Loading..!

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಪದವಿ ಪಾಸಾದ ಅಭ್ಯರ್ಥಿಗಳಿಂದ 600 ಹುದ್ದೆಗಳ ನೇಮಕಾತಿ | ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:17 ಜನವರಿ 2025
not found

ಭಾರತದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಇಲ್ಲಿ ಖಾಲಿ ಇರುವ ಸುಮಾರು 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಪದವಿ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(SBI)ನ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕವನ್ನು 16/01/2025 ರಿಂದ 19/01/2025 ವರೆಗೆ ವಿಸ್ತರಿಸಲಾಗಿದೆ. 

No. of posts:  600
Application Start Date:  27 ಡಿಸೆಂಬರ್ 2024
Application End Date:  19 ಜನವರಿ 2025
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.


ಹುದ್ದೆಗಳ ವಿವರ : 600
1. Regular Vacancies : 586
2. Backlog Vacancies : 14

Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
Fee:

ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ(EWS) ಮತ್ತು ಇತರೆ ಹಿಂದುಳಿದ ವರ್ಗಗಳ(OBC) ಅಭ್ಯರ್ಥಿಗಳಿಗೆ: ರೂ.750/-
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ನೀಡಲಾಗಿದೆ.

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು. 
- OBC ಅಭ್ಯರ್ಥಿಗಳಿಗೆ 3 ವರ್ಷ 
- SC ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

Employment Type: FULL_TIME
Hiring Organization: KPSC Vaani https://www.kpscvaani.com
Work Location: ಭಾರತದಾದ್ಯಂತ, KA,
To Download Official Notification
Related Tags: Degree

Comments