SSLC ಅಭ್ಯರ್ಥಿಗಳಿಗೆ ಸುವರ್ಣಾವಕಾಶ: ಯಾದಗಿರಿ ಕೋರ್ಟ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ. ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ.
Published by: Yallamma G | Date:13 ಮಾರ್ಚ್ 2026

ನಮಸ್ಕಾರ ಸ್ನೇಹಿತರೆ, KPSCVaani ಗೆ ಸ್ವಾಗತ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ, ಅದರಲ್ಲೂ 10ನೇ ತರಗತಿ (SSLC) ಪಾಸಾಗಿ ನ್ಯಾಯಾಲಯದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ!
ಕರ್ನಾಟಕದ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದೆ. ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವು ಕಲ್ಯಾಣ ಕರ್ನಾಟಕ (ಸ್ಥಳೀಯ ವೃಂದ - 371J) ದಲ್ಲಿಖಾಲಿ ಇರುವ ಜವಾನ (Peon) ಮತ್ತು ಆದೇಶ ಜಾರಿಕಾರ (Process Server) ಒಟ್ಟು 14 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
10ನೇ ತರಗತಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 12, 2026.
ಈ ಲೇಖನದಲ್ಲಿ ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ವೇತನ, ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಸಂಪೂರ್ಣವಾಗಿ ವಿವರಿಸಲಾಗಿದೆ.
KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿಯ ಸಂಕ್ಷಿಪ್ತ ವಿವರ (Overview)

ಹುದ್ದೆಗಳ ವಿವರ
ಶೈಕ್ಷಣಿಕ ಅರ್ಹತೆ (Educational Qualifications)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
ವಯೋಮಿತಿ ಮತ್ತು ಸಡಿಲಿಕೆ (Age Limit & Relaxation)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು (12-04-2026) ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
ಇದನ್ನು ಓದಿ :SSLC, ಪಿಯುಸಿ ಪಾಸಾದವರಿಗೆ ಗುಡ್ನ್ಯೂಸ್:ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ
ವಿಶೇಷ ಸೂಚನೆ: ರಾಜ್ಯ ಸರ್ಕಾರದ ಆದೇಶದ ಅನ್ವಯ, 31.12.2027 ರವರೆಗೆ ನಡೆಯುವ ನೇರ ನೇಮಕಾತಿಗಳಿಗೆ ಒಂದು ಬಾರಿಯ ಕ್ರಮವಾಗಿ (as a one time measure) ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ಅಂಗವಿಕಲರಿಗೆ, ವಿಧವೆಯರಿಗೆ ಮತ್ತು ಜೀತ ಕಾರ್ಮಿಕರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕದ ವಿವರ (Application Fee)
ಅರ್ಜಿ ಶುಲ್ಕವನ್ನು ಆನ್‌ಲೈನ್ (Net Banking / Credit / Debit Card) ಮೂಲಕ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಲನ್ ಮೂಲಕ ಪಾವತಿಸಬಹುದು:
ವೇತನ ಶ್ರೇಣಿ (Salary Details)
1. ಜವಾನ (Peon) - ವೇತನ ಶ್ರೇಣಿ: ರೂ. 27,000 ದಿಂದ ರೂ. 46,675 ರವರೆಗೆ ಹಾಗೂ ಇತರೇ ಭತ್ಯೆಗಳು.
2. ಆದೇಶ ಜಾರಿಕಾರ (Process Server) - ವೇತನ ಶ್ರೇಣಿ: ರೂ. 31,775 ದಿಂದ ರೂ. 61,300 ರವರೆಗೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
ಇದು ಯಾವುದೇ ಲಿಖಿತ ಪರೀಕ್ಷೆ ಇಲ್ಲದ ನೇರ ನೇಮಕಾತಿಯಾಗಿದೆ.
ಅರ್ಜಿ ಸಲ್ಲಿಸುವ ವಿಧಾನ (How to Apply)
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 13, 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 12, 2026
• ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಏಪ್ರಿಲ್ 13, 2026
ಪ್ರಮುಖ ಸೂಚನೆಗಳು (Important Instructions)
ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಇದೊಂದು ಸುವರ್ಣಾವಕಾಶ. ಕೊನೆಯ ದಿನಾಂಕದವರೆಗೆ ಕಾಯದೆ, ಕೂಡಲೇ ಅಗತ್ಯ ದಾಖಲೆಗಳೊಂದಿಗೆ (ಜಾತಿ, ಆದಾಯ, 371-J ಪ್ರಮಾಣ ಪತ್ರ ) ಅರ್ಜಿಯನ್ನು ಸಲ್ಲಿಸಿ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿಯ ಇತ್ತೀಚಿನ ಸರ್ಕಾರಿ ಉದ್ಯೋಗಗಳ ನಿಖರ ಮಾಹಿತಿಗಾಗಿ KPSCVaani ವೆಬ್‌ಸೈಟ್‌ಗೆ ನಿರಂತರವಾಗಿ ಭೇಟಿ ನೀಡುತ್ತಿರಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯದಿರಿ!

1. ಜವಾನ (Peon) - 05 ಹುದ್ದೆಗಳು
ಮೀಸಲಾತಿ ವಿವರ:
ಸಾಮಾನ್ಯ - 02
ಪ್ರವರ್ಗ-2ಎ - 01
ಪ್ರವರ್ಗ-3ಎ - 01
ಪ್ರವರ್ಗ-3ಬಿ - 01.
2. ಆದೇಶ ಜಾರಿಕಾರ (Process Server) - 09 ಹುದ್ದೆಗಳು
ಮೀಸಲಾತಿ ವಿವರ:
ಸಾಮಾನ್ಯ - 06
ಪರಿಶಿಷ್ಟ ಜಾತಿ - 01
ಪ್ರವರ್ಗ-2ಎ - 02.
ಶೈಕ್ಷಣಿಕ ಅರ್ಹತೆ (Educational Qualifications)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಜವಾನ (Peon): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸುವ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕನ್ನಡ ಓದಲು ಮತ್ತು ಬರೆಯಲು ಬರಬೇಕು.
- ಆದೇಶ ಜಾರಿಕಾರ (Process Server): SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಲಘು ವಾಹನ ಚಾಲನಾ ಪರವಾನಿಗೆ ಪತ್ರ (Driving Licence) ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
- ಗಮನಿಸಿ: 10ನೇ ತರಗತಿಯ ಅಂಕಗಳು ಶ್ರೇಣಿಯಲ್ಲಿ (Grades) ಇದ್ದರೆ, ಶಾಲಾ ಮುಖ್ಯಸ್ಥರಿಂದ ಅದನ್ನು ಗರಿಷ್ಠ ಅಂಕಗಳು ಮತ್ತು ಪಡೆದ ಅಂಕಗಳಾಗಿ ಪರಿವರ್ತಿಸಿ, ಶೇಕಡಾವಾರು ಅಂಕಗಳನ್ನು ನಿಖರವಾಗಿ ಅರ್ಜಿಯಲ್ಲಿ ನಮೂದಿಸಬೇಕು
ವಯೋಮಿತಿ ಮತ್ತು ಸಡಿಲಿಕೆ (Age Limit & Relaxation)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು (12-04-2026) ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ವರ್ಗ (General): 35 ವರ್ಷ + 5 ವರ್ಷ = 40 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ: 38 ವರ್ಷ + 5 ವರ್ಷ = 43 ವರ್ಷ
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1: 40 ವರ್ಷ + 5 ವರ್ಷ = 45 ವರ್ಷ
ಇದನ್ನು ಓದಿ :SSLC, ಪಿಯುಸಿ ಪಾಸಾದವರಿಗೆ ಗುಡ್ನ್ಯೂಸ್:ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ
ವಿಶೇಷ ಸೂಚನೆ: ರಾಜ್ಯ ಸರ್ಕಾರದ ಆದೇಶದ ಅನ್ವಯ, 31.12.2027 ರವರೆಗೆ ನಡೆಯುವ ನೇರ ನೇಮಕಾತಿಗಳಿಗೆ ಒಂದು ಬಾರಿಯ ಕ್ರಮವಾಗಿ (as a one time measure) ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ಅಂಗವಿಕಲರಿಗೆ, ವಿಧವೆಯರಿಗೆ ಮತ್ತು ಜೀತ ಕಾರ್ಮಿಕರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕದ ವಿವರ (Application Fee)
ಅರ್ಜಿ ಶುಲ್ಕವನ್ನು ಆನ್‌ಲೈನ್ (Net Banking / Credit / Debit Card) ಮೂಲಕ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಲನ್ ಮೂಲಕ ಪಾವತಿಸಬಹುದು:
- ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 200/-
- ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ರೂ. 100/-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ರೂ. 100/-
- ಶುಲ್ಕ ಪಾವತಿಸಲು ಕಡೆಯ ದಿನಾಂಕ: 13-04-2026
ವೇತನ ಶ್ರೇಣಿ (Salary Details)
1. ಜವಾನ (Peon) - ವೇತನ ಶ್ರೇಣಿ: ರೂ. 27,000 ದಿಂದ ರೂ. 46,675 ರವರೆಗೆ ಹಾಗೂ ಇತರೇ ಭತ್ಯೆಗಳು.
2. ಆದೇಶ ಜಾರಿಕಾರ (Process Server) - ವೇತನ ಶ್ರೇಣಿ: ರೂ. 31,775 ದಿಂದ ರೂ. 61,300 ರವರೆಗೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
ಇದು ಯಾವುದೇ ಲಿಖಿತ ಪರೀಕ್ಷೆ ಇಲ್ಲದ ನೇರ ನೇಮಕಾತಿಯಾಗಿದೆ.
- ಮೆರಿಟ್ ಪಟ್ಟಿ: SSLC ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಜವಾನ ಹುದ್ದೆಗೆ 1:10 ರ ಅನುಪಾತದಲ್ಲಿ ಹಾಗೂ ಆದೇಶ ಜಾರಿಕಾರ ಹುದ್ದೆಗೆ 1:25 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
- ಸಂದರ್ಶನ (Interview): ಸಂದರ್ಶನವು ಒಟ್ಟು 10 ಅಂಕಗಳನ್ನು ಹೊಂದಿರುತ್ತದೆ.
- ಅಂತಿಮ ಆಯ್ಕೆ: ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು 02 ವರ್ಷಗಳ ಕಾಲ ಪರಿವೀಕ್ಷಣಾ (Probationary) ಅವಧಿಯಲ್ಲಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ (How to Apply)
- ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://yadgir.dcourts.gov.in/notice-category/recruitments/.
- ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಭ್ಯರ್ಥಿಗಳು ತಮ್ಮ ಇತ್ತೀಚಿನ ಬಣ್ಣದ ಭಾವಚಿತ್ರ (50kb, jpg format) ಮತ್ತು ಬಿಳಿ ಹಾಳೆಯ ಮೇಲೆ ಕಪ್ಪು ಪೆನ್ನಿನಿಂದ ಮಾಡಿದ ಸಹಿಯನ್ನು (2kb, jpg format) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
- ಎಲ್ಲಾ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ.
- ಆನ್‌ಲೈನ್ ಮೂಲಕ ಅಥವಾ ಚಲನ್ ಡೌನ್‌ಲೋಡ್ ಮಾಡಿಕೊಂಡು ಎಸ್‌ಬಿಐ (SBI) ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 13, 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 12, 2026
• ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಏಪ್ರಿಲ್ 13, 2026
ಪ್ರಮುಖ ಸೂಚನೆಗಳು (Important Instructions)
- ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ನೋಟಿಫಿಕೇಶನ್ ಸಂಪೂರ್ಣವಾಗಿ ಓದಬೇಕು.
- ಸರಿಯಾದ ಮಾಹಿತಿಯನ್ನು ಮಾತ್ರ ಅರ್ಜಿಯಲ್ಲಿ ನಮೂದಿಸಬೇಕು.
- ದಾಖಲೆಗಳ ಪರಿಶೀಲನೆಯ ವೇಳೆ ತಪ್ಪು ಮಾಹಿತಿ ಕಂಡುಬಂದರೆ ಅರ್ಜಿ ರದ್ದುಪಡಿಸಲಾಗುತ್ತದೆ.
- ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರತಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬೇಕು.
ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಇದೊಂದು ಸುವರ್ಣಾವಕಾಶ. ಕೊನೆಯ ದಿನಾಂಕದವರೆಗೆ ಕಾಯದೆ, ಕೂಡಲೇ ಅಗತ್ಯ ದಾಖಲೆಗಳೊಂದಿಗೆ (ಜಾತಿ, ಆದಾಯ, 371-J ಪ್ರಮಾಣ ಪತ್ರ ) ಅರ್ಜಿಯನ್ನು ಸಲ್ಲಿಸಿ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿಯ ಇತ್ತೀಚಿನ ಸರ್ಕಾರಿ ಉದ್ಯೋಗಗಳ ನಿಖರ ಮಾಹಿತಿಗಾಗಿ KPSCVaani ವೆಬ್‌ಸೈಟ್‌ಗೆ ನಿರಂತರವಾಗಿ ಭೇಟಿ ನೀಡುತ್ತಿರಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯದಿರಿ!
No. of posts: 14
Application Start Date: 13 ಮಾರ್ಚ್ 2026
Application End Date: 12 ಎಪ್ರಿಲ್ 2026

Comments