ಬೆಂಗಳೂರಿನಲ್ಲಿರುವ ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Mallappa Myageri | Date:30 ಅಕ್ಟೋಬರ್ 2021

ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಬೆಂಗಳೂರುದಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಮತ್ತು ವಾಹನ ಚಾಲಕ ಕಮ್ ಜವಾನ ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜಾಲತಾಣದಲ್ಲಿ ಪ್ರಕಟಿಸಿರುವ ಅರ್ಜಿ ನಮೂನೆಯನ್ನು ಬಳಸಿ ತುಂಬಿದ ಅರ್ಜಿಗಳನ್ನು ಭಾವಚಿತ್ರ ಹಾಗೂ ಡಿಡಿಯೊಂದಿಗೆ ಅಂಚೆ ಮುಖಾಂತರ ಬ್ಯಾಂಕಿನ ವಿಳಾಸಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕವಾದ 10-11-2021 ರೊಳಗೆ ನಿಗದಿತ ಅರ್ಜಿ ನಮೂನೆಯೊಂದಿಗೆ ವಿದ್ಯಾರ್ಹತೆ, ಜನ್ಮದಿನಾಂಕ, ಅನುಭವಕ್ಕೆ ಸಂಬಂಧಪಟ್ಟಂತೆ ಸಲ್ಲಿಸುವ ಎಲ್ಲ ಪೂರಕ ದಾಖಲೆಗಳಿಗೆ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿಲಕೋಟೆಯ ಮೇಲೆ "ಕಿರಿಯ ಸಹಾಯಕ" / "ವಾಹನ ಚಾಲಕ ಕಮ್ ಜವಾನ" ಹುದ್ದೆಗೆ ಅರ್ಜಿ ಎಂದು ನಮೂದಿಸಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
No. of posts: 2
Application Start Date: 27 ಅಕ್ಟೋಬರ್ 2021
Application End Date: 10 ನವೆಂಬರ್ 2021
Last Date for Payment: 10 ನವೆಂಬರ್ 2021
Work Location: ಬೆಂಗಳೂರು
Selection Procedure: ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960 ಮತ್ತು ಸಹಕಾರ ಸಂಘಗಳ ನಿಬಂಧಕರ ಸುತ್ತೋಲೆಗಳ ಪ್ರಕಾರ ಆಯ್ಕೆ ಮಾಡಲಾಗುವುದು.
Qualification:
1) ಕಿರಿಯ ಸಹಾಯಕ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಬಳಕೆಯ ಜ್ಞಾನ ಕನ್ನಡ ಭಾಷೆಯಲ್ಲಿ ಓದು ಬರಹ ಹಾಗೂ ಮಾತನಾಡಲು ಬಲ್ಲವರಾಗಿರಬೇಕು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ (PCM) ಬಿಬಿಎಂ/ಬಿಕಾಂ/ಬಿಬಿಎ/ಬಿಸಿಎ/ಬಿಇ ( ಐಎಸ್ / ಸಿಎಸ್ ) ಪದವೀಧರರಿಗೆ ಪ್ರಥಮ ಆದ್ಯತೆ ನೀಡಲಾಗುವುದು
2) ವಾಹನ ಚಾಲಕ ಕಮ್ ಜವಾನ ಹುದ್ದೆಗೆ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಕ್ಷಮ ಪ್ರಾಧಿಕಾರವು ನೀಡಿರುವ ಸಾರಿಗೆ ವಾಹನ ಚಾಲನಾ ಪರವಾನಿಗಿ ಹೊಂದಿರಬೇಕು ಮತ್ತು SSLC ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಅಭ್ಯಸಿಸಿರಬೇಕು.
Fee: ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ರೂ 1000/- ಮೌಲ್ಯದ ಡಿಡಿಯನ್ನು ಹಾಗೂ ವಾಹನ ಚಾಲಕ ಕಮ್ ಜವಾನ ಹುದ್ದೆಗಳಿಗೆಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳುರೂ 500 ಮೌಲ್ಯದ ಡಿಡಿಯನ್ನು ಪಡೆದು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
Age Limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
ಸಾಮಾನ್ಯ ವರ್ಗದವರು ಕನಿಷ್ಠ 18 ಗರಿಷ್ಠ 35 ವರ್ಷಗಳು
ಹಿಂದುಳಿದ ವರ್ಗದವರು ಕನಿಷ್ಠ 18 ಗರಿಷ್ಠ 38 ವರ್ಷಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗದಲ್ಲಿನ ಪ್ರವರ್ಗ-1 ರ ಅಭ್ಯರ್ಥಿಗಳು ಕನಿಷ್ಠ 18 ಗರಿಷ್ಠ 40 ವರ್ಷಗಳನ್ನು ಮೀರಿರಬಾರದು
Pay Scale:
ಕಿರಿಯ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 18,000 ರಿಂದ 32,670 ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.
ವಾಹನ ಚಾಲಕ ಕಮ್ ಜವಾನ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 13,095 ರಿಂದ 24,030 ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments