Loading..!

ಸಶಸ್ತ್ರ ಸೀಮಾ ಬಲದಲ್ಲಿ (SSB) ಖಾಲಿ ಇರುವ 161 ಕಾನ್‌ಸ್ಟೆಬಲ್ (ಪಶುವೈದ್ಯಕೀಯ) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ
Tags: SSLC
Published by: Hanamant Katteppanavar | Date:25 ನವೆಂಬರ್ 2020
not found
ಗೃಹ ಸಚಿವಾಲಯದ ಅಧೀನದಲ್ಲಿರುವ ಸಶಸ್ತ್ರ ಸೀಮಾ ಬಲದ (SSB) ನೇಮಕಾತಿಯ ಅಧಿಸೂಚನೆಯಂತೆ 2020 ನೇ ಸಾಲಿನಲ್ಲಿ ಇರುವ 161 ಕಾನ್‌ಸ್ಟೆಬಲ್ (ಪಶುವೈದ್ಯಕೀಯ) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. 

ಭಾರತದಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಈ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 

ಆನ್‌ಲೈನ್ ಅರ್ಜಿಯು ನವೆಂಬರ್ 21, 2020 ರಂದು ಪ್ರಾರಂಭಗೊಂಡು ಮತ್ತು ಡಿಸೆಂಬರ್ 20, 2020 ರಂದು ಕೊನೆಗೊಳ್ಳುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
No. of posts:  161
Application Start Date:  21 ನವೆಂಬರ್ 2020
Application End Date:  20 ಡಿಸೆಂಬರ್ 2020
Selection Procedure: - ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಹಾಗು ದಾಖಲೆ ಪರಿಶೀಲನೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ
Qualification: - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು SSLC / 10 ನೇ ತರಗತಿಯ (ವಿಜ್ಞಾನ ವಿಷಯವು ಮುಖ್ಯ ವಿಷಯವಾಗಿರಬೇಕು) ಮತ್ತು ಮಾನ್ಯತೆ ಪಡೆದ ಪಶುವೈದ್ಯಕೀಯ ಆಸ್ಪತ್ರೆಯಿಂದ ಚಿಕಿತ್ಸೆಯಲ್ಲಿ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು
Fee:
- ಹಿಂದುಳಿದ / ಸಾಮಾನ್ಯ / EWS ಅಭ್ಯರ್ಥಿಗಳಿಗೆ - 100 ರೂ.ಅರ್ಜಿ ಶುಲ್ಕ ಹಾಗೂ ಎಸ್‌ಸಿ / ಎಸ್‌ಟಿ / ಮಹಿಳಾ ಅಭ್ಯರ್ಥಿಗಳಿಗೆ - ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
Age Limit:

- ಎಸ್‌ಎಸ್‌ಬಿ ನೇಮಕಾತಿ ಅಧಿಸೂಚನೆ 2020 ರ  ಅನ್ವಯ ಅಭ್ಯರ್ಥಿಗಳು ಕನಿಷ್ಠ -18 ವರ್ಷ ವಯೋಮಿತಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ- 25 ವರ್ಷ ವಯೋಮಿತಿಯನ್ನು ಮೀರಿರಬಾರದು. 

* ಮೀಸಲಾತಿಗಳಿಗನುಗುಣವಾಗಿ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ - 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ - 3 ವರ್ಷಗಳ ವಯೋಮಿತಿ ಸಡಲಿಕೆಯನ್ನು ನೀಡಲಾಗಿದೆ.

Pay Scale: - ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ 21,700 /- ರೂ. ರಿಂದ 69,100 /- ರೂ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.
To Download the official notification

Comments