Job Description: * ಬ್ರಹ್ಮಾವರ ಹೇರೂರು ಸಮೀಪದ ಸುವರ್ಣ ನದಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಡ್ರಾಗನ್ ಬೋಟ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದವರು ಶನಿವಾರ ಫೆ.25 ರಂದು ಒಂದು ಚಿನ್ನದ ಪದಕ ಪಡೆದುಕೊಂಡರು.* ಇಂಡಿಯನ್ ಕಯಾಕಿಂಗ್ ಆ್ಯಂಡ್ ಕನೋಯಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಉಡುಪಿ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಯೋಜನೆ ವತಿಯಿಂದ ನಡೆಯುತ್ತಿರುವ ಈ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ ಶಿಪ್ ನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕವೂ ಸೇರಿದಂತೆ 15 ರಾಜ್ಯಗಳ 700 ಕ್ರೀಡಾಪಡುಗಳು ಭಾಗವಹಿಸಿದ್ದಾರೆ.* ಈ ಚಾಂಪಿಯನ್ ಶಿಪ್ ನಲ್ಲಿ 200 ಮೀ, 500 ಮೀ, 2000 ಮೀ ಟ್ರ್ಯಾಕ್ ಗಳಲ್ಲಿ ಪುರುಷರು, ಮಹಿಳೆಯರು ಮತ್ತು ಮಿಕ್ಸ್ಡ್ ವಿಭಾಗಗಳ ಜ್ಯೂನಿಯರ್ ಮತ್ತು ಸೀನಿಯರ್ ಸ್ಪರ್ಧೆಗಳು ನಡೆಯಲಿದ್ದು, ಡಿ-20 ಮಿಶ್ರ ವಿಭಾಗದ 500 ಮೀಟರ್ ಮಧ್ಯಪ್ರದೇಶದ ಸ್ಪರ್ಧೆಯಲ್ಲಿ ಸೋಲನುಭವಿಸಿದ ಕರ್ನಾಟಕ ಬೆಳ್ಳಿ ಪದಕ ಪಡೆದುಕೊಂಡಿತು, ಮಧ್ಯಪ್ರದೇಶವು ಚಿನ್ನದ ಪದಕ ಪಡೆದುಕೊಂಡಿತು.