ವಿಜಯಪುರ ಜಿಲ್ಲಾ ವ್ಯಾಪ್ತಿಯ ಸಹಕಾರಿ ಬ್ಯಾಂಕ್ ನೇಮಕಾತಿ 2025 : ಪದವಿ ಪಡೆದವರಿಗೆ ಭರ್ಜರಿ ಅವಕಾಶ – ಕೂಡಲೇ ಅರ್ಜಿ ಸಲ್ಲಿಸಿ!

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್‌ನಲ್ಲಿ ಕಿರಿಯ ಸಹಾಯಕ ಹಾಗೂ ಜವಾನ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಈ ಅವಕಾಶ ಸುವರ್ಣ ಸಂದರ್ಭ. ವಿಜಯಪುರ ಜಿಲ್ಲೆಯ ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ, ಸಿಂದಗಿ (The Sindgi Urban Co-operative Bank Ltd.) ನಿರುದ್ಯೋಗಿ ಯುವಕ/ಯುವತಿಯರಿಗೆ ಉತ್ತಮ ಅವಕಾಶವನ್ನು ಕಲ್ಪಿಸಿದೆ. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕರು (Junior Assistants) ಮತ್ತು ಜವಾನ (Peon) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 10 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಪದವಿ (Degree) ಮತ್ತು ಎಸ್.ಎಸ್.ಎಲ್.ಸಿ (SSLC) ಪಾಸಾದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಆಕರ್ಷಕ ವೇತನ ಶ್ರೇಣಿ ಮತ್ತು ನಿಯಮಾನುಸಾರ ತುಟ್ಟಿ ಭತ್ಯೆ (Dearness Allowance) ಹಾಗೂ ಇತರೆ ಭತ್ಯೆಗಳು ಲಭ್ಯವಿವೆ.
ಸ್ಥಿರ ಉದ್ಯೋಗ ಹುಡುಕುತ್ತಿರುವವರಿಗೂ ಇದು ಒಳ್ಳೆಯ ಆಯ್ಕೆ. ಇದು ವಿಜಯಪುರ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಒಂದು ದೊಡ್ಡ ಹೆಜ್ಜೆಯಾಗಿದೆ. ಬ್ಯಾಂಕಿನಿಂದ ಸೂಚಿಸಲಾದ ಭದ್ರತೆಯನ್ನು ನೀಡಲು ಮತ್ತು 2 ವರ್ಷಗಳ ಪರೀಕ್ಷಾರ್ಹ ಸೇವೆಯಲ್ಲಿರಲು ಸಿದ್ಧರಿರುವವರು ತಕ್ಷಣವೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/12/2025.
ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾದ ಮುಖ್ಯ ವಿಷಯಗಳು: ಅರ್ಹತಾ ನಿಯಮಗಳು ಮತ್ತು ಅರ್ಜಿ ವಿವರಗಳು ಏನು, ಸಂಬಳ ಹಾಗೂ ಭತ್ಯೆ ಮಾಹಿತಿ. ಇದಲ್ಲದೆ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಮತ್ತು ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂಬ ಮಾಹಿತಿ ಇಲ್ಲಿದೆ.
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
📌ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ, ಹುದ್ದೆಯ ಅಧಿಸೂಚನೆ
ನೇಮಕಾತಿ ಸಂಸ್ಥೆ: ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ ನಿಯಮಿತ, ಸಿಂದಗಿ-586128, ಜಿ॥ವಿಜಯಪೂರ.
ಹುದ್ದೆಗಳ ಹೆಸರು: ಕಿರಿಯ ಸಹಾಯಕರು ಮತ್ತು ಜವಾನ.
ಹುದ್ದೆಗಳ ಸಂಖ್ಯೆ: ಒಟ್ಟು 10 ಹುದ್ದೆಗಳು.
ಉದ್ಯೋಗ ಸ್ಥಳ: ಸಿಂದಗಿ, ವಿಜಯಪುರ ಜಿಲ್ಲೆ.
ಅರ್ಜಿ ಸಲ್ಲಿಸುವ ಬಗೆ: ಆನ್‌ಲೈನ್ ಮೂಲಕ.
📌 ಹುದ್ದೆಗಳ ವಿವರ : 10
ಕಿರಿಯ ಸಹಾಯಕರು: 06 ಹುದ್ದೆಗಳು.
ಜವಾನ: 04 ಹುದ್ದೆಗಳು.
🎓 ಅರ್ಹತಾ ಮಾನದಂಡ : ಕಿರಿಯ ಸಹಾಯಕರು ಮತ್ತು ಜವಾನ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಗಳು ಈ ಕೆಳಗಿನಂತಿವೆ:
🔹 ಕಿರಿಯ ಸಹಾಯಕರು (06 ಹುದ್ದೆಗಳು):
- ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಪಡೆದಿರಬೇಕು.
- ಪದವಿಯ ಎಲ್ಲ ವರ್ಷ/ಸೆಮಿಷ್ಟರಗಳ ಸರಾಸರಿ ಕನಿಷ್ಟ 60 % ರಷ್ಟು ಅಂಕ ಪಡೆದಿರಬೇಕು.
- ಆಧ್ಯತೆ: ಸಹಕಾರ ವಿಷಯದಲ್ಲಿ ಪದವಿ/ಡಿಪ್ಲೋಮಾ ಮುಗಿಸಿದವರಿಗೆ, ಕಂಪ್ಯೂಟರ ಪರಿಜ್ಞಾನ ಹೊಂದಿದವರಿಗೆ ಹಾಗೂ ಕನಿಷ್ಟ ಮೂರು ವರ್ಷ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದವರಿಗೆ ಆಧ್ಯತೆ ನೀಡಲಾಗುವದು.
🔹 ಜವಾನ (04 ಹುದ್ದೆಗಳು) : ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕನಿಷ್ಟ 45 % ರಷ್ಟು ಅಂಕ ಪಡೆದು ಪಾಸಾಗಿರಬೇಕು.
🔹 ಕಡ್ಡಾಯ ಅಂಶ: ಅಭ್ಯರ್ಥಿಗೆ ಕನ್ನಡ ಭಾಷಾ ಪರಿಜ್ಞಾನ ಕಡ್ಡಾಯವಾಗಿರುತ್ತದೆ.
⏳ ವಯಸ್ಸಿನ ಮಿತಿ:
• ಕನಿಷ್ಠ ವಯೋಮಿತಿ: ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕಕ್ಕೆ 18 ವರ್ಷ ಪೂರೈಸಿರಬೇಕು.
• ಗರಿಷ್ಠ ವಯೋಮಿತಿ:
- ಸಾಮಾನ್ಯ ಅಭ್ಯರ್ಥಿಗಳಿಗೆ: 35 ವರ್ಷಗಳಿಗೆ ಮೀರಿರಬಾರದು.
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: 38 ವರ್ಷಗಳಿಗೆ ಮೀರಿರಬಾರದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: 40 ವರ್ಷಗಳು ಮೀರಿರಬಾರದು.
• ವಯೋಮಿತಿ ಸೌಲಭ್ಯಕ್ಕಾಗಿ ದಾಖಲೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಹಿಂದುಳಿದ ವರ್ಗದ ಅಭ್ಯರ್ಥಿಗಳು ಸರಕಾರ ನಿಗದಿ ಪಡಿಸಿದ ನಮೊನೆಯಲ್ಲಿ ಸಂಬಂದಿಸಿದವರಿಂದ ಪಡೆದ ಮೂಲ ಪ್ರಮಾಣ ಪತ್ರವನ್ನು ಹೊಂದಿರಬೇಕು.
💰 ವೇತನ :ನೇಮಕಾತಿ ನಿಯಮಾನುಸಾರವಾಗಿ ಈ ಕೆಳಗಿನಂತೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
ಕಿರಿಯ ಸಹಾಯಕರು : ರೂ. 27,650/- – ರೂ. 52,650/-
ಜವಾನ : ರೂ. 19,950/- – ರೂ. 37,900/-
💰ಅರ್ಜಿ ಶುಲ್ಕ: ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಅರ್ಜಿ ಶುಲ್ಕವನ್ನು ಪಾವತಿಸಬೇಕು:
=> ಕಿರಿಯ ಸಹಾಯಕರು ಹುದ್ದೆಗಳಿಗೆ: ರೂ. 1000 /- (GST ಸೇರಿಸಿ).
=> ಜವಾನ ಹುದ್ದೆಗಳಿಗೆ: ರೂ. 500/- (GST ಸೇರಿಸಿ).
=> ಗಮನಿಸಿ: ತುಂಬಿದ ಅರ್ಜಿ ಶುಲ್ಕ ವಾಪಸು ಕೊಡಲಾಗುವುದಿಲ್ಲ.
💼 ಆಯ್ಕೆ ಪ್ರಕ್ರಿಯೆ :ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ಈ ಹುದ್ದೆಗಳಿಗೆ ಕೆಳಕಂಡ ವಿಧಾನದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ:
➡️ ಕಿರಿಯ ಸಹಾಯಕರು ಹುದ್ದೆಗಳಿಗೆ :
- ಲಿಖಿತ ಪರೀಕ್ಷೆಗೆ ಆಹ್ವಾನ: ಹುದ್ದೆಗೆ ನಿಗದಿಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ (ಪದವಿಯಲ್ಲಿ) ಗಳಿಸಿದ ಶೇಕಡವಾರು ಅಂಕಗಳ ಆಧಾರದ ಮೇಲೆ ಲಿಖಿತ ಪರೀಕ್ಷೆಗೆ ಕರೆಯಲಾಗುವುದು.
- ಮೌಖಿಕ ಸಂದರ್ಶನ: ಅಧಿಕೃತ ಬಾಹ್ಯ ಸಂಸ್ಥೆಗಳಿಂದ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇಕಡ 85 ಕ್ಕೆ ಇಳಿಸಿ 1:5 ರ ಅನುಪಾತದಲ್ಲಿ ಮೌಕಿಕ ಸಂದರ್ಶನಕ್ಕೆ ಕರೆಯಲಾಗುವುದು.
- ಲಿಖಿತ ಪರೀಕ್ಷೆಯ ವಿಷಯಗಳು (ಒಟ್ಟು 200 ಅಂಕಗಳು):
• ಕನ್ನಡ ಬಾಷೆ: 50 ಅಂಕಗಳು
• ಇಂಗ್ಲೀಷ ಭಾಷೆ: 25 ಅಂಕಗಳು
• ಸಾಮಾನ್ಯ ಜ್ಞಾನ: 25 ಅಂಕಗಳು
• ಸಹಕಾರ ಮತ್ತು ಬ್ಯಾಂಕಿಂಗ್: 50 ಅಂಕಗಳು
• ಭಾರತದ ಸಂವಿಧಾನ: 25 ಅಂಕಗಳು
- ಸಮಾಜದ ಯುಕ್ತವಾದ ಚಟುವಟಿಕೆ ಮತ್ತು ವಸ್ತುನಿಷ್ಠ ವಿಷಯ: 25 ಅಂಕಗಳು
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ದಿನಾಂಕ, ಸ್ಥಳ ಮತ್ತು ಸಮಯ ಇವುಗಳ ವಿವರಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.
➡️ ಜವಾನ ಹುದ್ದೆಗಳಿಗೆ : ಹುದ್ದೆಗಳಿಗೆ ನಿಗದಿಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ (ಎಸ್.ಎಸ್.ಎಲ್.ಸಿ ಯಲ್ಲಿ) ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಮೌಕಿಕ ಸಂದರ್ಶನಕ್ಕೆ ಕರೆಯಲಾಗುವುದು.
📝 ಅರ್ಜಿ ಸಲ್ಲಿಸುವ ವಿಧಾನ :ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಹಂತಗಳನ್ನು ಅನುಸರಿಸಬೇಕು:
ಹಂತ 1. ಬ್ಯಾಂಕಿನ ವೆಬ್ ಸೈಟ್ ಮೂಲಕ ಪ್ರಚುರಪಡಿಸಿದ ಲಿಂಕನಲ್ಲಿ ಮಾತ್ರ ONLINE ಮುಖಾಂತರ ಅರ್ಜಿ ಸಲ್ಲಿಸತಕ್ಕದ್ದು.
ಹಂತ 2. ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್ https://sindagiurbanbank.buffersoft.com/ ಆಗಿದೆ.
ಹಂತ 3. ಅರ್ಜಿಗಳನ್ನು ಸಲ್ಲಿಸುವಾಗ ಅಯಾ ಹುದ್ದೆಗಳ ಅರ್ಜಿಗಳನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸತಕ್ಕದ್ದು.
ಹಂತ 4. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ದಿ. 20.12.2025 ರ ಸಾಯಂಕಾಲ 05.00 ಘಂಟೆವರೆಗೆ ಸಲ್ಲಿಸಲು ಅವಕಾಶವಿರುವುದು.
ಹಂತ 5. ಅರ್ಜಿಯಲ್ಲಿಯ ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿರಬೇಕು.
ಹಂತ 6. ಅಭ್ಯರ್ಥಿಗಳು ಈ ಕೆಳಗಿನ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಅರ್ಜಿಯೊಂದಿಗೆ ಅಪ್ ಲೋಡ್ ಮಾಡತಕ್ಕದ್ದು:
=> ಪಾಸ್‌ಪೋರ್ಟ ಅಳತೆಯ ಭಾವಚಿತ್ರ.
=> ವಯಸ್ಸು ದೃಢೀಕರಣ ಕುರಿತು (ಎಸ್.ಎಸ್.ಎಲ್.ಸಿ ಅಂಕಪಟ್ಟಿ / ವರ್ಗಾವಣೆ ಪ್ರಮಾಣ ಪತ್ರ).
=> ವಿದ್ಯಾರ್ಹತೆ ಕುರಿತು ಪ್ರಮಾಣ ಪತ್ರ (ಎಸ್.ಎಸ್.ಎಲ್.ಸಿ ಮತ್ತು ಪದವಿಯ ಅಂಕಪಟ್ಟಿ).
=> ವಯೋಮಿತಿ ಸೌಲಭ್ಯಕ್ಕಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಹಿಂದುಳಿದ ವರ್ಗದ ಅಭ್ಯರ್ಥಿಗಳು ಸರಕಾರ ನಿಗದಿ ಪಡಿಸಿದ ನಮೊನೆಯಲ್ಲಿ ಸಂಬಂದಿಸಿದವರಿಂದ ಪಡೆದ ಮೂಲ ಪ್ರಮಾಣ ಪತ್ರ.
ಹಂತ 7. ಪೂರ್ಣ ವಿವರಗಳನ್ನು ಹೊಂದದೆ ಇರುವ ಹಾಗೂ ಅವಶ್ಯಕ ದಾಖಲಾತಿಗಳನ್ನು ಅಪ್ ಲೋಡ್ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
📝 ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
- ಶೈಕ್ಷಣಿಕ ಮೂಲ ದಾಖಲಾತಿಗಳು
- ಇತ್ತೀಚಿನ ಫಾಸ್ಫೋರ್ಟ್ ಸೈಜಿನ ಭಾವಚಿತ್ರ
- ಜಾತಿ & ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ,
- ಸೇವಾ ದಾಖಲಾತಿಗಳು
- ಇತರೆ ಅಗತ್ಯವಿರುವ ದಾಖಲೆಗಳು
📅 ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅಕ್ಟೋಬರ್ 29, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20, 2025
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಡಿಸೆಂಬರ್ 20, 2025
📢 ಇತರೆ ನಿಯಮಗಳು :
• ಆಯ್ಕೆಗೊಂಡ ಅಭ್ಯರ್ಥಿಗಳು 2 ವರ್ಷದ ಅವಧಿಯ ಪರೀಕ್ಷಾರ್ಹ ಸೇವೆಯಲ್ಲಿ ಇರಬೇಕಾಗುವುದು ಹಾಗೂ ಬ್ಯಾಂಕಿನಿಂದ ಸೂಚಿಸಿದಂತೆ ಭದ್ರತೆ ನೀಡಬೇಕು.
• ಯಾವುದೇ ಅಭ್ಯರ್ಥಿಗೆ ಸಂದರ್ಶನಕ್ಕೆ ಮಾಹಿತಿ ಬಂದಿಲ್ಲವೆಂದರೆ, ಸಂದರ್ಶನಕ್ಕೆ ಅರ್ಹತೆ ಹೊಂದಿಲ್ಲವೆಂದು ತಿಳಿಯಬೇಕು.
• ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಮೌಕಿಕ/ಲಿಖಿತ ಪರೀಕ್ಷೆಗಳಿಗೆ ಹಾಜರಾಗತಕ್ಕದ್ದು.
To Download Official Notification
ವಿಜಯಪುರ ಬ್ಯಾಂಕ್ ಜಾಬ್ಸ್ 2025,
ಸಹಕಾರಿ ಬ್ಯಾಂಕ್ ಅರ್ಜಿ ಸಲ್ಲಿಕೆ,
ಪದವಿ ಪಡೆದವರಿಗೆ ಬ್ಯಾಂಕ್ ಉದ್ಯೋಗಗಳು,
ವಿಜಯಪುರ ಡಿಸಿಸಿಬ್ ನೇಮಕಾತಿ,
ಸಹಕಾರಿ ಬ್ಯಾಂಕ್ ಪರೀಕ್ಷಾ ಸಿಲೆಬಸ್,
ಬ್ಯಾಂಕಿಂಗ್ ಉದ್ಯೋಗಗಳು ಕರ್ನಾಟಕ,
ವಿಜಯಪುರ ಜಿಲ್ಲೆ ಸರ್ಕಾರಿ ಉದ್ಯೋಗಗಳು,
ಸಹಕಾರಿ ಬ್ಯಾಂಕ್ ಸ್ಟಾಫ್ ಹುದ್ದೆಗಳು,
ಡಿಸಿಸಿ ಬ್ಯಾಂಕ್ ಅರ್ಜಿ ಫಾರಂ





Comments