ಭಾರತೀಯ ಕ್ರೀಡಾ ಪ್ರಾಧಿಕಾರ ಇಲ್ಲಿ ಖಾಲಿ ಇರುವ 320 ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Hanamant Katteppanavar | Date:21 ಎಪ್ರಿಲ್ 2021

ಭಾರತೀಯ ಕ್ರೀಡಾ ಪ್ರಾಧಿಕಾರ ಇಲ್ಲಿ ಖಾಲಿ ಇರುವ 320 ತರಬೇತಿದಾರ ಮತ್ತು ಸಹಾಯಕ ತರಬೇತಿದಾರ ಹುದ್ದೆಗಳ ನೇಮಕಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
* ಖಾಲಿ ಹುದ್ದೆಗಳ ವಿವರ:
- ತರಬೇತಿದಾರ (ಕೋಚ್) - 100 ಹುದ್ದೆಗಳು ಮತ್ತು
- ಸಹಾಯಕ ತರಬೇತಿದಾರ (ಅಸಿಸ್ಟೆಂಟ್ ಕೋಚ್) - 220 ಹುದ್ದೆಗಳು
No. of posts: 320
Application End Date: 20 ಮೇ 2021
Selection Procedure: - ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ, ಮೌಖಿಕ ಪರೀಕ್ಷೆ ಮತ್ತು ಆಯ್ಕೆ ಪಟ್ಟಿ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಹುದ್ದೆಗಳಿಗೆ ಅನುಗುಣವಾಗಿ Diploma in Coaching from SAI, NS NIS ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Age Limit: ಕೋಚ್ ಹುದ್ದೆಗಳಿಗೆ ಗರಿಷ್ಠ 45 ವರ್ಷಗಳು ಮತ್ತು ಅಸಿಸ್ಟೆಂಟ್ ಕೋಚ್ ಹುದ್ದೆಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Pay Scale:
- ತರಬೇತಿದಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 105000 /- ರೂ ಗಳಿಂದ 150000 /- ರೂ ಗಳು ಮತ್ತು
- ಸಹಾಯಕ ತರಬೇತಿದಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 41420 /- ರೂ ಗಳಿಂದ 112400 /- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.
- ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.





Comments