ಶಿವಮೊಗ್ಗ ಜಿಲ್ಲೆಯ ಡಿವಿಎಸ್ ಪದವಿ ಪೂರ್ವ ಸ್ವತಂತ್ರ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ದೇಶೀಯ ವಿದ್ಯಾಶಾಲಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನಲ್ಲಿ ಖಾಲಿ ಇರುವ ಅರ್ಥಶಾಸ್ತ್ರ ವಿಭಾಗದ ಅನುದಾನಿತ ಉಪನ್ಯಾಸಕರ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು. ಇವರು ಅನುಮತಿ ನೀಡಿರುತ್ತಾರೆ, ಸದರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆ, ಬೋಧನಾನುಭವ ಮತ್ತು ಮೀಸಲಾತಿಗೆ ಸಂಬಂಧಿಸಿದ ಸ್ವವಿವರಗಳೊಂದಿಗೆ ಅಗತ್ಯ ದಾಖಲೆಗಳ ದೃಢೀಕೃತ ಪ್ರತಿಗಳೊಂದಿಗೆ ಅರ್ಜಿಗಳನ್ನು ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಚೇರಿಯ ಅವಧಿಯಲ್ಲಿ ಖುದ್ದಾಗಿ ಅಥವಾ ಅಂಚೆಯ ಮೂಲಕ ದಿನಾಂಕ: 02-11-2021 ಮಂಗಳವಾರ ಸಂಜೆ 05:00 ಗಂಟೆ ಒಳಗಾಗಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬೇಕಾದ ಕಚೇರಿ ವಿಳಾಸ :
ಕಾರ್ಯದರ್ಶಿಗಳು,
ದೇಶೀಯ ವಿದ್ಯಾಶಾಲಾ ಸಮಿತಿ (ರಿ.),
ಆಡಳಿತ ಮಂಡಳಿ ಕಚೇರಿ, ಡಿವಿಎಸ್ ಆವರಣ,
ಸರ್ ಎಂ.ವಿ.ರಸ್ತೆ, ಬಸವೇಶ್ವರ ಸರ್ಕಲ್, ಶಿವಮೊಗ್ಗ
ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ.




Comments