ಎಸ್‌ಬಿಐ ನೇಮಕಾತಿ 2025: ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ - ನಿಮ್ಮ ಭವಿಷ್ಯವನ್ನು ರೂಪಿಸಲು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಒಟ್ಟು 33 ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು, ಉದ್ಯೋಗ ನಿರೀಕ್ಷೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಈ ಅಧಿಸೂಚನೆಯಡಿಯಲ್ಲಿ ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ (Specialist Cadre Officer) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳಿಂದ ಜುಲೈ 31, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ನೇಮಕಾತಿಯ ಪ್ರಮುಖ ವಿವರಗಳು :
ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಅಧಿಸೂಚನೆ ನಂ. : CRPD/SCO/2025-26/05
ಹುದ್ದೆಗಳ ಸಂಖ್ಯೆ : 33
📌ಹುದ್ದೆಗಳ ಹೆಸರು :
ಜೆನರಲ್ ಮ್ಯಾನೇಜರ್ (ಆಡಿಟ್) – 01
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (ಆಡಿಟ್) – 14
ಡೆಪ್ಯೂಟಿ ಮ್ಯಾನೇಜರ್ (ಆಡಿಟ್) – 18
📝ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 11-07-2025
ಅಂತಿಮ ದಿನಾಂಕ : 31-07-2025
ಅರ್ಜಿಯ ಪ್ರಕಾರ : ಆನ್‌ಲೈನ್
ಆಧಿಕೃತ ವೆಬ್‌ಸೈಟ್ : [https://sbi.co.in](https://sbi.co.in)
🎓 ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ B.E/B.Tech, M.E/M.Tech ಅಥವಾ MCA ಪದವಿ ಹೊಂದಿರಬೇಕು.
ವಯೋಮಿತಿ :
ಜೆನರಲ್ ಮ್ಯಾನೇಜರ್ (Audit) : 45 ವರ್ಷ - 55 ವರ್ಷ
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (Audit) : 33 ವರ್ಷ - 45 ವರ್ಷ
ಡೆಪ್ಯೂಟಿ ಮ್ಯಾನೇಜರ್ (Audit) : 25 ವರ್ಷ - 35 ವರ್ಷ
ವಯೋಮಿತಿಯಲ್ಲಿ ಶಿಥಿಲತೆ ಸರ್ಕಾರದ ನಿಯಮಗಳ ಪ್ರಕಾರ ಲಭ್ಯವಿದೆ.
💰ವೇತನ ವಿವರ (CTC) :
ಜೆನರಲ್ ಮ್ಯಾನೇಜರ್ ಹುದ್ದೆಗಳಿಗೆ : ವಾರ್ಷಿಕ ₹1.00 ಕೋಟಿ ವರೆಗೆ
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಹುದ್ದೆಗಳಿಗೆ : ವಾರ್ಷಿಕ ₹44 ಲಕ್ಷ ವರೆಗೆ
💰 ಅರ್ಜಿದಾರರಿಗೆ ವಿಧಿಸಲಾಗುವ ಶುಲ್ಕ :
ಜೆನರಲ್/OBC/EWS ಅಭ್ಯರ್ಥಿಗಳಿಗೆ : ₹750/-
SC/ST/PwBD ಅಭ್ಯರ್ಥಿಗಳಿಗೆ : ಶುಲ್ಕವಿಲ್ಲ
📝ಆಯ್ಕೆ ವಿಧಾನ :
* ಅರ್ಜಿ ಶಾರ್ಟ್‌ಲಿಸ್ಟ್
* ದಾಖಲೆಗಳ ಪರಿಶೀಲನೆ
* ವೈಯಕ್ತಿಕ ಸಂದರ್ಶನ
🔹ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
1. ಎಸ್‌ಬಿಐ ವೆಬ್‌ಸೈಟ್‌ಗೆ ಭೇಟಿ ನೀಡಿ: [https://sbi.co.in](https://sbi.co.in)
2. "Careers" ವಿಭಾಗದಲ್ಲಿ ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ ನೇಮಕಾತಿ 2025 ವಿಭಾಗಕ್ಕೆ ಹೋಗಿ
3. ಅಧಿಸೂಚನೆಯನ್ನು ಓದಿ, ಅರ್ಜಿ ಫಾರ್ಮ್ ಭರ್ತಿ ಮಾಡಿ
4. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ
5. ಅರ್ಜಿ ಶುಲ್ಕ ಪಾವತಿಸಿ
6. ಫಾರ್ಮ್ ಸಲ್ಲಿಸಿ ಮತ್ತು ದೃಢೀಕರಣ ಸಂಖ್ಯೆಯನ್ನು ಉಳಿಸಿಟ್ಟುಕೊಳ್ಳಿ
🔹 ನಿಮ್ಮ ತಾಂತ್ರಿಕ ವಿದ್ಯೆ ಮತ್ತು ಅನುಭವದಿಂದ ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಅರ್ಜಿ ಹಾಕಿ!
Comments