ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ | 14,582 ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿ

ಕೇಂದ್ರ ಸರಕಾರದ ವಿವಿಧ ಸಚಿವಾಲಯ,ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ(SSC) ನಡೆಸುವ 2025ನೇ ಸಾಲಿನ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್(CGL) ಪರೀಕ್ಷೆಗೆ ಅಧಿಸೂಚನೆ ಪ್ರಕಟಗೊಂಡಿದೆ. 14,582 ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳ ನೇಮಕಾತಿಗಾಗಿ ಯಾವುದೇ ಪದವಿ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು.
ವಿದ್ಯಾರ್ಹತೆ :ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿಯಲ್ಲಿ ಗಣಿತದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣ ಹೊಂದಿರಬೇಕು, ಸ್ನಾತಕೋತ್ತರ ಪದವಿ, ಸಿಎ / ಎಂಬಿಎ ಹಣಕಾಸು ವಿಭಾಗದಲ್ಲಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ :
- ಹುದ್ದೆಗಳಿಗೆ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು - 100 ರೂ ಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕು.ಮತ್ತು
- ಪ ಜಾ, ಪ ಪಂ, ಪಿಡಬ್ಲ್ಯುಡಿ, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ- ಯಾವುದೇ ರೀತಿಯಾದ ಅರ್ಜಿ ಶುಲ್ಕವಿರುವುದಿಲ್ಲ.
ವಯೋಮಿತಿ :
ಕನಿಷ್ಠ 18 ವರ್ಷ ಹಾಗೂ ಗರಿಷ್ಠ 32 ವರ್ಷಗಳನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ :
01 SC/ST : 5 years
02 OBC : 3 years
03 PwBD (Unreserved) : 10 years
04 PwBD (OBC) : 13 years
05 PwBD (SC/ST) : 15 years
ಆಯ್ಕೆ :ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆಯನ್ನು ಮಾಡುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುತ್ತದೆ.
ಮಾಸಿಕ ವೇತನ : ಆಯಾ ವೃಂದದ ಹುದ್ದೆಗಳಿಗೆ ಅನುಸಾರವಾಗಿ ಲೆವಲ್ 4, 5, 6, 7 ಎಂದು ವಿಭಾಗಿಸಿ ವೇತನ ಶ್ರೇಣಿಯನ್ನು ನೀಡಲಾಗುತ್ತದೆ.
ಹಂತ 4 : ರೂ. 25,500 – 81,100
ಹಂತ 5 : ರೂ. 29,200 – 92,300
ಹಂತ 6 : ರೂ. 35,400 – 1,12,400
ಹಂತ-7 : ರೂ. 44,900 – 1,42,400
ಪ್ರಮುಖ ದಿನಾಂಕಗಳು :
SSC CGL ಅಧಿಸೂಚನೆ ಬಿಡುಗಡೆ ದಿನಾಂಕ : 9ನೇ ಜೂನ್ 2025
SSC CGL ಅರ್ಜಿ ಆನ್‌ಲೈನ್‌ನಲ್ಲಿ ಆರಂಭ : 9ನೇ ಜೂನ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 4, 2025
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜುಲೈ 5, 2025
ಅರ್ಜಿ ಸಲ್ಲಿಸುವ ವಿಧಾನ :
1. ಸಿಬ್ಬಂದಿ ಆಯ್ಕೆ ಆಯೋಗದ (SSC) ಅಧಿಕೃತ ವೆಬ್‌ಸೈಟ್ www.ssc.gov.in ಗೆ ಭೇಟಿ ನೀಡಿ.
2. SSC ಒನ್-ಟೈಮ್ ನೋಂದಣಿ OTR (ಹೆಸರು (ನಿಮ್ಮ ಶೈಕ್ಷಣಿಕ ಪ್ರಮಾಣಪತ್ರಗಳ ಪ್ರಕಾರ), ಜನ್ಮ ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ (ಅಥವಾ ಆಧಾರ್ ಲಭ್ಯವಿಲ್ಲದಿದ್ದರೆ ಇತರ ID ಪುರಾವೆ) ಬಳಸಿ ಪೂರ್ಣಗೊಳಿಸಿ.
3. ನಿಮ್ಮ ಖಾತೆಗೆ ಲಾಗಿನ್ ಆಗಿ ಮತ್ತು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
4. ನಿಗದಿತ ಗಾತ್ರದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
5. ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಜುಲೈ 4, 2025 ರ ಮೊದಲು ಅರ್ಜಿ ನಮೂನೆಯನ್ನು ಸಲ್ಲಿಸಿ.
To Download Official Notification
SSC CGL 2025 Notification
SSC CGL 14,582 Vacancy 2025
SSC Combined Graduate Level Exam 2025
SSC CGL Apply Online 2025
SSC latest job notifications 2025
Central government jobs for graduates 2025
SSC CGL Jobs 2025





Comments