Loading..!

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಹುದ್ದೆಗಳ ನೇಮಕಾತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಅಧಿಸೂಚನೆ ಪ್ರಕಟ
| Date:26 ಅಕ್ಟೋಬರ್ 2019
not found
ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್ ಎಸ್ ಸಿ) ನಡೆಸುವ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಸಿಜಿಎಲ್) ನ ಅಧಿಸೂಚನೆ ಹೊರಡಿಸಲಾಗಿದೆ. ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಪದವಿ ಪಡೆದವರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ನವೆಂಬರ್ 25ರೊಳಗೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ: ಅಸಿಸ್ಟೆಂಟ್ ಆಡಿಟ್ ಆಫೀಸರ್, ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್, ಇನ್‌ಸ್ಪೆಕ್ಟರ್ ಆಫ್ ಇನ್ಕಂ ಟ್ಯಾಕ್ಸ್, ಇನ್‌ಸ್ಪೆಕ್ಟರ್(ಸೆಂಟ್ರಲ್ ಎಕ್ಸಸೈಸ್), ಇನ್‌ಸ್ಪೆಕ್ಟರ್ (ಪ್ರಿವೆಂಟಿವ್ ಆಫೀಸರ್), ಇನ್‌ಸ್ಪೆಕ್ಟರ್ (ಎಕ್ಸಾಮಿನರ್), ಅಸಿಸ್ಟೆಂಟ್ ಎನ್‌ಫೋರ್ಸ್ಮೆಂಟ್ ಆಫೀಸರ್, ಸಬ್ ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್,ಅಸಿಸ್ಟೆಂಟ್ ಸೂಪರಿಂಟೆಂಡೆಂಟ್, ಡಿವಿಷನಲ್ ಅಕೌಂಟೆಂಟ್, ಜ್ಯೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್, ಸ್ಟ್ಯಾಟಿಸ್ಟಿಕಲ್ ಇನ್‌ವೆಸ್ಟಿಗೇಟರ್ ಗ್ರೇಡ್-11, ಆಡಿಟರ್, ಅಕೌಂಟೆಂಟ್, ಜ್ಯೂನಿಯರ್ ಅಕೌಂಟೆಂಟ್ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ.

ರಾಜ್ಯದಲ್ಲಿನ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಉಡುಪಿ, ಧಾರವಾಡ, ಮೈಸೂರು, ಮಂಗಳೂರು, ಕಲಬುರಗಿ.

ಪ್ರಮುಖ ದಿನಾಂಕಗಳು:
* ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22.10.2019
* ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.11.2019ರ ಸಂಜೆ 5ಗಂಟೆ
* ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯದ ದಿನಾಂಕ: 27.11.201ರ ಸಂಜೆ 5ಗಂಟೆ
* ಆಫ್‌ಲೈನ್ ಚಲನ್ ಜನರೇಟ್ ಮಾಡಲು ಕೊನೆಯ ದಿನಾಂಕ: 27.11.2019ರ ಸಂಜೆ
* ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29.11.2019

ಪರೀಕ್ಷಾ ದಿನಾಂಕಗಳು :
* ಟೈಯರ್-I ಪರೀಕ್ಷಾ ದಿನಾಂಕ: 2.03.2020 ರಿಂದ 11.03.2020
* ಟೈಯರ್- II ಮತ್ತು ಟೈಯರ್- III ಪರೀಕ್ಷಾ ದಿನಾಂಕ: 22.6.2020 ರಿಂದ 25.6.2020
Application Start Date:  22 ಅಕ್ಟೋಬರ್ 2019
Application End Date:  25 ನವೆಂಬರ್ 2019
Last Date for Payment:  27 ನವೆಂಬರ್ 2019
Qualification: ಪದವಿ, ಚಾರ್ಟೆಡ್ ಅಕೌಂಟೆಮಟ್ ಅಥವಾ ಕಾಸ್ಟ್ ಮತ್ತು ಮ್ಯಾನೇಜ್ಮೆಂಟ್ ಅಕೌಂಟೆಂಟ್ ಅಥವಾ ಕಂಪೆನಿ ಸೆಕ್ರೆಟರಿ ಅಥವಾ ಎಂ.ಕಾಂ / ಮಾಸ್ಟರ್ಸ್ ಇನ್ ಬ್ಯುಸಿನೆಸ್ ಸ್ಟಡೀಸ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Fee: * ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ರೂ.100/-
* ಎಸ್.ಸಿ/ಎಸ್.ಟಿ/ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಚಲನ್ ಮೂಲಕ ಪಾವತಿಸಬಹುದಾಗಿದೆ.
Age Limit: ಜನವರಿ 1, 2020ರ ಅನ್ವಯ ಅರ್ಜಿ ಸಲ್ಲಿಸಲಿಚ್ಛಿಸುವರ ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ಹಾಗೂ ಆಯಾ ಹುದ್ದೆಗೆ ಸಂಬಂಧಿಸಿದಂತೆ ಗರಿಷ್ಠ ಮಯೋಮಿತಿ ನಿಗದಿಪಡಿಸಲಾಗಿದೆ. ಗರಿಷ್ಠ 27 ರಿಂದ 32 ವರ್ಷಗಳನ್ನು ನಿಗದಿಪಡಿಸಲಾಗಿದ್ದು ಸರ್ಕಾರದ ನಿಯಮದಂತೆ ಮೀಸಲಾತಿ ಇರುವವರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
Pay Scale: ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ 25,500/- ರಿಂದ 1,51,100/-ರೂ ವೇತನವನ್ನು ನೀಡಲಾಗುವುದು.
PDO ಮತ್ತು GPS ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments