Loading..!

ಕೃಷಿ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಖಾಲಿ ಇರುವ ವಿವಿಧ ಬೋಧಕ, ತಾಂತ್ರಿಕ ಹಾಗೂ ಸೇವಾ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ
| Date:30 ಡಿಸೆಂಬರ್ 2019
not found
ಕೃಷಿ ವಿಶ್ವವಿದ್ಯಾಲಯ, ಧಾರವಾಡ ಅಕ್ಟೋಬರ್ 1, 1986 ರಂದು ಸ್ಥಾಪಿತವಾಯಿತು. ಈ ವಿಶ್ವವಿದ್ಯಾಲಯವು 5 ಕಾಲೇಜುಗಳನ್ನು, 27 ಸಂಶೋಧನಾ ಕೇಂದ್ರಗಳನ್ನು, 6 ವಿಸ್ತರಣಾ ಘಟಕಗಳನ್ನು, 6 ಕೃಷಿ ವಿಜ್ಞಾನ ಕೇಂದ್ರಗಳನ್ನು ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಹೊಂದಿದೆ. ಉತ್ತರ ಕರ್ನಾಟಕದ 7 ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಮತ್ತು ಉತ್ತರ ಕನ್ನಡ ಇವುಗಳಲ್ಲಿ ಇದರ ಕಾರ್ಯವ್ಯಾಪ್ತಿ ಹೊಂದಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ರಾಜ್ಯಮಟ್ಟದ ಸ್ಥಳೀಯ ವೃಂದದಡಿ ವಿವಿಧ ವಿಷಯಗಳ ಬೋಧಕ ಹಾಗೂ ತಾಂತ್ರಿಕ ಮತ್ತು ಸೇವಾ ಸಿಬ್ಬಂದಿ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಪ್ರೊಫೆಸರ್ 2 ಹುದ್ದೆಗಳು, ಅಸೋಸಿಯೇಟ್ ಪ್ರೊಫೆಸರ್ 6 ಹುದ್ದೆಗಳು, ಅಸಿಸ್ಟೆಂಟ್ ಪ್ರೊಫೆಸರ್ 09 ಹುದ್ದೆಗಳು, ತಾಂತ್ರಿಕ 01 ಹುದ್ದೆ ಮತ್ತು ಸೇವಾ ಸಿಬ್ಬಂದಿ 23 ಹುದ್ದೆ ಸೇರಿ ಒಟ್ಟು 41 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆಯೂ ನಡೆಯಲಿದೆ.

ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗೆ ನೀಡಿರುವ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಬೇಕಾದ ವಿಳಾಸ :
ದಿ ರಿಜಿಸ್ಟ್ರಾರ್,
ಕೃಷಿ ವಿಶ್ವವಿದ್ಯಾಲಯ, ಕೃಷ್ಣನಗರ,
ಧಾರವಾಡ-580005
No. of posts:  41
Application Start Date:  30 ಡಿಸೆಂಬರ್ 2019
Application End Date:  25 ಜನವರಿ 2020
Work Location:  ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕಾರ್ಯವ್ಯಾಪ್ತಿ
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಗುಣವಾಗಿ ವಿವಿಧ ವಿದ್ಯಾರ್ಹತೆಯ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು. ಈ ಕುರಿತ ಸಂಪೂರ್ಣ ವಿವರಕ್ಕಾಗಿ ಈ ಕೆಳಗೆ ನೀ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಗಮನಿಸಿಕೊಳ್ಳಬಹುದಾಗಿದೆ.
Fee: ಭೋದಕ ಹುದ್ದೆಗಳಿಗೆ :
ಸಾಮಾನ್ಯ ಅಭ್ಯರ್ಥಿಗಳು : 1000/- ರೂಪಾಯಿ
SC ST ಅಭ್ಯರ್ಥಿಗಳು : 500/- ರೂಪಾಯಿ

ಬೋಧಕೇತರ ಹುದ್ದೆಗಳಿಗೆ :
ಸಾಮಾನ್ಯ ಅಭ್ಯರ್ಥಿಗಳು : 600/- ರೂಪಾಯಿ
SC ST ಅಭ್ಯರ್ಥಿಗಳು : 300/- ರೂಪಾಯಿ

* ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಇಂಡಿಯನ್ ಪೋಸ್ಟಲ್ ಆರ್ಡರ್ ಬ್ಯಾಂಕ್ ಚೆಕ್ಕುಗಳ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ
Age Limit: ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅಧಿಸೂಚಿಸಿದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸತಕ್ಕದ್ದು ಗರಿಷ್ಠ 35 ವರ್ಷ,
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ಎಸ್ಸಿ ಎಸ್ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
to download official notification
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments