* ಭಾರತದ ಪ್ರಾಚೀನ ಆಧ್ಯಾತ್ಮಿಕ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 3 ರಂದು ನವದೆಹಲಿಯಲ್ಲಿ “ಪಿಪ್ರಾಹ್ವಾ ಪವಿತ್ರ ಅವಶೇಷಗಳ ಮಹಾ ಅಂತರರಾಷ್ಟ್ರೀಯ ಪ್ರದರ್ಶನ”ವನ್ನು ಉದ್ಘಾಟಿಸಿದರು. ಈ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಎಕ್ಸ್‌ಪೋಸಿಷನ್ನಲ್ಲಿ ಇತ್ತೀಚೆಗೆ ಭಾರತಕ್ಕೆ ಮರುಪಡೆಯಲಾದ (Repatriated) ಹಾಗೂ ಭಗವಾನ್ ಬುದ್ಧರಿಗೆ ನೇರವಾಗಿ ಸಂಬಂಧಿಸಿದ ಅಪರೂಪದ ಬೌದ್ಧ ಅವಶೇಷಗಳು ಪ್ರದರ್ಶನಕ್ಕೆ ಇರಿಸಲ್ಪಟ್ಟಿದ್ದು, ಇದು ಭಾರತದ ನಾಗರಿಕತೆ, ಪ್ರಾರಂಭಿಕ ಬೌದ್ಧ ಧರ್ಮ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ಮಹತ್ವವನ್ನು ಒತ್ತಿ ಹೇಳುತ್ತದೆ.* ಪಿಪ್ರಾಹ್ವಾ ಅವಶೇಷಗಳು 1898ರಲ್ಲಿ ಪತ್ತೆಯಾಗಿದ್ದು, ಅವು ಭಗವಾನ್ ಬುದ್ಧರೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಅತ್ಯಂತ ಪ್ರಾಚೀನ ಪುರಾತತ್ವ ಸಾಕ್ಷ್ಯಗಳು ಎಂದು ಪರಿಗಣಿಸಲಾಗುತ್ತದೆ. ಪಿಪ್ರಾಹ್ವಾವನ್ನು ಪ್ರಾಚೀನ ಕಪಿಲವಸ್ತು ಎಂದು ಗುರುತಿಸಲಾಗಿದ್ದು, ಬುದ್ಧರು ತ್ಯಾಗ ಸ್ವೀಕರಿಸುವ ಮೊದಲು ತಮ್ಮ ಬಾಲ್ಯವನ್ನು ಕಳೆಯಿದ ಸ್ಥಳವೆಂದು ನಂಬಲಾಗುತ್ತದೆ. ಈ ಹಿನ್ನೆಲೆಗಳಿಂದಾಗಿ, ಪಿಪ್ರಾಹ್ವಾ ಅವಶೇಷಗಳು ಬುದ್ಧರ ಜೀವನ, ಪ್ರಾರಂಭಿಕ ಬೌದ್ಧ ಧರ್ಮದ ವಿಕಾಸ ಮತ್ತು ಇತಿಹಾಸದ ಅಧ್ಯಯನಕ್ಕೆ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿವೆ.* ಮಹಾ ಪ್ರದರ್ಶನದ ಪ್ರಮುಖ ವೈಶಿಷ್ಟ್ಯಗಳು:“The Light and the Lotus: Relics of the Awakened One” ಎಂಬ ಶೀರ್ಷಿಕೆಯ ಈ ಪ್ರದರ್ಶನವುರೈ ಪಿಥೋರಾ ಸಾಂಸ್ಕೃತಿಕ ಸಂಕೀರ್ಣ, ನವದೆಹಲಿಯಲ್ಲಿ ಆಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸಂಗ್ರಹಾಲಯ ಮತ್ತು ಭಾರತೀಯ ಸಂಗ್ರಹಾಲಯಗಳಲ್ಲಿ ಸಂರಕ್ಷಿತವಾಗಿರುವ ಪಿಪ್ರಾಹ್ವಾ ಅವಶೇಷಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಿ, ಭಗವಾನ್ ಬುದ್ಧರ ಜೀವನ, ಉಪದೇಶಗಳು ಮತ್ತು ಪರಂಪರೆಯನ್ನು ವಿವರಿಸುತ್ತದೆ.* ಸಾಂಸ್ಕೃತಿಕ ಮತ್ತು ನಾಗರಿಕತೆಯ ಮಹತ್ವ:=> ಈ ಪ್ರದರ್ಶನವು ಬೌದ್ಧ ಧರ್ಮವು ಭಾರತದಲ್ಲಿ ಹುಟ್ಟಿ ಏಷ್ಯಾದಾದ್ಯಂತ ಹರಡಿದುದನ್ನು ತೋರಿಸುತ್ತದೆ.=> ಭಾರತವು ಬೌದ್ಧ ಧರ್ಮದ ಆಧ್ಯಾತ್ಮಿಕ ತವರುನಾಡು ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳುತ್ತದೆ.=> ಇದು ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ (Cultural Diplomacy)ಯನ್ನು ಬಲಪಡಿಸುತ್ತದೆ.=> ಪರಂಪರೆ, ಆಧ್ಯಾತ್ಮ ಮತ್ತು ಏಷ್ಯಾದ ಸಾಮೂಹಿಕ ಸಂಸ್ಕೃತಿಯ ಮೂಲಕ ಭಾರತದ ಸಾಫ್ಟ್ ಪವರ್ ವೃದ್ಧಿಸುವ ಪ್ರಧಾನಮಂತ್ರಿಯ ದೃಷ್ಟಿಕೋನಕ್ಕೆ ಇದು ಅನುಗುಣವಾಗಿದೆ.* ಮರುಪಡೆಯುವಿಕೆ ಮತ್ತು ಸಂರಕ್ಷಣಾ ಪ್ರಯತ್ನಗಳು:=> ಶತಮಾನಕ್ಕಿಂತ ಹೆಚ್ಚು ಕಾಲದ ನಂತರ ಪಿಪ್ರಾಹ್ವಾ ಅವಶೇಷಗಳನ್ನು ಭಾರತಕ್ಕೆ ಮರಳಿ ತರುವುದು ಸರ್ಕಾರದ ನಿರಂತರ ಪ್ರಯತ್ನಗಳ ಫಲಿತಾಂಶವಾಗಿದೆ.=> ಇದರಲ್ಲಿ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಪ್ರಮುಖ ಪಾತ್ರವಹಿಸಿದೆ.=> ಸಾಂಸ್ಕೃತಿಕ ಮರುಪಡೆಯುವಿಕೆ ಭಾರತ ಸರ್ಕಾರದ ಪರಂಪರೆ ನೀತಿಯ ಪ್ರಮುಖ ಅಂಶವಾಗಿದೆ.=> ಇಂತಹ ಪ್ರಯತ್ನಗಳು ರಾಷ್ಟ್ರೀಯ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ, ಅಧ್ಯಯನಾರ್ಥಿಗಳು, ಭಕ್ತರು ಮತ್ತು ಸಾಮಾನ್ಯ ಜನರಿಗೆ ಅವುಗಳನ್ನು ಲಭ್ಯವಾಗುವಂತೆ ಮಾಡುತ್ತವೆ.