ತಾಜಾ ಸುದ್ದಿ: RRB 2025–26 ನೇ ನೇಮಕಾತಿ: 331 ಹುದ್ದೆಗಳಿಗೆ ಅರ್ಜಿ ಆಹ್ವಾನ–ಪದವಿ ಪಾಸಾದವರಿಗೆ ಭರ್ಜರಿ ಅವಕಾಶ

ರೈಲ್ವೆ ನೇಮಕಾತಿ ಮಂಡಳಿ (RRB) 2025–26 ನೇ ಸಾಲಿನ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಇವು ಎಲ್ಲಾ ರಾಜ್ಯಗಳಲ್ಲಿ ವಿವಿಧ ರೋಟೇಶನ್‌ಗಳಿಗಾಗಿ ಮತ್ತು ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಿದ್ದು, ಪದವಿ ಪಡೆದ ಅಭ್ಯರ್ಥಿಗಳಿಗೂ ಅವಕಾಶವಿದೆ.
ರೇಲ್ವೆ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿಗೆ ಸಿದ್ಧವಾಗುತ್ತಿವೆ. ಅದೂ ನೇರ ನೇಮಕಾತಿ! ಇದು ಕೇವಲ ಉದ್ಯೋಗಾವಕಾಶವಲ್ಲ, ಭದ್ರ ಭವಿಷ್ಯಕ್ಕೆ ಒಂದು ದಾರಿ. ರೈಲ್ವೇ ನೇಮಕಾತಿ ಮಂಡಳಿ (RRB) ಅಖಿಲ ಭಾರತ ಮಟ್ಟದಲ್ಲಿಹಿರಿಯ ಪ್ರಚಾರ ನಿರೀಕ್ಷಕರು, ಪ್ರಯೋಗಾಲಯ ಸಹಾಯಕ, ಮುಖ್ಯ ಕಾನೂನು ಸಹಾಯಕ, ಸಾರ್ವಜನಿಕ ಅಭಿಯೋಜಕರು, ಜೂನಿಯರ್ ಅನುವಾದಕ/ಹಿಂದಿ ಮತ್ತು ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು ಹುದ್ದೆಗಳ ನೇಮಕಾತಿಗಾಗಿ indianrailways.gov.in ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 29, 2026.
ಹೌದು ಬರೀ ಪದವಿ ಪಾಸಾಗಿದ್ರೆ ಸಾಕು ಇಲ್ಲಿದೆ ಭರ್ಜರಿ ಅವಕಾಶ, ರೈಲ್ವೆ ನೇಮಕಾತಿ ಮಂಡಳಿಯು 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಸರ್ಕಾರಿ ಉದ್ಯೋಗ ಎಂದರೆ ಸ್ಥಿರತೆ, ಭದ್ರತೆ ಮತ್ತು ಸಮಾಜದಲ್ಲಿ ಗೌರವ.
ರೈಲ್ವೆ ನೇಮಕಾತಿ ಮಂಡಳಿಯು 2025 ರ RRB ಅಧಿಕೃತ ಅಧಿಸೂಚನೆಯಡಿಯಲ್ಲಿ ಒಟ್ಟು 311 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ.
ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇಲ್ಲಿ ನಾವು ಪ್ರತಿ ಹುದ್ದೆಯ ವಿವರ, ಅರ್ಹತೆಗಳು, ವೇತನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಿದ್ದೇವೆ. ಆದರೆ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ ಮತ್ತು ನಿಮಗೆ ಯಾವುದು ಸರಿಹೊಂದುತ್ತದೆ ಎಂಬುದನ್ನು ತಿಳಿಯುವ ಮುನ್ನ, ಈ ನೇಮಕಾತಿಗೆ ಇರುವ ಒಂದು ವಿಶೇಷ ನಿಯಮದ ಬಗ್ಗೆ ತಿಳಿಯಬೇಕಿದೆ...
📌RRB ಹುದ್ದೆಯ ಅಧಿಸೂಚನೆ
🏛️ ಸಂಸ್ಥೆಯ ಹೆಸರು : ರೈಲ್ವೆ ನೇಮಕಾತಿ ಮಂಡಳಿ ( RRB )
🧾 ಹುದ್ದೆಗಳ ಸಂಖ್ಯೆ: 311
📍 ಉದ್ಯೋಗ ಸ್ಥಳ: ಭಾರತದಾದ್ಯಂತ
👨💼 ಹುದ್ದೆಯ ಹೆಸರು: ಜೂನಿಯರ್ ಟ್ರಾನ್ಸ್‌ಲೇಟರ್
💰 ಸ್ಟೈಫಂಡ್: ರೈಲ್ವೆ ನೇಮಕಾತಿ ಮಂಡಳಿ ( RRB ) ನಿಯಮಗಳ ಪ್ರಕಾರ
KAS, FDA, SDA, RRB, PSI, PC ಮತ್ತಿತರ ಪರೀಕ್ಷೆಗಳ ಮಾದರಿ ಪ್ರಶ್ನೆಗಳ ಅಭ್ಯಾಸಕ್ಕಾಗಿ ಈ ಲಿಂಕ್ ಅನ್ನು ತೆರೆಯಿರಿ.
📌ಹುದ್ದೆಯ ವಿವರಗಳು : 311
ಹಿರಿಯ ಪ್ರಚಾರ ನಿರೀಕ್ಷಕರು : 15
ಪ್ರಯೋಗಾಲಯ ಸಹಾಯಕ ಗ್ರೇಡ್ III : 39
ಮುಖ್ಯ ಕಾನೂನು ಸಹಾಯಕ : 22
ಜೂನಿಯರ್ ಅನುವಾದಕ (ಹಿಂದಿ) : 202
ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು : 24
ಸಾರ್ವಜನಿಕ ಅಭಿಯೋಜಕರು : 7
ವೈಜ್ಞಾನಿಕ ಸಹಾಯಕ (ತರಬೇತಿ) : 2
🎓ಅರ್ಹತಾ ಮಾನದಂಡ :ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗಳಿಗೆ ಅನುಗುಣವಾಗಿ ಈಕೆಳಗಿನಂತೆ ವಿದ್ಯಾರ್ಹತೆಯನ್ನು ಪಡೆದಿರಬೇಕು.
🔹ಹಿರಿಯ ಪ್ರಚಾರ ನಿರೀಕ್ಷಕರು : ಪದವಿ + ಸಾರ್ವಜನಿಕ ಸಂಪರ್ಕ/ಪತ್ರಿಕೋದ್ಯಮ/ಜಾಹೀರಾತು/ಸಮೂಹ ಸಂವಹನದಲ್ಲಿ ಡಿಪ್ಲೊಮಾ
🔹ಪ್ರಯೋಗಾಲಯ ಸಹಾಯಕ ಗ್ರೇಡ್ III: ವಿಜ್ಞಾನ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) ಅಥವಾ ಅದಕ್ಕೆ ಸಮಾನವಾದ ವಿಷಯವನ್ನು ಹೊಂದಿರುವ 12ನೇ (+2 ಹಂತ) ಅಥವಾ ತತ್ಸಮಾನ ಪರೀಕ್ಷೆ.
🔹ಮುಖ್ಯ ಕಾನೂನು ಸಹಾಯಕ : ವಿಶ್ವವಿದ್ಯಾಲಯ ಪದವಿಕಾನೂನು ಪದವಿ ಮತ್ತು ಬಾರ್‌ನಲ್ಲಿ ಪ್ಲೀಡರ್ ಆಗಿ 3 ವರ್ಷಗಳ ಕಾಲ ಸ್ಥಾಯಿ ಅಭ್ಯಾಸ.
🔹ಜೂನಿಯರ್ ಅನುವಾದಕ (ಹಿಂದಿ) : ಇಂಗ್ಲಿಷ್/ಹಿಂದಿಯಲ್ಲಿ ಸ್ನಾತಕೋತ್ತರ ಪದವಿ (ಪದವಿ ಮಟ್ಟದಲ್ಲಿ)
🔹ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು : ಮಾನವ ಸಂಪನ್ಮೂಲದಲ್ಲಿ ಕಾರ್ಮಿಕ/ಸಮಾಜ ಕಲ್ಯಾಣ/ಎಲ್‌ಎಲ್‌ಬಿ/ಪಿಜಿ/ಎಂಬಿಎ ಡಿಪ್ಲೊಮಾ
🔹ಸಾರ್ವಜನಿಕ ಅಭಿಯೋಜಕರು : ಕ್ರಿಮಿನಲ್ ಕಾನೂನು ಮತ್ತು ಪ್ರಾಸಿಕ್ಯೂಷನ್‌ನಲ್ಲಿ ಸಂಬಂಧಿತ ಅನುಭವದೊಂದಿಗೆ ಕಾನೂನು ಪದವಿ (LLB)
🔹ವೈಜ್ಞಾನಿಕ ಸಹಾಯಕ (ತರಬೇತಿ) : ಮನೋವಿಜ್ಞಾನದಲ್ಲಿ ದ್ವಿತೀಯ ದರ್ಜೆ ಸ್ನಾತಕೋತ್ತರ ಪದವಿ ಮತ್ತು 1 ವರ್ಷದ ಅನುಭವ.
⏳ ವಯಸ್ಸಿನ ಮಿತಿ : ನೇಮಕಾತಿ ನಿಯಮಾನುಸಾರವಾಗಿ ಈ ಕೆಳಗಿನಂತೆ ವಯೋಮಿತಿಯನ್ನು ನಿಗದಿಪಸಾದಿಸಲಾಗಿದೆ.
ಹಿರಿಯ ಪ್ರಚಾರ ನಿರೀಕ್ಷಕರು : 18 – 33
ಪ್ರಯೋಗಾಲಯ ಸಹಾಯಕ : 18 – 30
ಮುಖ್ಯ ಕಾನೂನು ಸಹಾಯಕ : 18 – 40
ಜೂನಿಯರ್ ಅನುವಾದಕ/ಹಿಂದಿ : 18 – 33
ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು : 18 – 33
ಸಾರ್ವಜನಿಕ ಅಭಿಯೋಜಕರು : 18 – 32
ವೈಜ್ಞಾನಿಕ ಸಹಾಯಕ (ತರಬೇತಿ) : 18 – 35
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
SC/ST ಅಭ್ಯರ್ಥಿಗಳು: 5 ವರ್ಷಗಳು
ಪಿಡಬ್ಲ್ಯೂಬಿಡಿ (ಯುಆರ್/ ಇಡಬ್ಲ್ಯೂಎಸ್) ಅಭ್ಯರ್ಥಿಗಳು: 10 ವರ್ಷಗಳು
ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು
💰 ಅರ್ಜಿ ಶುಲ್ಕ :
=> ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ : 500/-
=> ಎಸ್‌ಸಿ / ಎಸ್‌ಟಿ / ಇಬಿಸಿ / ಇಎಸ್‌ಎಂ : 250/-
=> ಎಲ್ಲಾ ಮಹಿಳಾ ವಿಭಾಗ : 250/-
=> ಅಲ್ಪಸಂಖ್ಯಾತರು / ತೃತೀಯ ಲಿಂಗ : 250/-
=> ದೋಷ ತಿದ್ದುಪಡಿ ಶುಲ್ಕಗಳು : 250/-
=> ಪಾವತಿ ವಿಧಾನ: ಆನ್‌ಲೈನ್ ವಿಧಾನ
=> ಸೂಚನೆ - CBT - 1 ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷಾ ಶುಲ್ಕ ಮರುಪಾವತಿ ಮಾಡಲಾಗುತ್ತದೆ.
=> ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ. 400/-
=> ಎಸ್‌ಸಿ/ಎಸ್‌ಟಿ/ಮಹಿಳಾ/ಇಎಸ್‌ಎಂ ಅಭ್ಯರ್ಥಿಗಳಿಗೆ ರೂ. 250/-
💰 ಸ್ಟೈಪೆಂಡ್ / ವೇತನ :
ಹಿರಿಯ ಪ್ರಚಾರ ನಿರೀಕ್ಷಕರು - ರೂ. 35,400/-
ಪ್ರಯೋಗಾಲಯ ಸಹಾಯಕ - ರೂ. 19,900/-
ಮುಖ್ಯ ಕಾನೂನು ಸಹಾಯಕ - ರೂ. 44,900/-
ಜೂನಿಯರ್ ಅನುವಾದಕ/ಹಿಂದಿ - ರೂ. 35,400/-
ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು - ರೂ. 35,400/-
ಸಾರ್ವಜನಿಕ ಅಭಿಯೋಜಕರು - ರೂ. 44,900/-
ವೈಜ್ಞಾನಿಕ ಸಹಾಯಕ (ತರಬೇತಿ) - ರೂ. 35,400/-
💼 ಆಯ್ಕೆ ಪ್ರಕ್ರಿಯೆ : ಆಯ್ಕೆ ಪ್ರಕ್ರಿಯೆ : ಹಿಂದಿನ ವರ್ಷದ RRB ಅಧಿಸೂಚನೆಯಲ್ಲಿ ಹೇಳಿದಂತೆ, ಅಭ್ಯರ್ಥಿಗಳ ಆಯ್ಕೆಯನ್ನು 4 ವಿಭಿನ್ನ ಹಂತಗಳ ಮೂಲಕ ಮಾಡಲಾಗುತ್ತದೆ. ರೈಲ್ವೆ 2025 ನೇಮಕಾತಿಗೆ ಶಾರ್ಟ್‌ಲಿಸ್ಟ್ ಮಾಡಲು ಅಭ್ಯರ್ಥಿಗಳು ಪ್ರತಿ ಹಂತದಲ್ಲೂ ಅರ್ಹತೆ ಪಡೆಯಬೇಕು.
=> ಹಂತ 1- 1ನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-I)
=> ಹಂತ 2- 2 ನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-2)
=> ಹಂತ 3- ದಾಖಲೆ ಪರಿಶೀಲನೆ
=> ಹಂತ 4- ವೈದ್ಯಕೀಯ ಪರೀಕ್ಷೆ
📝 RRB 2025 ಪರೀಕ್ಷಾ ಮಾದರಿ :ರೈಲ್ವೆ ನೇಮಕಾತಿ ಮಂಡಳಿಯು ಘೋಷಿಸಿದಂತೆ, CBT 1 ಮತ್ತು CBT 2 ಪರೀಕ್ಷೆಗಾಗಿ RRB JE 2025 ರ ಪರೀಕ್ಷಾ ಮಾದರಿಯು ಈ ಕೆಳಗಿನಂತಿದೆ-
1. CBT ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ⅓ ಅಂಕಗಳ ಋಣಾತ್ಮಕ ಅಂಕವಿರುತ್ತದೆ.
2. CBT 1 ಪರೀಕ್ಷೆಯ ಅವಧಿ 90 ನಿಮಿಷಗಳು ಮತ್ತು CBT 2 ಪರೀಕ್ಷೆಗೆ 120 ನಿಮಿಷಗಳು.
3. CBT 1 ರಲ್ಲಿ 100 ಪ್ರಶ್ನೆಗಳು ಇರುತ್ತವೆ ಮತ್ತು CBT 2 ರಲ್ಲಿ 150 ಪ್ರಶ್ನೆಗಳು ಇರುತ್ತವೆ.
4. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿನ ಪ್ರಶ್ನೆಗಳ ಪ್ರಕಾರಗಳು ವಸ್ತುನಿಷ್ಠ ಪ್ರಕಾರದ್ದಾಗಿರುತ್ತವೆ (ಬಹು ಆಯ್ಕೆಯ ಪ್ರಶ್ನೆಗಳು).
📍 RRB 2026 CBT 1 ಪರೀಕ್ಷಾ ಮಾದರಿ :
1 ಗಣಿತ : 30 ಪ್ರಶ್ನೆಗಳು 30 ಅಂಕಗಳು
2 ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ : 25 ಪ್ರಶ್ನೆಗಳು 25 ಅಂಕಗಳು
3 ಸಾಮಾನ್ಯ ಅರಿವು : 15 ಪ್ರಶ್ನೆಗಳು 15 ಅಂಕಗಳು
4 ಸಾಮಾನ್ಯ ವಿಜ್ಞಾನ : 30 ಪ್ರಶ್ನೆಗಳು 30 ಅಂಕಗಳು
📍 RRB 2026 CBT 2 ಪರೀಕ್ಷಾ ಮಾದರಿ :
1 ಸಾಮಾನ್ಯ ಅರಿವು : 15 ಪ್ರಶ್ನೆಗಳು 15 ಅಂಕಗಳು
2 ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ : 15 ಪ್ರಶ್ನೆಗಳು 15 ಅಂಕಗಳು
3 ಕಂಪ್ಯೂಟರ್‌ಗಳು ಮತ್ತು ಅಪ್ಲಿಕೇಶನ್‌ಗಳ ಮೂಲಗಳು : 10 ಪ್ರಶ್ನೆಗಳು 10 ಅಂಕಗಳು
4 ಪರಿಸರ ಮತ್ತು ಮಾಲಿನ್ಯ ನಿಯಂತ್ರಣದ ಮೂಲಗಳು : 10 ಪ್ರಶ್ನೆಗಳು 10 ಅಂಕಗಳು
5 ತಾಂತ್ರಿಕ ಸಾಮರ್ಥ್ಯಗಳು : 100 ಪ್ರಶ್ನೆಗಳು 100 ಅಂಕಗಳು
🧾 ಅರ್ಜಿ ಸಲ್ಲಿಸುವ ವಿಧಾನ :
➡️ ಮೊದಲಿಗೆ, ಅಧಿಕೃತ ವೆಬ್‌ಸೈಟ್ ತೆರೆಯಿರಿ. indianrailways.gov.in
➡️ಇದರ ನಂತರ, ನೀವು ಮುಖಪುಟದಲ್ಲಿರುವ ನೇಮಕಾತಿ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
➡️ನಂತರ ನೀವು ರೈಲ್ವೆ ಐಸೊಲೇಟೆಡ್ ಕೆಟಗರಿಗಳ ನೇಮಕಾತಿ 2025 ಅನ್ನು ಕ್ಲಿಕ್ ಮಾಡಬೇಕು .
➡️ಇದರ ನಂತರ, ರೈಲ್ವೆ ಐಸೊಲೇಟೆಡ್ ಕೆಟಗರಿಗಳ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಬೇಕು.
➡️ನಂತರ ಅಭ್ಯರ್ಥಿಯು "ಆನ್‌ಲೈನ್‌ನಲ್ಲಿ ಅನ್ವಯಿಸು" ಮೇಲೆ ಕ್ಲಿಕ್ ಮಾಡಬೇಕು.
➡️ಇದರ ನಂತರ, ಅಭ್ಯರ್ಥಿಯು ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು.
➡️ನಂತರ ನಿಮ್ಮ ಅಗತ್ಯವಿರುವ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
➡️ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ, ಅದನ್ನು ಅಂತಿಮವಾಗಿ ಸಲ್ಲಿಸಬೇಕು.
➡️ಕೊನೆಯಲ್ಲಿ, ನೀವು ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಂಡು ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
📅 ಪ್ರಮುಖ ದಿನಾಂಕಗಳು :
✅ ಕಿರು ಸೂಚನೆ : 17/12/2025
✅ ಪೂರ್ಣ ಅಧಿಸೂಚನೆ : ಶೀಘ್ರದಲ್ಲೇ ಬರಲಿದೆ
✅ ಪ್ರಾರಂಭ ದಿನಾಂಕ : 30/12/2025
✅ ಕೊನೆಯ ದಿನಾಂಕ : 29/01/2026 ರಾತ್ರಿ 11:59
✅ ಫೆಸ್ ಕೊನೆಯ ದಿನಾಂಕ : 31/01/2026
✅ ಪರೀಕ್ಷಾ ದಿನಾಂಕ : ಶೀಘ್ರದಲ್ಲೇ ಲಭ್ಯವಿದೆ.
🎯 ಸೂಚನೆ: ನೇಮಕಾತಿಗೆ ಸಿದ್ಧತೆ ಪ್ರಾರಂಭಿಸಿ, ಹಿಂದಿನ ಪ್ರಶ್ನೆಪತ್ರಿಕೆ, ಸಿಲೆಬಸ್ ಅಧ್ಯಯನ ಮಾಡಿ ತಕ್ಷಣ ಅರ್ಜಿ ಸಲ್ಲಿಸಿ.





Comments