Loading..!

ತುಮಕೂರು ಮಹಾನಗರ ಪಾಲಿಕೆಯಲ್ಲಿ ಭರ್ಜರಿ ನೇಮಕಾತಿ 2026: 238 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಂದೇ ಅರ್ಜಿ ಸಲ್ಲಿಸಿ ಅವಕಾಶ ಪಡೆದುಕೊಳ್ಳಿ!
Tags: SSLC
Published by: Heena Sheregar | Date:25 ಮಾರ್ಚ್ 2026
not found
ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ತುಮಕೂರು ಜಿಲ್ಲಾ ನಗರಾಭಿವೃದ್ಧಿ ಕೋಶವು ಜಿಲ್ಲೆಯ ಪಾಲಿಕೆ ಮತ್ತು ನಗರಸಭೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯು ನೇರಪಾವತಿ (Direct Payment) ಪದ್ಧತಿಯಡಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಮೂಲಕ ಈಗಾಗಲೇ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ಹೊಸ ಅಭ್ಯರ್ಥಿಗಳಿಗೆ ಸ್ಥಿರ ಆದಾಯದೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಸರಳ ಅರ್ಹತೆ ಮತ್ತು ಸುಲಭ ಅರ್ಜಿ ಪ್ರಕ್ರಿಯೆಯಿಂದ ಹೆಚ್ಚಿನ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ.

ಆಸಕ್ತ ಅಭ್ಯರ್ಥಿಗಳು ವಿಳಂಬ ಮಾಡದೇ ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಹುದ್ದೆಗಳು ಲಭ್ಯವಿದ್ದರೂ ಸ್ಪರ್ಧೆ ತೀವ್ರವಾಗುವ ಸಾಧ್ಯತೆ ಇರುವುದರಿಂದ ಈ ಸುವರ್ಣಾವಕಾಶವನ್ನು ಕೈಮೀಸಿಕೊಳ್ಳಬೇಡಿ. ಭರ್ತಿ ಮಾಡಿದ ಅರ್ಜಿಯನ್ನು09-04-2026ರ ಒಳಗೆ ಖುದ್ದಾಗಿ ಸಲ್ಲಿಸುವುದು ಕಡ್ಡಾಯವಾಗಿದ್ದು, ತಕ್ಷಣವೇ ಅರ್ಜಿ ಸಲ್ಲಿಸುವುದು ಒಳಿತು.

ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ: 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ಆಹ್ವಾನ!

ನೇಮಕಾತಿ ಅಧಿಸೂಚನೆಯ ವಿವರಗಳು:



  • ಸಂಸ್ಥೆಯ ಹೆಸರು: ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ (ತುಮಕೂರು ಮಹಾನಗರಪಾಲಿಕೆ, ಶಿರಾ ಮತ್ತು ತಿಪಟೂರು ನಗರಸಭೆಗಳು).

  • ಹುದ್ದೆಯ ಹೆಸರು: ಪೌರಕಾರ್ಮಿಕ (ನೇರಪಾವತಿ ಅಡಿ).ಒಟ್ಟು ಹುದ್ದೆಗಳು: 238.

  • ಆಯ್ಕೆ ಪ್ರಕ್ರಿಯೆ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನೇಮಕಾತಿ ನಡೆಯಲಿದೆ.

  • ಉದ್ಯೋಗ ಸ್ಥಳ: ತುಮಕೂರು ಜಿಲ್ಲೆ, ಕರ್ನಾಟಕ.


ಹುದ್ದೆಗಳ ವಿವರ (Vacancy Breakdown):


  • ತುಮಕೂರು ಮಹಾನಗರಪಾಲಿಕೆ: 175 ಹುದ್ದೆಗಳು.

  • ಶಿರಾ ನಗರಸಭೆ: 39 ಹುದ್ದೆಗಳು.

  • ತಿಪಟೂರು ನಗರಸಭೆ: 24 ಹುದ್ದೆಗಳು.

  • ಒಟ್ಟು : 238 ಹುದ್ದೆಗಳು.


ಶೈಕ್ಷಣಿಕ ಅರ್ಹತೆ ಮತ್ತು ಅನುಭವ: ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಯಾವುದೇ ನಿರ್ದಿಷ್ಟ ಶಾಲಾ ಅಥವಾ ಪದವಿ ಶಿಕ್ಷಣದ (ಉದಾಹರಣೆಗೆ SSLC ಅಥವಾ PUC) ಅಗತ್ಯವನ್ನು ಕಡ್ಡಾಯಗೊಳಿಸಿಲ್ಲ. ಬದಲಾಗಿ, ಈ ಕೆಳಗಿನ ಪ್ರಮುಖ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ:


  • ಅನುಭವದ ಆಧಾರಿತ ಅರ್ಹತೆ: ಅಭ್ಯರ್ಥಿಯು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯಲ್ಲಿ (ತುಮಕೂರು ಪಾಲಿಕೆ/ಶಿರಾ/ತಿಪಟೂರು ನಗರಸಭೆ) ಕನಿಷ್ಠ ಒಂದು ವರ್ಷ ಪೌರಕಾರ್ಮಿಕರಾಗಿ, ಲೋಡರ್ಸ್ ಆಗಿ ಅಥವಾ ಸ್ವಚ್ಛತಾ ಕೆಲಸಗಾರರಾಗಿ ಹೊರಗುತ್ತಿಗೆ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರಬೇಕು.

  • ಭಾಷಾ ಜ್ಞಾನ: ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಮಾತನಾಡಲು ತಿಳಿದಿರಬೇಕು.

  • ದಾಖಲೆಗಳ ಸಲ್ಲಿಕೆ: ಕೆಲಸ ನಿರ್ವಹಿಸುತ್ತಿರುವ ಬಗ್ಗೆ ESI ಮತ್ತು PF ಸೌಲಭ್ಯದ ದಾಖಲೆಗಳನ್ನು ಹಾಗೂ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪತ್ರವನ್ನು ಹೊಂದಿರಬೇಕು.

  • ವಿಶೇಷ ವರ್ಗ: ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಅಧಿನಿಯಮದಡಿ ಗುರುತಿಸಲ್ಪಟ್ಟ ಸಂತ್ರಸ್ತರು ಅಥವಾ ಅವರ ಕುಟುಂಬದ ಸದಸ್ಯರಿಗೆ ಅವಕಾಶವಿದೆ.


ವಯೋಮಿತಿ: 
18 ವರ್ಷ ತುಂಬಿರಬೇಕು ಮತ್ತು 50 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ (Selection Process):
ಈ ನೇಮಕಾತಿಯು ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವನ್ನು ಆಧರಿಸಿಲ್ಲ, ಬದಲಾಗಿ ಸೇವಾ ಅನುಭವ ಮತ್ತು ನಿಗದಿತ ಮಾನದಂಡಗಳ ಆಧಾರದ ಮೇಲೆ ನಡೆಯುತ್ತದೆ. ಆಯ್ಕೆ ಸಮಿತಿ: ತುಮಕೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ? (How to Apply):


  • ಅಭ್ಯರ್ಥಿಗಳು ಮೊದಲು ತುಮಕೂರು ಮಹಾನಗರ ಪಾಲಿಕೆ ಅಥವಾ ಶಿರಾ/ತಿಪಟೂರು ನಗರಸಭೆ ಕಚೇರಿಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯ ಅರ್ಜಿಯನ್ನು ಪಡೆಯಬೇಕು.

  • ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.

  • ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜನ್ಮ ದಿನಾಂಕದ ದಾಖಲೆ ಮತ್ತು ಅನುಭವದ ದೃಢೀಕರಣ ಪತ್ರಗಳನ್ನು ಲಗತ್ತಿಸಬೇಕು.

  • ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 09-04-2026ರ ಒಳಗೆ ಸಂಬಂಧಪಟ್ಟ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು.


ಹೊಸ ನೇಮಕಾತಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಲು ಇಲ್ಲಿ ಡೌನ್ಲೋಡ್ ಮಾಡಿ. 

ಗಮನಿಸಬೇಕಾದ ಮುಖ್ಯ ಅಂಶಗಳು:



  • ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲಾಗುವುದು.

  • ಅಭ್ಯರ್ಥಿಯು ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು.

  • ನೇಮಕಗೊಂಡ ಅಭ್ಯರ್ಥಿಗಳು ಕೇವಲ ಸ್ವಚ್ಛತಾ ಕೆಲಸವನ್ನೇ ನಿರ್ವಹಿಸಬೇಕು, ಕಚೇರಿ ಕೆಲಸಕ್ಕೆ ನಿಯೋಜಿಸುವಂತೆ ಕೋರುವಂತಿಲ್ಲ.


ಪ್ರಮುಖ ದಿನಾಂಕಗಳು (Important Dates):


  • ಅರ್ಜಿ ವಿತರಣೆ ಪ್ರಾರಂಭ ದಿನಾಂಕ: 25-03-2026.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-04-2026.

  • ಕಚೇರಿಗೆ ಅರ್ಜಿ ತಲುಪಿಸಲು ಅಂತಿಮ ಗಡುವು: 09-04-2026 (ಸಂಜೆ 5:00 ಗಂಟೆಯೊಳಗೆ).


ಹೆಚ್ಚಿನ ಉದ್ಯೋಗ ಮಾಹಿತಿಗಾಗಿ KPSCVaani ಫಾಲೋ ಮಾಡಿ ಮತ್ತು ಈ ಸುದ್ದಿಯನ್ನು ಅರ್ಹರಿಗೆ ಶೇರ್ ಮಾಡಿ.
Application Start Date:  25 ಮಾರ್ಚ್ 2026
Application End Date:  9 ಎಪ್ರಿಲ್ 2026
To download official notification

Comments