* ಲಿಂಗತಾರತಮ್ಮದ ಟೀಕೆಗಳನ್ನು ಎದುರಿಸಿದ್ದ ಮಿಸ್ ಫ್ರಾನ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಈ ಬಾರಿ ಗಿಡ್ಡದ ಕೂದಲಿನ ಸುಂದರಿ ಈವ್ ಗಿಲ್ಲೆಸ್ ಅವರು ವಿಜೇತರಾಗಿದ್ದಾರೆ.* 'ಇದು ನನ್ನ ಗಿಡ್ಡ ಕೂದಲಿನ ವೈವಿದ್ಯೆತೆಗೆ ಸಿಕ್ಕ ಜಯ' ಎಂದು ಈವ್ ಗಿಲ್ಲೆಸ್ ಅವರು ತಿಳಿಸಿದ್ದಾರೆ. 'ನಾವು ಮಹಿಳೆಯ ಸೌಂದರ್ಯವನ್ನು ಉದ್ದ ಕೂದಲಿನೊಂದಿಗೂ ಅಳೆಯುತೇವೆ. ಆದರೆ, ನಾನು ಗಿಡ್ಡ ಕೂದಲಿನೊಂದಿಗೆ ಈ ಸ್ಪರ್ಧೆಯಲ್ಲಿ ಕಾಣಿಸಿಕೊಂಡೆ. * ಈವ್ ಗಿಲ್ಲೆಸ್ ಅವರು ಡಿಸೆಂಬರ್ 16 ರಂದು ಮಿಸ್ ಫ್ರಾನ್ಸ್ ಕಿರೀಟ ಮುಡಿಗೇರಿಸಿಕೊಂಡರು.* ಉತ್ತರ ಫ್ರಾನ್ಸ್‌ನ ಡಂಕಿರ್ಕ್ ಬಳಿಯ ಹಳ್ಳಿಯೊಂದರ ಮಹಿಳೆ ಡಿಜಾನ್ ನಗರದಲ್ಲಿ 5,000 ಸ್ಪರ್ಧೆಯ ಅಭಿಮಾನಿಗಳ ಮುಂದೆ ಆಯ್ಕೆಯಾದರು. ಹಾಗೂ ವೀಕ್ಷಕರಿಂದ ಅರ್ಧದಷ್ಟು ಮತ್ತು ಉಳಿದ ಅರ್ಧವನ್ನು ಏಳು ಮಹಿಳೆಯರ ತೀರ್ಪುಗಾರರಿಂದ ಇನ್ನರ್ಧದಷ್ಟು ಅಂಕ ಪರಿಗಣಿಸಿ ಆಯ್ಕೆ ಮಾಡಲಾಯಿತು.