ಯೂಕೊ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ (UCO) ನಲ್ಲಿ ಖಾಲಿ ಇರುವ ಒಟ್ಟು 142 ಮ್ಯಾನೇಜರ್ ಕ್ರೆಡಿಟ್, ಮ್ಯಾನೇಜರ್ ಲಾ, ಸಾಪ್ಟವೇರ್ ಡೆವಲಪರ್ ನೆಟ್ ವರ್ಕ್ ಅಡ್ಮಿಸ್ಟ್ರೇಷನ್ ಮತ್ತು ಮ್ಯಾನೇಜರ್ - ರಿಸ್ಕ್ ಮ್ಯಾನೇಜ್ಮೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 27-12-2023 ದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 142
ಮ್ಯಾನೇಜರ್ ಕ್ರೆಡಿಟ್ - 50
ಮ್ಯಾನೇಜರ್ ಲಾ - 13
ಸಾಪ್ಟವೇರ್ ಡೆವಲಪರ್ - 13
ನೆಟ್ ವರ್ಕ್ ಅಡ್ಮಿಸ್ಟ್ರೇಷನ್ - 08
ಮ್ಯಾನೇಜರ್ - ರಿಸ್ಕ್ ಮ್ಯಾನೇಜ್ಮೆಂಟ್ - 15
ಇತರೆ - 43
ಅರ್ಜಿ ಸಲ್ಲಿಸುವ ವಿಳಾಸ :
General Manager,UCO Bank,
Head Office, 4th Floor,
H. R. M Department,
10, BTM Sarani, Kolkata,
West Bengal – 700 001
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು CA/ CFA/ MBA/ PGDM/ B.E., B.Tech., B.Sc., M.Tech, ಪದವಿಯನ್ನು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವವನ್ನು ಹೊಂದಿರುವರಿಗೆ ಮೊದಲ ಆದ್ಯತೆ ನೀಡಲಾಗುವುದು.
* ಸಾಮಾನ್ಯ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗದ (2A/2B/3A/3B) ಅಭ್ಯರ್ಥಿಗಳಿಗೆ ರೂ 800/-
* SC/ST/CAT-1 ಮತ್ತು PWD/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯತಿ ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 21 ಗರಿಷ್ಠ 30 ವರ್ಷ ವಯೋಮಿತಿಯನ್ನು ಮೀರಿರಬಾರದು.
* 2A/2B/3A/3B ಪ್ರವರ್ಗದ ಅಭ್ಯರ್ಥಿಗಳಿಗೆ 3 ವರ್ಷ
* SC/ST/CAT-1 ಪ್ರವರ್ಗದ ಅಭ್ಯರ್ಥಿಗಳಿಗೆ 5 ವರ್ಷ
* PWD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.





Comments