Loading..!

ಈಶಾನ್ಯ ರೈಲ್ವೆಯಲ್ಲಿ ಖಾಲಿ ಇರುವ ಸುಮಾರು 1104 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತ ಮಾಹಿತಿ
Tags: SSLC
Published by: Yallamma G | Date:28 ಜನವರಿ 2025
not found

ರೈಲ್ವೆ ನೇಮಕಾತಿ ವಿಭಾಗ, ಈಶಾನ್ಯ ರೈಲ್ವೆ(North Eastern Railway) ಯಲ್ಲಿ ಖಾಲಿ ಇರುವ ಒಟ್ಟು 1104 ಮೆಕ್ಯಾನಿಕಲ್ ವರ್ಕ್ ಶಾಪ್, ಸಿಗ್ನಲ್ ವರ್ಕ್ ಶಾಪ್, ಕ್ಯಾರೇಜ್, ಡೀಸೆಲ್ ಶೇಡ್ ಮತ್ತು ಬ್ರಿಡ್ಜ್ ವರ್ಕ್ ಶಾಪ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು. ಈ ಹುದ್ದೆಗಳ ಬಗ್ಗೆ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ಹುದ್ದೆ ವಿವರ : 1104
ಮೆಕಾನಿಕಲ್ ವರ್ಕ್‌ಶಾಪ್, ಗೋರಖ್‌ಪುರ್ : 411
ಸಿಗ್ನಲ್ ವರ್ಕ್‌ಶಾಪ್, ಗೋರಖ್‌ಪುರ್ ಕ್ಯಾಂಟ್ : 63
ಬ್ರಿಡ್ಜ್ ವರ್ಕ್‌ಶಾಪ್, ಗೋರಖ್‌ಪುರ್ ಕ್ಯಾಂಟ್ : 35
ಮೆಕಾನಿಕಲ್ ವರ್ಕ್‌ಶಾಪ್, ಇಜ್ಜತನಗರ : 151
ಡೀಸೆಲ್ ಶೆಡ್, ಇಜ್ಜತನಗರ : 60
ಕ್ಯಾರೆಜ್ & ವೇಗನ್, ಇಜ್ಜತನಗರ : 64
ಕ್ಯಾರೆಜ್ & ವೇಗನ್, ಲಕ್ನೋ ಜಂಕ್ಷನ್ : 155
ಡೀಸೆಲ್ ಶೆಡ್, ಗೋಂಡಾ : 90
ಕ್ಯಾರೆಜ್ & ವೇಗನ್, ವಾರಣಾಸಿ : 75


ಅರ್ಹತಾ ಮಾನದಂಡ:
- ವಿದ್ಯಾರ್ಹತೆ: 10ನೇ ತರಗತಿ ಮತ್ತು ಐಟಿಐ (ಸಂಬಂಧಿತ ಟ್ರೇಡ್) ಪಾಸಾಗಿರಬೇಕು.


ವಯೋಮಿತಿ : 
ಕನಿಷ್ಠ: 15 ವರ್ಷ
ಗರಿಷ್ಠ: 24 ವರ್ಷ
ವಯೋಮಿತಿಯ ಸಡಿಲಿಕೆ : 
SC/ST ಅಭ್ಯರ್ಥಿಗಳಿಗೆ : 5 ವರ್ಷ 
OBC ಅಭ್ಯರ್ಥಿಗಳಿಗೆ : 3 ವರ್ಷ 
ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷಗಳು  


ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಇತರ ಅಭ್ಯರ್ಥಿಗಳಿಗೆ: ₹100/-
SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
ಪಾವತಿ ವಿಧಾನ: ಆನ್‌ಲೈನ್ ಮೂಲಕ


ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 24-01-2025 (ಬೆಳಿಗ್ಗೆ 10:00 ಗಂಟೆ)
ಅರ್ಜಿಯ ಕೊನೆಯ ದಿನಾಂಕ: 23-02-2025 (ಸಂಜೆ 5:00 ಗಂಟೆ)

ಆಯ್ಕೆ ವಿಧಾನ:
ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


ಸೂಚನೆ: ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

Application End Date:  23 ಫೆಬ್ರುವರಿ 2025
To Download Official Notification

Comments