SIDBI ನೇಮಕಾತಿ 2025: ಗ್ರೇಡ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ – ಆನ್‌ಲೈನ್ ಅರ್ಜಿ ಸಲ್ಲಿಸಿ

ಸರ್ಕಾರಿ ಹುದ್ದೆಯನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಸಿಹಿ ಸುದ್ದಿ ನಿಮಗಾಗಿಯೇ, ಭಾರತೀಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ (SIDBI) 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 11-ಆಗಸ್ಟ್-2025 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪದವಿ ಪಾಸಾದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ.
ಭಾರತೀಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ ನಲ್ಲಿ ಒಟ್ಟು 76 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ, ಈ ನೇಮಕಾತಿ ಅಧಿಸೂಚನೆಯಡಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ (Grade A) ಮತ್ತು ಮ್ಯಾನೇಜರ್ (Grade B) ಹುದ್ದೆಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ಈ ಹುದ್ದೆಗಳಿಗೆ ಆನ್ ಲೈನ್ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸುವ ಮೂಲಕ ಆಯ್ಕೆ ಮಾಡಿಕೊಳಲಾಗುತ್ತದೆ. ಸರ್ಕಾರಿ ಉಸ್ತುವಾರಿ ಯೋಜನೆಗಳಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
SIDBI ಅಧಿಕಾರಿಗಳಿಗೆ ನೇಮಕಾತಿ ನಿಯಮಾನುಸಾರ ವೇತನ ಶ್ರೇಣಿಯೊಂದಿಗೆ ಈ ಹುದ್ದೆಗಳು ಉತ್ತಮ ವೃತ್ತಿಪರ ಅವಕಾಶವನ್ನು ನೀಡುತ್ತವೆ. ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು ಭಾರತೀಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ ನೇಮಕಾತಿ 2025ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!
🔹 ಹುದ್ದೆಗಳ ವಿವರ : 76
ಅಸಿಸ್ಟೆಂಟ್ ಮ್ಯಾನೇಜರ್ (Grade A) : 50
ಮ್ಯಾನೇಜರ್ (Grade B) : 26
🎓ಅರ್ಹತಾ ಅಂಶಗಳು :
- Grade A (ಅಸಿಸ್ಟೆಂಟ್ ಮ್ಯಾನೇಜರ್) :
* ವಾಣಿಜ್ಯ/ಅರ್ಥಶಾಸ್ತ್ರ/ಗಣಿತ/ಅಂಕಶಾಸ್ತ್ರ/ಬಿಸಿನೆಸ್ ಅಡ್ಮಿನಿಸ್ಟ್ರೇಷನ್/ಎಂಜಿನಿಯರಿಂಗ್ ನಲ್ಲಿ ಪದವಿ – ಕನಿಷ್ಠ 60% (SC/ST/PwBD – 50%)
* CA/CS/CMA/CFA/MBA/PGDM (2 ವರ್ಷಗಳ ಫುಲ್ ಟೈಮ್ ಕೋರ್ಸ್)
- Grade B (ಮ್ಯಾನೇಜರ್) :
* ಯಾವುದೇ ವಿಷಯದಲ್ಲಿ ಪದವಿ – ಕನಿಷ್ಠ 60% (SC/ST/PwBD – 50%)
* ಸ್ನಾತಕೋತ್ತರ ಪದವಿ – ಕನಿಷ್ಠ 55% (SC/ST/PwBD – ಪಾಸ್ ಮಾರ್ಕ್ಸ್)
* ಲಾ ಪದವಿ – ಕನಿಷ್ಠ 50% (SC/ST/PwBD – 45%)
* MCA – ಕನಿಷ್ಠ 60% (SC/ST/PwBD – 55%)
🎂 ವಯೋಮಿತಿ (14-07-2025ರ ಸ್ಥಿತಿಗೆ) :
🔹 Grade A (ಅಸಿಸ್ಟೆಂಟ್ ಮ್ಯಾನೇಜರ್) ಹದ್ದೆಗೆ : 21 ವರ್ಷ - 30 ವರ್ಷ
🔹 Grade B (ಮ್ಯಾನೇಜರ್) ಹುದ್ದೆಗೆ : 25 ವರ್ಷ - 33 ವರ್ಷ
💰 ವೇತನ ಶ್ರೇಣಿ :
🔹 Grade A (ಅಸಿಸ್ಟೆಂಟ್ ಮ್ಯಾನೇಜರ್) ಹುದ್ದೆಗಳಿಗೆ : ₹44,500 ರಿಂದ ₹89,150 ವರೆಗೆ – ಸರಾಸರಿ ₹1,00,000/- ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.
🔹 Grade B (ಮ್ಯಾನೇಜರ್) ಹುದ್ದೆಗಳಿಗೆ : ₹55,200 ರಿಂದ ₹99,750 ವರೆಗೆ – ಸರಾಸರಿ ₹1,15,000/- ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.
💰 ಅರ್ಜಿ ಶುಲ್ಕ :
SC/ST/PwBD ಅಭ್ಯರ್ಥಿಗಳಿಗೆ : ₹175/- (ಸೂಚನೆ ಶುಲ್ಕ)
ಇತರರು (OBC/EWS/General) ಅಭ್ಯರ್ಥಿಗಳಿಗೆ : ₹1,100/- (ಅರ್ಜಿ + ಸೂಚನೆ ಶುಲ್ಕ)
SIDBI ನೌಕರರು : ಯಾವುದೇ ಶುಲ್ಕವಿಲ್ಲ
📝 ಆಯ್ಕೆ ವಿಧಾನ :
1. ಆನ್‌ಲೈನ್ ಪರೀಕ್ಷೆ (ಹಂತ 1: 06-09-2025, ಹಂತ 2: 04-10-2025)
2. ವೈಯಕ್ತಿಕ ಸಂದರ್ಶನ – ನವೆಂಬರ್ 2025 (ಅಂದಾಜು)
🎯 ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್ [sidbi.in](https://sidbi.in) ಗೆ ಹೋಗಿ.
2. “SIDBI Officers (Grade A & B)” ಅಧಿಸೂಚನೆ ಓದಿ.
3. ಆನ್‌ಲೈನ್ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳು ಅಟ್ಯಾಚ್ ಮಾಡಿ.
4. ಅರ್ಜಿ ಶುಲ್ಕ ಪಾವತಿಸಿ.
5. ಸಲ್ಲಿಸಿದ ನಂತರ, ರೆಫರೆನ್ಸ್ ನಂಬರ್ ಸಂರಕ್ಷಿಸಿ.
📅 ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಾರಂಭ ದಿನಾಂಕ : 14-ಜುಲೈ-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-ಆಗಸ್ಟ್-2025
- ಆನ್‌ಲೈನ್ ಪರೀಕ್ಷೆ (ಹಂತ 1) : 06-ಸೆಪ್ಟೆಂಬರ್-2025
- ಆನ್‌ಲೈನ್ ಪರೀಕ್ಷೆ (ಹಂತ 2) : 04-ಅಕ್ಟೋಬರ್-2025
- ಸಂದರ್ಶನ ದಿನಾಂಕ : ನವೆಂಬರ್ 2025 (ಅಂದಾಜು)
ಸರ್ಕಾರಿ ಬ್ಯಾಂಕ್ ಉದ್ಯೋಗದ ಕನಸು ಈಡೇರಿಸಿಕೊಳ್ಳಲು ಇದು ಉತ್ತಮ ಅವಕಾಶ. ಅರ್ಜಿ ಸಲ್ಲಿಸಲು ತಡ ಮಾಡದೇ SIDBI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ!
Comments