ಭಾರತೀಯ ಕ್ರೀಡಾ ಪ್ರಾಧಿಕಾರ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ

ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕ್ರೀಡಾ ಪ್ರಾಧಿಕಾರ ಕಚೇರಿಯಲ್ಲಿ ಖಾಲಿ ಇರುವ 152 ಕೋಚ್,ಸೀನಿಯರ್ ಕೋಚ್, ಚೀಫ್ ಕೋಚ್ ಮತ್ತು ಎಚ್ ಪಿ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ03/03/2023ರ ಸಂಜೆ 5 ಘಂಟೆಯೊಳಗೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಹುದ್ದೆಗಳ ವಿವರ : 152
ಕೋಚ್: 44
ಸೀನಿಯರ್ ಕೋಚ್ : 34
ಚೀಫ್ ಕೋಚ್ : 49
ಎಚ್ ಪಿ ಸಿ : 25
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕದ ಅನ್ವಯ ಅಭ್ಯರ್ಥಿಗಳು ಈ ಕೆಳಗಿನತ್ತೆ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು.
ಕೋಚ್ ಹುದ್ದೆಗಳಿಗೆ : 40 ವರ್ಷಗಳು
ಸೀನಿಯರ್ ಕೋಚ್ ಹುದ್ದೆಗಳಿಗೆ : 50 ವರ್ಷಗಳು
ಚೀಫ್ ಕೋಚ್ ಮತ್ತು ಎಚ್ ಪಿ ಸಿ ಹುದ್ದೆಗಳಿಗೆ : 60 ವರ್ಷಗಳು
* ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ಮತ್ತು ವೃತ್ತಿ ಅನುಭವದ ಆಧಾರದ ಮೇಲೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ಈ ಕೆಳಗಿನಂತೆ ನೀಡಲಾಗುವುದು. ಜೊತೆಗೆ ಇತರೆ ಸೌಲಭ್ಯಗಳು ದೊರೆಯಲಿವೆ.
ಕೋಚ್ ಹುದ್ದೆಗಳಿಗೆ : Rs. 56100-177500
ಸೀನಿಯರ್ ಕೋಚ್ ಹುದ್ದೆಗಳಿಗೆ : Rs. 67700-208700
ಚೀಫ್ ಕೋಚ್ ಹುದ್ದೆಗಳಿಗೆ : Rs. 78800-209200
ಎಚ್ ಪಿ ಸಿ ಹುದ್ದೆಗಳಿಗೆ : Rs.123100-215900
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments