* 2023ರ ಜಾಗತಿಕ ಜಲ ನಿರ್ವಹಣಾ ವರದಿಯು ಜಾಗತಿಕವಾಗಿ 72ಕ್ಕೂ ಅಧಿಕ ರಾಷ್ಟ್ರಗಳು ಕಳೆದ 45 ವರ್ಷಗಳಲ್ಲಿಯೇ ಅತ್ಯಧಿಕ ತಾಪಮಾನವನ್ನು ಎದುರಿಸಿವೆ ಎಂದು ಜಾಗತಿಕ ಜಲ ನಿರ್ವಹಣಾ ವರದಿ-2023 ತಿಳಿಸಿದೆ. ವರ್ಷದ ಎಲ್ಲ ಋತುಗಳಲ್ಲಿಯೂ ತಾಪಮಾನ ಅತ್ಯಧಿಕವಾಗಿತ್ತು ಎಂದು ವರದಿ ತಿಳಿಸಿದೆ.* 2023ರಲ್ಲಿ ದಾಖಲೆಯ ತಾಪಮಾನ ವರದಿಯಾಗಿದೆ. ಈ ವರದಿಯ ಪ್ರಕಾರ ಬೆಳವಣಿಗೆಯು ಚಂಡಮಾರುತಗಳು, ಮಳೆ, ಜ್ವಾಲಾಮುಖಿಯನ್ನು ಉಲ್ಬಣಗೊಳಿಸುತ್ತವೆ ಮತ್ತು ಜಲಚಕ್ರದ ಮೇಲೆ ಗಾಢ ಪರಿಣಾಮ ಬೀರುತ್ತದೆ ಎಂದು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ ಜಲ ವಿಜ್ಞಾನ ಮತ್ತು ನಿರ್ವಹಣೆಯ ಪ್ರಾಧ್ಯಾಪಕ ಆಲ್ಬರ್ಟ್ ವ್ಯಾನ್ ಡಿಸ್ಕ್ ಅಭಿಪ್ರಾಯಪಟ್ಟಿದ್ದಾರೆ.* ವರದಿಯು ವಿವಿಧ ಪ್ರದೇಶಗಳ ಮಳೆ, ಗಾಳಿಯ ಉಷ್ಣತೆ, ಆದ್ರ್ರತೆ, ಮಣ್ಣು, ಅಂತರ್ಜಲ, ನದಿ ಹರಿವು, ಪ್ರವಾಹ, ಸರೋವರದ ಪರಿಮಾಣಗಳ ಮಾಹಿತಿಯನ್ನು ಒಳಗೊಂಡಿದೆ.*  ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರದ ಮೇಲ್ಮ ತಾಪಮಾನ ಹೆಚ್ಚಾಗುತ್ತದೆ. ಉಷ್ಣವಲಯದ ಚಂಡಮಾರುತಗಳು ವಿಪರೀತ ಮಳೆಗೆ ಕಾರಣವಾಗುತ್ತವೆ. 2023ರಲ್ಲಿ ಪ್ರಪಂಚದಾದ್ಯಂತ ಹಲವಾರು ಚಂಡಮಾರುತಗಳು ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ವರದಿ ಹೇಳಿದೆ.*  2014 ರ ಇಚೆಗೆ ಭಾರತ, ಚೀನಾ, ಟರ್ಕಿಯಲ್ಲಿ ಮಣ್ಣಿನ ತೇವಾಂಶವು ಶೇ.3.5ರಷ್ಟು ಹೆಚ್ಚಾಗಿದೆ. 2001-2005 ಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಅರಣ್ಯಗಳ ಪ್ರಮಾಣ ಶೇ.4.7ರಷ್ಟು ಹೆಚ್ಚಿದೆ. ಜಾಗತಿಕ ಸರಾಸರಿ ನದಿ ಹರಿವು ಕೂಡ ಶೇ.4ರಷ್ಟು ಹೆಚ್ಚಳವಾಗಿದೆ.*  ಇತ್ತೀಚಿನ ದಶಕಗಳಲ್ಲಿ ಸರೋವರಗಳ ಪ್ರಮಾಣ ಹೆಚ್ಚುತ್ತಿದೆ. 2023ರಲ್ಲಿ ನೀರಿನ ಈ ಸಂಗ್ರಹವು ಶೇ.7ರಷ್ಟು ಹೆಚ್ಚಾಗಿದೆ. ಜಗತ್ತಿನಲ್ಲಿರುವ ಒಟ್ಟು ಸರೋವರಗಳ ಪೈಕಿ ಕೆನಡಾ, ಅಮೆರಿಕ, ಚೀನಾ, ರಷ್ಯಾ, ಬ್ರೆಜಿಲ್ ಹಾಗೂ ಭಾರತದಲ್ಲಿ ಶೇ.64ರಷ್ಟು ಕೃತಕ ಮತ್ತು ನೈಸರ್ಗಿಕ ಸರೋವರಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.*  ವಿಶ್ವ ಸಂಸ್ಥೆಯ ಅಧೀನದಲ್ಲಿರುವ ವಿಶ್ವ ಹವಾಮಾನ ಸಂಸ್ಥೆಯು 2023ರ ಜಾಗತಿಕ ಜಲ ನಿರ್ವಹಣಾ ವರದಿಯನ್ನು ಬಿಡುಗಡೆ ಮಾಡಿದೆ.