Loading..!

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ಹುದ್ದೆಗಳ ನೇಮಕತಿಗಾಗಿ ಅರ್ಜಿ ಆಹ್ವಾನ
Published by: Mallappa Myageri | Date:21 ಅಕ್ಟೋಬರ್ 2021
not found

ತುಮಕೂರು ವಿಶ್ವವಿದ್ಯಾನಿಲಯದಲ್ಲಿ  2021-22ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು ಬೋಧನೆ ಮಾಡಲು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ಸಂಬಂಧ ಅರ್ಹ  ಭಾರತೀಯ ಪ್ರಜೆಗಳಿಂದ  ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 24-10-2021ರ ಒಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿರುತ್ತದೆ. ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದಂತೆ ಅಧಿಸೂಚನೆ ಮತ್ತು ಮಾನದಂಡಗಳನ್ನು ವಿಶ್ವವಿದ್ಯಾನಿಲಯದ ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಳ್ಳತಕ್ಕದ್ದು,  ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಚುರ ಪಡಿಸಲಾಗುವುದು ಹಾಗೂ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯವು ಪ್ರಕಟಿಸುವ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗತಕ್ಕದ್ದು, ಸಂದರ್ಶನಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯದ ಜಾಲತಾಣವನ್ನು ನಿರಂತರವಾಗಿ ವೀಕ್ಷಿಸುವುದು, ಸಂದರ್ಶನದ ಬಗ್ಗೆ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಿಳಿಸಲಾಗುವುದಿಲ್ಲ, ಆಯ್ಕೆಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಲಾಗುವುದು, ವಿಷಯ ಮತ್ತು ಅತಿಥಿ ಉಪನ್ಯಾಸಕರ ನೇಮಕಾತಿಯ ಸಂಖ್ಯೆಯಲ್ಲಿ ಬದಲಾವಣೆಯಾದಲ್ಲಿ ವಿಶ್ವವಿದ್ಯಾನಿಲಯದ ತೀರ್ಮಾನವೇ ಅಂತಿಮವಾಗಿರುತ್ತದೆ.

Application Start Date:  20 ಅಕ್ಟೋಬರ್ 2021
Application End Date:  24 ಅಕ್ಟೋಬರ್ 2021
Work Location:  ತುಮಕೂರು
Selection Procedure: ಈ ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the official notification

Comments