* ಪ್ರಸಕ್ತ ವರ್ಷದ ಜೂನ್ ಅಂತ್ಯದ ವೇಳೆಗೆ ದೇಶದಲ್ಲಿ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಿಂದ (ಡಿಪಿಐಐಟಿ) ಮಾನ್ಯತೆ ಪಡೆದ 1.40 ಲಕ್ಷ ನವೋದ್ಯಮಗಳಿವೆ.* ಅತಿ ಹೆಚ್ಚು ನವೋದ್ಯಮಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.* ನವೋದ್ಯಮಗಳ ಮೇಲಿನ ಹೂಡಿಕೆ ಹೆಚ್ಚಿಸಲು ಪರ್ಯಾಯ ಹೂಡಿಕೆ ನಿಧಿ ಯೋಜನೆ (ಎಐಎಫ್) ರೂಪಿಸಲಾಗಿದೆ. ಇದರಡಿ 2024ರ ಜೂನ್ ಅಂತ್ಯದ ವೇಳೆಗೆ 96 ನವೋದ್ಯಮಗಳಲ್ಲಿ 805 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ನವೋದ್ಯಮಗಳಿಂದ 12.42 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಿವೆ. 2023ರಲ್ಲಿ 148 ನವೋದ್ಯಮಗಳ ಮೇಲೆ 3,366 ಕೋಟಿ ರೂ. ಹೂಡಿಕೆ ಮಾಡಲಾಗಿದೆ.* ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ 2023ರಲ್ಲಿ 107 ನವೋದ್ಯಮಗಳಿಗೆ ಕೇಂದ್ರ 271 ಕೋಟಿ ರೂ. ಸಾಲ ನೀಡಿದೆ. ಪ್ರಸಕ್ತ ವರ್ಷ ಜೂನ್ ಅಂತ್ಯಕ್ಕೆ 75 ನವೋದ್ಯಮಗಳಿಗೆ 154 ಕೋಟಿ ರೂ. ಸಾಲ ನೀಡಿದೆ.* ನವೋದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡುವರರಿಗೆ ಶೇ.30.9ರಷ್ಟು ಏಂಜೆಲ್ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ 2016ರ ಏಪ್ರಿಲ್ ನಂತರ ಸ್ಥಾಪಿಸಲ್ಪಟ್ಟ ಡಿಪಿಐಐಟಿಯಿಂದ ಮಾನ್ಯತೆ ಪಡೆದ ನವೋದ್ಯಮಗಳಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ರಡಿ(ಐಎಸಿ) ಈ ತೆರಿಗೆಯಿಂದ ವಿನಾಯಿತಿ ಲಭಿಸಿದೆ.* 2024-25ನೇ ಆರ್ಥಿಕ ಸಾಲಿನ ಬಜೆಟ್‌ನಲ್ಲಿ ಏಂಜೆಲ್ ತೆರಿಗೆ ತೆರಿಗೆಯನ್ನು ರದ್ದುಪಡಿಸಲಾಗಿದೆ. ದೇಶದಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸಲು, ಹೂಡಿಕೆ ಉತ್ತೇಜಿಸಲು ಸರಕಾರ ಈ ಕ್ರಮಕ್ಕೆ ಮುಂದಾಗಿದೆ.* ಮಾರುಕಟ್ಟೆ ಪ್ರವೇಶಿಸುವ ನವೋದ್ಯಮಗಳು ಸ್ಥಿರತೆ ಕಾಯ್ದುಕೊಳ್ಳಲು (ಇನ್ ಕ್ಯುಬೇಟರ್ ಹಂತ) 2ರಿಂದ 3 ವರ್ಷ ಬೇಕಿದೆ. ಈ ವೇಳೆ ಅವುಗಳಿಗೆ ಹೆಚ್ಚು ಆರ್ಥಿಕ ನೆರವು ಬೇಕಿರುತ್ತದೆ. ಹೀಗಾಗಿ ಇವುಗಳಿಗೆ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಅನುವಾಗುವಂತೆ ಕೇಂದ್ರ ಸರಕಾರ 2021ರಲ್ಲಿ ಸ್ಟಾರ್ಟಪ್ ಇಂಡಿಯಾ ಸೀಡ್ ಫಂಡ್ ಯೋಜನೆ ಜಾರಿಗೆ ತಂದಿದೆ. ಇದರಡಿ ವಿವಿಧ ಹಂತಗಳಲ್ಲಿ 50 ಲಕ್ಷ ರೂ.ವರೆಗೆ ಆರ್ಥಿಕ ನೆರವು ಕಲ್ಪಿಸುತ್ತದೆ.* ಈ ಯೋಜನೆಯಡಿ 2023ರಲ್ಲಿ 1025 ನವೋದ್ಯಮಗಳಿಗೆ 186.19 ಕೋಟಿ ರೂ., ಪ್ರಸಕ್ತ ವರ್ಷ ಜೂನ್ ಅಂತ್ಯದವರೆಗೆ 592 ನವೋದ್ಯಮಗಳಿಗೆ 90.52 ಕೋಟಿ ರೂ. ನೆರವು ನೀಡಲಾಗಿದೆ.* ಮೊದಲನೇ ಸ್ಥಾನ : ಮಹಾರಾಷ್ಟ್ರ ಎರಡನೇ ಸ್ಥಾನ : ಕರ್ನಾಟಕ ಮೂರನೇ ಸ್ಥಾನ : ದೆಹಲಿ ನಾಲ್ಕನೇ ಸ್ಥಾನ : ಉತ್ತರ ಪ್ರದೇಶ ಐದನೇ ಸ್ಥಾನ : ಗುಜರಾತ್