Loading..!

ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಪದವಿ ಪಾಸಾದ ಅಭ್ಯರ್ಥಿಗಳಿಂದ CBO ಹುದ್ದೆಗೆ ಅರ್ಜಿ ಆಹ್ವಾನ | ಒಟ್ಟು 1226 ಹುದ್ದೆಗಳ ನೇಮಕಾತಿ
Published by: Basavaraj Halli | Date:10 ಡಿಸೆಂಬರ್ 2021
not found
ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನ ವೃತ್ತಾವಾರು ಆಫೀಸರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಖಾಲಿ ಇರುವ ಒಟ್ಟು 1226 Circle Based Officer ಹುದ್ದೆಗಳ ನೇಮಕಾತಿಗಾಗಿ ಪದವಿ ಪಾಸಾದ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

ಒಟ್ಟು ಹುದ್ದೆಗಳ ಪೈಕಿ ಬೆಂಗಳೂರಿನಲ್ಲಿಯು 278 ಸರ್ಕಲ್ ಬೇಸ್ಡ್‌ ಖಾಲಿ ಇರುತ್ತವೆ.
No. of posts:  1226
Application Start Date:  9 ಡಿಸೆಂಬರ್ 2021
Application End Date:  29 ಡಿಸೆಂಬರ್ 2021
Work Location:  Across India
Selection Procedure: ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.
Qualification:
ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಾಸಾಗಿರಬೇಕು. 
Fee:
- Gen / EWS / OBC ಅಭ್ಯರ್ಥಿಗಳಿಗೆ ರೂ.750.

- ST / SC / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು. 

* ಮೀಸಲಾತಿಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Pay Scale:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ರೂ.36000 ವರೆಗೆ ವೇತನ ಪಡೆಯಲಿದ್ದಾರೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ

Comments