Loading..!

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:28 ಮೇ 2021
not found
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ್ ಮಿಷನ್ ಹಾಗೂ ಸ್ವಚ್ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕ : 19-06-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. 

* ಹುದ್ದೆಗಳ ವಿವರ : 

- ಜೂನಿಯರ್ ಕನ್ಸಲ್ಟೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟ) - 1

- ಖರೀದಿ ಸಲಹೆಗಾರ - 1

- ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯೂಎಂ) ಸಲಹೆಗಾರ - 1

- ಭೂ ವಿಜ್ಞಾನಿ - 1

- ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ - 1

- ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲ್ಟೆಂಟ್ - 2 

 

ಅರ್ಜಿ ಸಲ್ಲಿಸುವ ವಿಳಾಸ : 

“ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ”, 2 ನೇ ಮಹಡಿ, ಕೆಎಚ್‌ಬಿ ಕಾಂಪ್ಲೆಕ್ಸ್, ಕಾವೇರಿ ಭವನ, ಕೆ.ಜಿ ರಸ್ತೆ, ಬೆಂಗಳೂರು - 560 009. 
No. of posts:  7
Application Start Date:  27 ಮೇ 2021
Application End Date:  19 ಜೂನ್ 2021
Work Location:  ಕರ್ನಾಟಕ
Qualification:
- ಜೂನಿಯರ್ ಕನ್ಸಲ್ಟೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟ) ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ ನಲ್ಲಿ ಪದವಿಯನ್ನು ಹೊಂದಿರಬೇಕು. 

- ಖರೀದಿ ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ / ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು. 

- ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯೂಎಂ) ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಪರಿಣತಿಯೊಂದಿಗೆ ಪರಿಸರ ಎಂಜಿನಿಯರಿಂಗ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು. 

- ಭೂ ವಿಜ್ಞಾನಿ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನ / ಅನ್ವಯಿಕ ಭೂವಿಜ್ಞಾನ ಪದವಿಯನ್ನು ಹೊಂದಿರಬೇಕು. 

- ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್ / ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. 

- ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲ್ಟೆಂಟ್ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಸಿ.ಎ. / ಸ್ಟ್ಯಾಟಿಸ್ಟಿಕ್ಸ್, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ / ಬಿಇ ಕಂಪ್ಯೂಟರ್ ಸೈನ್ಸ್ ಪದವಿಯನ್ನು ಹೊಂದಿರಬೇಕು. 
Pay Scale:
* ವೇತನ ಶ್ರೇಣಿ :
- ಜೂನಿಯರ್ ಕನ್ಸಲ್ಟೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟ) - 60,000 / - ರೂ & ತಿಂಗಳಿಗೆ ರೂ .15,000 / - ಪ್ರಯಾಣ ಭತ್ಯೆಯಾಗಿ ನೀಡಲಾಗುವುದು.

- ಖರೀದಿ ಸಲಹೆಗಾರ - 85,000 /- ರೂ.ನಿಂದ 1,00,000 / ರೂ

- ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯೂಎಂ) ಸಲಹೆಗಾರ - 1,00,000/- ರೂ.ನಿಂದ 1,20,000/- ರೂ.

- ಭೂವಿಜ್ಞಾನಿ - 30,000/- ರೂ.ನಿಂದ 35,000/- ರೂ.

- ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ - 22,000/- ರೂ.ನಿಂದ 25,000/- ರೂ

- ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲ್ಟೆಂಟ್ - 22,000/- ರೂ.ನಿಂದ 25,000/- ರೂ
ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
To Download Official Notification

Comments