್ಧೆ ಗೆದ್ದ ಅತ್ಯಂತ ಕಿರಿಯ ಬಿಲ್ಲುಗಾರ್ತಿ ಎಂಬ ಖ್ಯಾತಿಗೆ ಅದಿತಿ ಪಾತ್ರರಾಗಿದ್ದಾರೆ.* 2023ರ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ನ ಪದಕಗಳ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ, ದಕ್ಷಿಣ ಕೊರಿಯಾ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಜರ್ಮನಿ, ಪೋಲೆಂಡ್ ಮತ್ತು ಟರ್ಕಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನವನ್ನು ಪಡೆದುಕೊಂಡಿವೆ.* 2024ರ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ಫ್ಯಾರಿಸ್ ನಲ್ಲಿ ನಡೆಯಲಿದೆ.