ಉತ್ತರ ಪ್ರದೇಶ ರಾಜ್ಯ ಸೇತು ನಿಗಮ ನಿಯಮಿತ (UPSBCL)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ

ಉತ್ತರ ಪ್ರದೇಶ ರಾಜ್ಯ ಸೇತು ನಿಗಮ ನಿಯಮಿತ (UPSBCL) 2025ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 57 ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು 2025ರ ಆಗಸ್ಟ್ 07ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
ಸಹಾಯಕ ಎಂಜಿನಿಯರ್ (ಸಿವಿಲ್) : 50
ಸಹಾಯಕ ಎಂಜಿನಿಯರ್ ( ಮೆಕಾನಿಕಲ್ ) : 07
ಸಂಸ್ಥೆ ವಿವರಗಳು :
ಸಂಸ್ಥೆ ಹೆಸರು: Uttar Pradesh State Bridge Corporation Limited (UPSBCL)
ಒಟ್ಟು ಹುದ್ದೆಗಳು : 57
ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಯ ಹೆಸರು : ಸಹಾಯಕ ಎಂಜಿನಿಯರ್
ವೇತನ ಶ್ರೇಣಿ : ₹56,100 – ₹1,77,500/- ಪ್ರತಿಮಾಸ
ಅರ್ಹತೆಗಳು :
AE (ಸಿವಿಲ್) : ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ
AE ( ಮೆಕಾನಿಕಲ್ ) : ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ
ವಯೋಮಿತಿ (01-ಜನವರಿ-2025ರಂತೆ) :
ಕನಿಷ್ಠ ವಯಸ್ಸು : 21 ವರ್ಷ
ಗರಿಷ್ಠ ವಯಸ್ಸು : 40 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ (ಉತ್ತರ ಪ್ರದೇಶ ಅಭ್ಯರ್ಥಿಗಳಿಗಾಗಿ):
* SC/ST/OBC: 05 ವರ್ಷ
* ಅಂಗವಿಕಲರು (PH): 15 ವರ್ಷ
ಅರ್ಜಿಗೆ ಯಾವುದೇ ಶುಲ್ಕವಿಲ್ಲ
ಆಯ್ಕೆ ವಿಧಾನ :
1. GATE-2025 ಸ್ಕೋರ್ ಆಧಾರಿತ ಶಾರ್ಟ್‌ಲಿಸ್ಟ್
2. ದಾಖಲೆ ಪರಿಶೀಲನೆ
3. ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
1. UPSBCL ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
2. ಆನ್‌ಲೈನ್ ಅರ್ಜಿ ಪ್ರಕ್ರಿಯೆಗೆ ಬೇಕಾದ ಇಮೇಲ್, ಮೊಬೈಲ್ ಮತ್ತು ದಾಖಲೆಗಳನ್ನು ಸಿದ್ಧಪಡಿಸಿ
3. ಕೆಳಗಿನ ಲಿಂಕ್ ಮೂಲಕ UPSBCL AE Apply Online ಮಾಡಿ
4. ಅಗತ್ಯ ಮಾಹಿತಿಗಳನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ, ದಾಖಲೆಗಳ ಸ್ಕ್ಯಾನ್ ನಕಲು ಹಾಗೂ ಫೋಟೋ ಅಟ್ಯಾಚ್ ಮಾಡಿ
5. ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆ ಉಳಿಸಿಟ್ಟುಕೊಳ್ಳಿ
ಪ್ರಮುಖ ದಿನಾಂಕಗಳು :
ಅರ್ಜಿ ಪ್ರಾರಂಭ ದಿನಾಂಕ : 07-ಜುಲೈ-2025
ಅಂತಿಮ ದಿನಾಂಕ : 07-ಆಗಸ್ಟ್-2025
ಸಿವಿಲ್ ಮತ್ತು ಮೆಕಾನಿಕಲ್ ಕ್ಷೇತ್ರದ ಯುವ ಇಂಜಿನಿಯರ್‌ಗಳಿಗಾಗಿ ಇದು ಬಹುಮುಖ್ಯ ಸರ್ಕಾರಿ ಉದ್ಯೋಗಾವಕಾಶ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಕಳೆದುಕೊಳ್ಳದೆ ತಕ್ಷಣ ಅರ್ಜಿ ಸಲ್ಲಿಸಬೇಕೆಂದು UPSBCL ಮನವಿ ಮಾಡಿದೆ.
Comments