Loading..!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Bhagya R K | Date:21 ಜೂನ್ 2025
not found

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2025ರ ಮಾರ್ಚ್‌ನಲ್ಲಿ ಅಧಿಕೃತ ಅಧಿಸೂಚನೆಯ ಮೂಲಕ 2964 ಸರ್ಕಲ್ ಆಧಾರಿತ ಅಧಿಕಾರಿ (CBO) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025ರ ಮೇ 29ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಮುಖ್ಯಾಂಶಗಳು :
ಸಂಸ್ಥೆ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆ ಹೆಸರು : ಸರ್ಕಲ್ ಆಧಾರಿತ ಅಧಿಕಾರಿ (CBO)
ಒಟ್ಟು ಹುದ್ದೆಗಳು : 2964
ನಿಯಮಿತ ಹುದ್ದೆಗಳು: 2600
ಬಾಕಿ ಹುದ್ದೆಗಳು (Backlog): 364


ವೇತನ ಶ್ರೇಣಿ : 
ಅಭ್ಯರ್ಥಿಗಳಿಗೆ ರೂ.48,480/- ರಿಂದ ರೂ.85,920/- ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.


ಅರ್ಹತೆಗಳು :
ಶೈಕ್ಷಣಿಕ ಅರ್ಹತೆ : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸಾಗಿರಬೇಕು.


ವಯೋಮಿತಿ : 
ಅಭ್ಯರ್ಥಿಗಳು ಕನಿಷ್ಠ 21 ವರ್ಷದಿಂದ 30 ವರ್ಷವರೆಗೆ (30-ಏಪ್ರಿಲ್-2025ರ ಮಾನದಂಡದಂತೆ) ವಯೋಮಿತಿಯನ್ನು ಹೊಂದಿರಬೇಕು.


ವಯೋಮಿತಿಯಲ್ಲಿ ಸಡಿಲಿಕೆ :
OBC (NCL) : 03 ವರ್ಷಗಳು
SC/ST : 05 ವರ್ಷಗಳು
PwBD (Gen/EWS) : 10 ವರ್ಷಗಳು
PwBD (OBC) : 13 ವರ್ಷಗಳು
PwBD (SC/ST) : 15 ವರ್ಷಗಳು


ಅರ್ಜಿದಾರರ ಆಯ್ಕೆ ಪ್ರಕ್ರಿಯೆ :
1. ಆನ್‌ಲೈನ್ ಪರೀಕ್ಷೆ (ವಸ್ತುನಿಷ್ಠ + ವಿವರಣಾತ್ಮಕ)
2. ಅರ್ಜಿಯ ಪರಿಶೀಲನೆ
3. ದಾಖಲೆಗಳ ಪರಿಶೀಲನೆ
4. ಸಂದರ್ಶನ
5. ಸ್ಥಳೀಯ ಭಾಷಾ ಪ್ರಾವಿಣ್ಯತೆ ಪರೀಕ್ಷೆ


ಅರ್ಜಿದಾರರು ತಿಳಿದುಕೊಳ್ಳಬೇಕಾದ ಪ್ರಮುಖ ದಿನಾಂಕಗಳು :
ಅರ್ಜಿ ಪ್ರಾರಂಭ ದಿನಾಂಕ : 09-ಮೇ-2025
ಅಂತಿಮ ದಿನಾಂಕ : 29-ಮೇ-2025
ಕಾಲ್ಲೆಟರ್ ಡೌನ್‌ಲೋಡ್ ದಿನಾಂಕ (ಅಂದಾಜು) : ಜುಲೈ 2025
ಆನ್‌ಲೈನ್ ಪರೀಕ್ಷೆ ದಿನಾಂಕ (ಅಂದಾಜು) : ಜುಲೈ 2025


ಅರ್ಜಿಯನ್ನು ಹೇಗೆ ಸಲ್ಲಿಸಬೇಕು :
1. ಎಸ್‌ಬಿಐ ಅಧಿಕೃತ ಅಧಿಸೂಚನೆಯನ್ನು ಓದಿ.
2. ಅರ್ಜಿ ಸಲ್ಲಿಸುವ ಮುನ್ನ, ಇಮೇಲ್ ಐಡಿ, ಮೊಬೈಲ್ ನಂಬರ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
3. ಅಧಿಕೃತ ವೆಬ್‌ಸೈಟ್‌ನಲ್ಲಿ ([https://sbi.co.in](https://sbi.co.in)) ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
4. ಅಗತ್ಯವಿದ್ದಲ್ಲಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
5. ಅರ್ಜಿಯನ್ನು ಸಲ್ಲಿಸಿದ ನಂತರ ಅಪ್ಲಿಕೇಶನ್ ನಂಬರ್/ರಿಸಿಪ್ಟ್ ನಂಬರ್ ನಕಲು ಮಾಡಿಕೊಳ್ಳಿ.


ಈ ಅವಕಾಶವನ್ನು ಬಳಸಿಕೊಂಡು, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮಯಕ್ಕೆ ಸಲ್ಲಿಸಿ, ಎಸ್‌ಬಿಐಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಬಹುದು. 

ಸರ್ಕಲ್ ಆಧಾರಿತ ಅಧಿಕಾರಿ (CBO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶವನ್ನು ನೀಡಲಾಗಿದೆ. 21.06.2025 ರಿಂದ 30.06.2025 ವರೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Application Start Date:  21 ಜೂನ್ 2025
Application End Date:  30 ಜೂನ್ 2025
To Download Official Notification
To Download Extended Notification
SBI Recruitment 2025
SBI Notification 2025
SBI Online Application 2025
SBI PO Recruitment 2025
SBI Clerk Vacancy 2025
How to apply for SBI Recruitment 2025

Comments

Annapurneshwari Hugar ಮೇ 27, 2025, 11:40 ಪೂರ್ವಾಹ್ನ